More

    ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….!

    ನವದೆಹಲಿ: ಕರೊನಾ ಲಸಿಕೆ ಸಂಶೋಧನೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ವರ್ಷಾಂತ್ಯಕ್ಕೆ ರೋಗಿಗಳ ಬಳಕೆಗೆ ಮುಕ್ತವಾಗುವ ಎಲ್ಲ ಸಾಧ್ಯತೆಗಳು ಇವೆ. ಜತೆಗೆ, ಭಾರಿ ಭರವಸೆಯನ್ನು ಮೂಡಿಸಿವೆ.

    ಆಕ್ಸ್​ಫರ್ಡ್​ ವಿವಿ ಲಸಿಕೆಯಂತೂ ಮಾನವರ ಬಳಕೆಗೆ ಸುರಕ್ಷಿತವಾಗಿದೆ ಹಾಗೂ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುತ್ತದೆ ಎಂಬುದು ಸಾಬೀತಾಗಿದೆ. ಇನ್ನು, ಅಮೆರಿಕದ ಮಾಡೆರ್ನಾ ಸಂಸ್ಥೆ ಕೂಡ ಮಾನವರ ಮೇಲೆ ಮೂರನೇ ಹಂತದ ಪ್ರಯೋಗದಲ್ಲಿ ತೊಡಗಿದೆ.
    ಭಾರತದಲ್ಲೂ ಭಾರತ್​ ಬಯೋಟೆಕ್​ನ ಕೊವಾಕ್ಸಿನ್​ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಶುರುವಾಗಿದೆ. ಒಟ್ಟಾರೆ ಹೇಳುವುದಾದರೆ, ಜಗತ್ತಿನಾದ್ಯಂತ 20ಕ್ಕೂ ಅಧಿಕ ಲಸಿಕೆಗಳು ಕ್ಲಿನಿಕಲ್​ ಟ್ರಯಲ್ ಹಂತದಲ್ಲಿವೆ. ಹೊಸ ಭರವಸೆಗೆ ಕಾರಣವಾಗಿವೆ.

    ಇದರ ನಡುವೆಯೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಫೇಸ್​ಬುಕ್​, ವಾಟ್ಸ್ಯಾಪ್​ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಕ್ಸ್​ಫರ್ಡ್​ ಲಸಿಕೆ ಫಲಿತಾಂಶ ಘೋಷಣೆಯಾದ ಬಳಿಕ ಈ ಸುದ್ದಿಗೆ ಭಾರಿ ಬಲ ಬಂದಂತಾಗಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟ; ದೆಹಲಿ, ಅಹಮದಾಬಾದ್​, ದೆಹಲಿಯಿಂದ ಬರುತ್ತಿದೆ ಶುಭಸುದ್ದಿ; ಏನದು? 

    ಇಷ್ಟಕ್ಕೂ ಈ ಸುದ್ದಿಯಲ್ಲಿರುವುದು ಏನೆಂದರೆ, ಕರೊನಾ ಲಸಿಕೆ ಪಡೆದುಕೊಂಡರೆ ನಮ್ಮ ಡಿಎನ್​ಎ ರಚನೆಯೇ ಬದಲಾಗುತ್ತದೆ ಎಂಬುದು. ಜತೆಗೆ, ಇದನ್ನೂ ಕೃತಕ ಬುದ್ಧಿಮತ್ತೆಗೂ ಇದನ್ನು ತಳಕು ಹಾಕಿದ್ದಾರೆ. ಇದು ಫೇಸ್​ಬುಕ್​ನಲ್ಲಿ ಭಾರಿ ವೈರಲ್​ ಆಗಿದೆ. ಕಾರಣ ಇಂಥ ಹೇಳಿಕೆ ನೀಡಿರುವುದು ಅಮೆರಿಕದ ತಜ್ಞ ಮೂಳೆ ವೈದ್ಯೆ ಕೆರ್ರಿ ಮೇಡೇಜ್​.

    ಇನ್ನೊಂದು ಸುದ್ದಿ ಏನೆಂದರೆ, ಕರೊನಾ ಲಸಿಕೆಯಿಂದ 7 ಲಕ್ಷ ಜನರಿಗೆ ಅಡ್ಡ ಪರಿಣಾಮ ಉಂಟಾಗಲಿದೆ ಎಂದು ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇನ್ನು ಮುಂದುವರಿದು 7 ಲಕ್ಷ ಜನ ಸಾಯಲಿದ್ದಾರೆ ಎಂದೇ ವದಂತಿ ಹಬ್ಬಿಸಲಾಗುತ್ತಿದೆ.
    ಇವೆರಡೂ ಸುದ್ದಿಗಳಿಗೆ ಯಾವುದೇ ದಾಖಲೆ, ಆಧಾರಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ. ಏಪ್ರಿಲ್​ನಲ್ಲಿ ನಡೆದಿದ್ದ ಸಂದರ್ಶನದ ಆಯ್ದ ಭಾಗವನ್ನು ತಿರುಚಲಾಗಿದೆ. ಕರೊನಾ ಲಸಿಕೆ ಮಾನವ ಪ್ರಯೋಗಕ್ಕೆ ಸಂಪೂರ್ಣ ಸುರಕ್ಷಿತವಾಗಿರಲಿದೆ. ಇದು ಸಂಶೋಧನೆಯಿಂದ ಗೊತ್ತಾಗಿದೆ ಎಂದು ಗೇಟ್ಸ್​ ಪ್ರತಿಷ್ಠಾನ ಸ್ಪಷ್ಟನೆ ನೀಡಿದೆ.

    ಇದನ್ನೂ ಓದಿ; ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ? 

    ವಿಚಿತ್ರವೆಂದರೆ, ಮೈಕ್ರೋಸಾಫ್ಟ್​ನವರು ಕರೊನಾ ಲಸಿಕೆ ಮೂಲಕ ಮೈಕ್ರೋಚಿಪ್​ಗಳನ್ನು ಮಾನವ ದೇಹದಲ್ಲಿ ಇಂಪ್ಲಾಂಟ್​ ಮಾಡುತ್ತಿದ್ದಾರೆ ಎಂದೂ ವದಂತಿ ಹಬ್ಬಿಸಲಾಗುತ್ತಿದೆ. ಇದನ್ನು ಭಾರತದಲ್ಲಿ 2000 ರೂ. ಹೊಸ ನೋಟು ಬಿಡುಗಡೆಯಾದಾಗ ಅದರಲ್ಲಿ ಮೈಕ್ರೋಚಿಪ್​ ಅಳವಡಿಸಲಾಗಿದೆ ಎಂಬ ವದಂತಿಗೆ ಇದನ್ನು ಹೋಲಿಸಬಹುದಷ್ಟೇ…!

    ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts