More

    ಅಮೆರಿಕ ಸರ್ಕಾರಕ್ಕೇ 41 ಕೋಟಿ ರೂ. ಮುಂಡಾಯಿಸಿದ ಮುಕುಂದ್​ ಮೋಹನ್​; ಕರೊನಾ ಸಂಕಷ್ಟದಲ್ಲಿ ಖತರ್ನಾಕ್​ ಐಡಿಯಾ…!

    ವಾಷಿಂಗ್ಟನ್​: ಕರೊನಾ ಸಂಕಷ್ಟದ ಕಾಲದಲ್ಲಿ ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಎಲ್ಲ ದೇಶಗಳಲ್ಲೂ ಒಂದಿಲ್ಲೊಂದು ಯೋಜನೆಗಳನ್ನು ಘೋಷಿಸಲಾಗಿದೆ. ಅಂತೆಯೇ ಅಮೆರಿಕ ಕೂಡ ಭಾರಿ ಪ್ರಮಾಣದ ಆರ್ಥಿಕ ನೆರವು ಪ್ರಕಟಿಸಿದೆ.

    ಇದನ್ನೇ ದಾಳವಾಗಿಸಿಕೊಂಡ ಮುಕುಂದ್​ ಮೋಹನ್​ ಎಂಬಾತ ಬರೋಬ್ಬರಿ 5.5 ಮಿಲಿಯನ್​ ಡಾಲರ್​ ( ಅಂದಾಜು 41 ಕೋಟಿ ರೂ.) ವಂಚಿಸಿದ್ದಾನೆ.
    ಅಮೆರಿಕ ಸರ್ಕಾರ ಸಣ್ಣ ಉದ್ದಿಮೆಗಳು ಕಾರ್ಮಿಕರನ್ನು ಉಳಿಸಿಕೊಳ್ಳಲು ಪೇಚೆಕ್​ ಪ್ರೊಟೆಕ್ಷನ್​ ಪ್ರೋಗ್ರಾಂ ಆರಂಭಿಸಿದೆ. ಸಂಬಳ ಕೊಡಲಾಗದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯುವ ಪರಿಸ್ಥಿತಿ ಎದುರಾದಲ್ಲಿ ಈ ಸಾಲ ಸೌಲಭ್ಯ ಪಡೆಯಬಹುದು.

    ಇದನ್ನೂ ಓದಿ; ಪ್ರಸಾದಕ್ಕಾಗಿ ಇಟ್ಟಿದ್ದ ಹಣ್ಣನ್ನು ತಿಂದ ಮಕ್ಕಳಿಗೆ ಇದೆಂಥಾ ಗತಿ…! ಮೆಚ್ತಾನಾ ಭಗವಂತ..? 

    ಅಂತೆಯೇ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನೆರವಾಗಲು ಬಿಲ್ಡ್​ ಡೈರೆಕ್ಟ್​ ಡಾಟ್​ ಕಾಮ್​ ಎಂಬ ಸಂಸ್ಥೆ ನಡೆಸುತ್ತಿರುವ ಮುಕುಂದ್​ ಮೋಹನ್​ ಈ ಸಾಲ ಸೌಲಭ್ಯ ಪಡೆದುಕೊಳ್ಳಲು ಆರು ಕಂಪನಿಗಳ ಹೆಸರಿನಲ್ಲಿ ಎಂಟು ಅರ್ಜಿಗಳನ್ನು ಸಲ್ಲಿಸಿದ್ದ. ಆದರೆ, ವಾಸ್ತವದಲ್ಲಿ ಆತನ ಕಂಪನಿಯಲ್ಲಿ ಯಾರೂ ಉದ್ಯೋಗಿಗಳೇ ಇರಲಿಲ್ಲ.
    ಬಿಲ್ಡ್​ಟೆಕ್​ ಕಂಪನಿಯನ್ನು ಮೇ ತಿಂಗಳಲ್ಲಷ್ಟೇ ಆತ ಸ್ವಾಧೀನ ಪಡಿಸಿಕೊಂಡಿದ್ದ. ಆದರೆ, ಕಳೆದ ವರ್ಷ 2.3 ಮಿಲಿಯನ್​ ಡಾಲರ್​ಗೂ ಹೆಚ್ಚು ಮೊತ್ತವನ್ನು ಕಾರ್ಮಿಕರಿಗೆ ಸಂಬಳವಾಗಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದ.

    ಇದನ್ನೂ ಓದಿ; ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ 

    ಸರ್ಕಾರದಿಂದ ದೊರೆತ 2.31 ಡಾಲರ್​ ಹಣವನ್ನು ತನ್ನ ವೈಯಕ್ತಿಕ ಷೇರು ಮಾರುಕಟ್ಟೆಯ ಖಾತೆಗೆ ವರ್ಗಾಯಿಸಿಕೊಂಡಿದ್ದು ಕೂಡ ತನಿಖೆಯಲ್ಲಿ ಗೊತ್ತಾಗಿದೆ. ಈತನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಮುಕುಂದ್​ ಮೋಹನ್​ ಈ ಮೊದಲು ಮೈಕ್ರೋಸಾಫ್ಟ್​ ಹಾಗೂ ಅಮೆಜಾನ್​ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗಿ ತನ್ನ ಲಿಂಕ್ಡ್​ ಇನ್​ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೇಳಿಕೊಂಡಿದ್ದಾನೆ.

    ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts