More

    ಅಣ್ಣೂರು ಹೊಸಳ್ಳಿಯಲ್ಲಿ ಕಾಡಾನೆ ದಾಂಧಲೆ

    ಎಚ್.ಡಿ.ಕೋಟೆ: ತಾಲೂಕಿನ ಅಣ್ಣೂರು ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ಕಾಡಾನೆ ನುಗ್ಗಿ ದಾಂಧಲೆ ನಡೆಸಿ, ಫಸಲು ನಾಶ ಮಾಡಿದೆ.

    ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಅರಣ್ಯ ವ್ಯಾಪ್ತಿಯಿಂದ ಬಂದ ಒಂಟಿ ಸಲಗ ಪ್ರಭುಸ್ವಾಮಿ ಎಂಬುವವರ ಬೈಕ್ ಜಖಂಗೊಳಿಸಿದೆ. ಷಡಕ್ಷರಿ ಅವರ ಶುಂಠಿ ಬೆಳೆ ನಾಶ ಮಾಡಿದೆ. ಜಮೀನಿಗೆ ಅಳವಡಿಸಿದ್ದ ಕಲ್ಲು ಕಂಬಗಳು ಮುರಿದು ಹಾಕಿದೆ.

    ಅಣ್ಣೂರು ಹೊಸಳ್ಳಿ ಗ್ರಾಮದ ತಾತಯ್ಯ ದೇವಸ್ಥಾನದ ಬಳಿ ಸಲಗ ನಿಂತಿರುವುದನ್ನು ಕಂಡ ಗ್ರಾಮದ ಷಡಕ್ಷರಿ ಗಾಬರಿಗೊಂಡು ಕಿರುಚಾಡಿದ್ದಾರೆ. ಅಕ್ಕಪಕ್ಕದ ಮನೆಯವರು ಹೊರಗೆ ಬಂದು ನೋಡಿ ತಕ್ಷಣ ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಕಾಡಿಗಟ್ಟಿದರು.

    ಸ್ಥಳಕ್ಕೆ ಭೇಟಿ ನೀಡಿದ ಎಸಿಎಫ್ ದಯಾನಂದ್, ಆರ್‌ಎಫ್‌ಒ ಅಭಿಷೇಕ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಆನೆ ಹಾವಳಿ ತಪ್ಪಿಸಲು ಕಾಡಂಚಿನ ಭಾಗದಲ್ಲಿ ಸೋಲಾರ್ ತಂತಿ ಅಳವಡಿಸಿದ್ದರೂ ಆನೆ ಹಲವಾರು ಬಾರಿ ಗ್ರಾಮಕ್ಕೆ ನುಗ್ಗಿ ಫಸಲು ನಾಶ ಮಾಡುತ್ತಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

    ಎಸಿಎಫ್ ದಯಾನಂದ್ ಮಾತನಾಡಿ, ಗ್ರಾಮದಲ್ಲಿ ಹಾನಿಗೊಳಗಾಗಿರುವುದನ್ನು ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಕಾಡಂಚಿನ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts