8ವರ್ಷದ ಗಂಡು ಹುಲಿ ಸೆರೆ

1 Min Read
8ವರ್ಷದ ಗಂಡು ಹುಲಿ ಸೆರೆ

ಎಚ್.ಡಿ.ಕೋಟೆ: ಅಂತರಸಂತೆ ಅರಣ್ಯ ವಲಯದ ಮಗ್ಗೆ ಗ್ರಾಮದಲ್ಲಿ 8 ವರ್ಷದ ಗಂಡು ಹುಲಿಯನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ.

ಮಗ್ಗೆ ಮಳಲಿ ಗ್ರಾಮದ ಬಸವರಾಜು ಎಂಬುವವರ ಬಾಳೆ ತೋಟದಲ್ಲಿ ಹುಲಿ ಇರುವ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಂಗಸ್ವಾಮಿ, ಪಶುವೈದ್ಯ ಡಾ.ರಮೇಶ್, ಆರ್‌ಎಫ್‌ಒ ಭರತ್, ಮಧು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಭಿಮನ್ಯು, ಭೀಮಾ ಸಾಕಾನೆಗಳನ್ನು ಬಳಸಿ ಸೆರೆಹಿಡಿಯಲಾಯಿತು.

ಅರವಳಿಕೆ ತಜ್ಞ ಡಾ.ರಮೇಶ್ ಚುಚ್ಚುಮದ್ದು ನೀಡಿ ಹುಲಿ ಪ್ರಜ್ಞೆ ತಪ್ಪುವಂತೆ ಮಾಡಿದರು. ನಂತರ ಹುಲಿಯನ್ನು ಬೋನಿನೊಳಗೆ ಹಾಕಿ ಪ್ರಜ್ಞೆ ಬಂದ ನಂತರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಯಿತು ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

See also  371(ಜೆ)ಗೆ ವಿರೋಧ ಖಂಡನೀಯ
Share This Article