More

    ಬಿಜೆಪಿ ಶೇರ್​ ಮಾಡಿರುವ ವಿಡಿಯೋ ತೆಗೆದುಹಾಕಲು ‘ಎಕ್ಸ್​​​’ಗೆ ಚುನಾವಣಾ ಆಯೋಗದ ನಿರ್ದೇಶನ

    ನವದೆಹಲಿ: ಕರ್ನಾಟಕದ ಬಿಜೆಪಿ ಘಟಕ ತನ್ನ ಎಕ್ಸ್​ (ಈ ಹಿಂದೆ ಟ್ವಿಟರ್​) ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು ತಕ್ಷಣವೇ ತೆಗೆದುಹಾಕುವಂತೆ ಭಾರತದ ಚುನಾವಣಾ ಆಯೋಗ ಎಕ್ಸ್​ ಕಂಪನಿಗೆ ಪತ್ರದ ಮೂಲಕ ಕೇಳಿದೆ.

    ಕರ್ನಾಟಕದ ಬಿಜೆಪಿ ಘಟಕ ಮಾಡಿರುವ ಪೋಸ್ಟ್​ ಕಾನೂನಿನ ಚೌಕಟ್ಟಿನ ಉಲ್ಲಂಘನೆಯಾಗಿದೆ. ಆದ್ದರಿಂದ ಆ ಪೋಸ್ಟ್​ ಅನ್ನು ತಕ್ಷಣವೇ ತೆಗೆದುಹಾಕಲು ‘ಎಕ್ಸ್​’ ಗೆ ನಿರ್ದೇಶನ ನೀಡಲಾಗಿದೆ. ಇದನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪತ್ರದ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಈಗಾಗಲೇ ದಾಖಲಾಗಿರುವ ಎಫ್​ಐಆರ್​ ಪ್ರತಿಯನ್ನು ಸಹ ಲಗತ್ತಿಸಲಾಗಿದೆ.

    ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79(3)(ಬಿ) ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು-2021 ನಿಯಮ 3(1)(ಡಿ) ಯಪ್ರಕಾರ ಆಕ್ಷೇಪಾರ್ಹ ಪೋಸ್ಟ್​ ಅನ್ನು ತೆಗೆದುಹಾಕಲು 05.05.2024 ರಂದು ಬೆಂಗಳೂರಿನ ಸೈಬರ್ ಕ್ರೈಂ ವಿಭಾಗದ ಮೂಲಕ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಈಗಾಗಲೇ ‘ಎಕ್ಸ್​’ ಗೆ ನಿರ್ದೇಶನ ನೀಡಿರುವುದನ್ನು ನಿಮ್ಮ ಗಮನಕ್ಕೆ ತರಲಾಗಿದೆ. ಆದಾಗ್ಯೂ, ಆ ಪೋಸ್ಟ್ ಅನ್ನು ಇನ್ನೂ ತೆಗೆದುಹಾಕಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

    ಬಿಜೆಪಿ ಶೇರ್​ ಮಾಡಿರುವ ವಿಡಿಯೋ ತೆಗೆದುಹಾಕಲು 'ಎಕ್ಸ್​​​'ಗೆ ಚುನಾವಣಾ ಆಯೋಗದ ನಿರ್ದೇಶನ

    ಅಂದಹಾಗೆ ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋದಲ್ಲಿ ಮುಸ್ಲಿಂ ಮೀಸಲಾತಿಯನ್ನು ಅಣಕಿಸಲಾಗಿದೆ. (ಏಜೆನ್ಸೀಸ್​)

    ಭಾಮಾ ದಾಂಪತ್ಯದಲ್ಲಿ ಬಿರುಗಾಳಿ! ಇನ್ಮುಂದೆ ಇದೇ ನನ್ನ ಏಕೈಕ ಆಯ್ಕೆ ಎಂದು ಡಿವೋರ್ಸ್​ ಖಚಿತಪಡಿಸಿದ ನಟಿ

    ಗಂಡನಿಂದ ಡಿವೋರ್ಸ್ ಪಡೆಯಲು​ ಸಲಹೆ ಕೇಳಿದ ಯುವತಿಗೆ ಚಿರಂಜೀವಿ ಪುತ್ರಿ ಕೊಟ್ಟ ಉತ್ತರ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts