ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್; ವಿಸ್ಕಿ ಎರಚಿ ಹಲ್ಲೆ ನಡೆಸಿದ ಆರೋಪ!

Untitled-1
Published on

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ತಳುಕು ಹಾಕಿಕೊಂಡು ಮೇಲಿಂದ ಮೇಲೆ ಸುದ್ದಿಯಾಗಿ ಬಳಿಕ ನೇಪಥ್ಯಕ್ಕೆ ಸರಿದಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಇದು ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಈಗ ಅವರ ಮೇಲೆ ಕೇಸ್​ ಬೀಳಲು ಕಾರಣ ವಿಸ್ಕಿ ಎರಚಿ ಹಲ್ಲೆ ಮಾಡಿದ್ದು. ಹೌದು.. ವಿಸ್ಕಿ ಎರಚಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಎಫ್​ಐಆರ್ ದಾಖಲಾಗಿದೆ.

ಬೆಂಗಳೂರಿನ ಕಬ್ಬನ್​ಪಾರ್ಕ್​ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ಕೋರ್ಟ್ ಆದೇಶದನ್ವಯ ಅವರು ಈ ಕ್ರಮ ಜರುಗಿಸಿದ್ದಾರೆ. ಮಾಡೆಲ್ ವಂದನಾ ಜೈನ್ ಎಂಬಾಕೆ ನೀಡಿದ್ದ ದೂರಿನನ್ವಯದ ಪ್ರಕರಣ ಇದಾಗಿದೆ. ಈ ಮೂಲಕ ಸಂಜನಾ-ವಂದನಾ ನಡುವಿನ ಹಳೇ ಗಲಾಟೆ ಕುರಿತ ಕೇಸ್​ಗೆ ಮರುಜೀವ ಬಂದಂತಾಗಿದೆ.

2019ರಲ್ಲಿ ಲ್ಯಾವೆಲ್ಲೆ ರಸ್ತೆಯ ಕ್ಲಬ್​ವೊಂದರಲ್ಲಿ ಗಲಾಟೆ ನಡೆದಿತ್ತು. ಇಲ್ಲಿ ವಂದನಾ-ಸಂಜನಾ ನಡುವೆ ಗಲಾಟೆ ನಡೆದಿತ್ತು. ವಂದನಾ ಸ್ನೇಹಿತನ ಜತೆ ವಂದನಾ ವಿರುದ್ಧವೇ ಅವಹೇಳನಕಾರಿಯಾಗಿ ಸಂಜನಾ ಮಾತನಾಡಿದ್ದರು ಎನ್ನಲಾಗಿದ್ದು, ನಂತರ ನಡೆದ ಜಗಳದಲ್ಲಿ ಸಂಜನಾ ತನಗೆ ವಿಸ್ಕಿ ಎರಚಿ ಹಲ್ಲೆ ಮಾಡಿ, ಕಣ್ಣಿಗೂ ಗಾಯ ಮಾಡಿದ್ದರು ಎಂಬುದಾಗಿ ವಂದನಾ ದೂರು ನೀಡಿದ್ದರು. ಘಟನೆ ಬಳಿಕ ಸಂಜನಾ ಬೆದರಿಕೆಯನ್ನೂ ಹಾಕಿದ್ದರು ಎಂಬ ಆರೋಪವೂ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನೀಡಿದ ಸೂಚನೆ ಮೇರೆಗೆ ಪೊಲೀಸರು ಸಂಜನಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net