
Film Actor : ಒಳ್ಳೆಯ ಹಿನ್ನೆಲೆಯಲ್ಲಿ ಬಂದು ಸಿನಿಮಾ ನಾಯಕ ಮತ್ತು ನಟರಾಗುವವರ ಬಗ್ಗೆ ಹೆಚ್ಚಿಗೆ ಹೇಳಲು ಏನೂ ಇರುವುದಿಲ್ಲ. ಆದರೆ, ಕೆಲ ನಟರು ಯಾವುದೇ ಹಿನ್ನೆಲೆ ಇಲ್ಲದೆ ಬಂದು ತಾವು ಮಾಡುವ ಪ್ರತಿಯೊಂದು ಚಿತ್ರದಲ್ಲೂ ನಟನೆಯ ಮೂಲಕ ಒಳ್ಳೆಯ ಹೆಸರು ಮಾಡುತ್ತಾರೆ. ಅಂಥವರಲ್ಲಿ ತಮಿಳು ನಟ ಸೂರಿ ಕೂಡ ಒಬ್ಬರು. ಇದೀಗ, ಸೂರಿ ಅವರು ತಮ್ಮ ಹೊಸ ಚಿತ್ರದ ಪ್ರೀ ರಿಲೀಸ್ ಈವೆಂಟ್ ವೇಳೆ ಮಾತನಾಡುತ್ತಾ ಹಳೆಯ ಘಟನೆಯನ್ನು ನೆನೆದು ಭಾವುಕರಾದರು.
1998 ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಸೂರಿ ಸುಮಾರು ಆರು ವರ್ಷಗಳ ಕಾಲ ಅನೇಕ ಪಾತ್ರಗಳನ್ನು ಮಾಡಿದರು. ಆದರೆ, ಯಾರೊಬ್ಬರು ಅವರನ್ನು ಗುರುತಿಸಲಿಲ್ಲ. 2004ರಿಂದ ಹಾಸ್ಯ ಪಾತ್ರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಹಾಸ್ಯನಟರಾಗಿ ಅವರು ಎಲ್ಲ ಸ್ಟಾರ್ ಹೀರೋಗಳೊಂದಿಗೆ ಅನೇಕ ಚಲನಚಿತ್ರಗಳನ್ನು ಮಾಡಿದರು. 2022 ರವರೆಗೆ, ಅಂದರೆ, ಸುಮಾರು 18 ವರ್ಷಗಳ ಕಾಲ ಹಾಸ್ಯ ಪಾತ್ರಗಳನ್ನು ಮಾಡಿದರು.
ಯಾವುದೇ ಚಿತ್ರದಲ್ಲಿಯೂ ಸೂರಿ ಅವರನ್ನು ಎಲ್ಲರೂ ಹಾಸ್ಯನಟನನ್ನಾಗಿ ನೋಡುತ್ತಿದ್ದರು. ಆದರೆ, ತಮಿಳು ಸ್ಟಾರ್ ನಿರ್ದೇಶಕ ವೆಟ್ರಿಮಾರನ್ ಮಾತ್ರ ಸೂರಿ ಅವರಲ್ಲಿ ಓರ್ವ ಅದ್ಭುತ ನಟನನ್ನು ಕಂಡರು. ಅವರು ‘ವಿದುತಲೈ ಭಾಗ 1’ ಚಿತ್ರದ ಮೂಲಕ ಸೂರಿಯನ್ನು ನಾಯಕನನ್ನಾಗಿ ಪರಿಚಯಿಸಿದರು. ನಂತರ, ಸೂರಿ ‘ಗರುಡನ್’, ‘ಕೊಟ್ಟುಕಲಿ’, ‘ವಿದುತಲೈ ಭಾಗ 2’ ಮತ್ತು ‘ಬಡವ’ ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಗಮನವನ್ನು ಸೆಳೆದರು.
ಇದನ್ನೂ ಓದಿ: IPL vs PSL : ಜಗತ್ತಿನೆದರು ತೀವ್ರ ಮುಖಭಂಗವಾದರೂ ಮತ್ತೆ ಭಾರತದ ಜತೆ ಸ್ಪರ್ಧೆಗಿಳಿದ ಪಾಕ್!
ಇದೀಗ ಸೂರಿ ಅವರು ‘ಮಾಮನ್’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ, ತಮ್ಮ ಮೊದಲ ದುಡಿಮೆ ಮತ್ತು ಅದರಿಂದ ಕಲಿತ ಜೀವನ ಪಾಠಗಳ ಬಗ್ಗೆ ಸೂರಿ ಮಾತನಾಡಿದರು.
ನಾನು ತಿರುಪ್ಪೂರಿನಲ್ಲಿ 20 ರೂ.ಗೆ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಒಂದು ವಾರ ಪೂರ್ತಿ ಕಷ್ಟಪಟ್ಟು ಕೆಲಸ ಮಾಡಿದರೆ 140 ರೂ. ಗಳಿಸುತ್ತಿದ್ದೆ. ಅದರಲ್ಲಿ ಅರ್ಧ ಖರ್ಚು ಮಾಡಿ ಉಳಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದೆ. ಆಗ ನಾನು ಜೀವನದ ಪಾಠಗಳನ್ನು ಕಲಿತೆ. ನನಗೆ ಜೀವನ ಏನು ಅಂತ ಕಲಿಸಿದ್ದೆ ತಿರುಪ್ಪೂರು ಮಣ್ಣು ಎಂದು ಸೂರಿ ಭಾವುಕಾರದರು.
“I stated as a daily Wager in Tiruppur & my wages was ₹20 per day. Weekly I get ₹140, I will spend ₹70 & send back ₹70 to my home. I got to learn about the life lessons there🫶”
Growth of #Soori🫡♥️pic.twitter.com/2PflFhYz4o
— AmuthaBharathi (@CinemaWithAB) May 14, 2025
ಅಂದು 20 ರೂ.ಗೆ ಕೆಲಸ ಮಾಡುತ್ತಿದ್ದ ಸೂರಿ ಅವರು ಇದೀಗ ಕಷ್ಟಪಟ್ಟು ದುಡಿದು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ಅಂದಹಾಗೆ, ಸ್ಟಾರ್ ನಟ ಶಶಿಕುಮಾರ್ ನಟನೆಯ ಗರುಡನ್ ಸಿನಿಮಾದಲ್ಲಿ ಸೂರಿ ಅವರು ಬರೋಬ್ಬರಿ 8 ಕೋಟಿ ರೂ.ವರೆಗೂ ಸಂಭಾವನೆ ಪಡೆದಿದ್ದಾರೆ ಎಂದು ಈ ಹಿಂದೆ ಬಹಳ ಸುದ್ದಿಯಾಗಿತ್ತು. ಅದ್ಯ ಸೂರಿ ಅವರ ಸಂಭಾವನೆ ಕೋಟಿ ರೂ. ಮಟ್ಟದಲ್ಲಿದೆ. (ಏಜೆನ್ಸೀಸ್)
ವಿವಾದದ ಸುಳಿಯಲ್ಲಿ ಸಿಲುಕಿದ ಪಾಕ್ ಹೈಕಮಿಷನರ್… ಯುವತಿಯೊಂದಿಗಿರುವ ವಿಡಿಯೋಗಳು ಲೀಕ್! Pakistan High Commissioner