

ಮಧುರೈ: ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ನೀರಿನ ಬದಲು ಸ್ಪಿರಿಟ್ ಸೇವಿಸಿದ ಕೆಲ ಸಮಯದ ಬಳಿಕ ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಇದನ್ನೂ ಓದಿ: ಅಪ್ಪಿತಪ್ಪಿ ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿದರೆ ದುರ್ಬಳಕೆ ಆಗಬಹುದು ನಿಮ್ಮ ಮೊಬೈಲ್ ನಂಬರ್!
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಗಲ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ 9 ವರ್ಷದ ಬಾಲಕಿಯನ್ನು ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗಾಗಿ ದಾಖಲಿಸಲಾಗಿತ್ತು. ಈ ವೇಳೆ ತಾಯಿಯೇ ತಪ್ಪಾಗಿ ಬಾಲಕಿಗೆ ನೀರಿನ ಬದಲು ಸ್ಪಿರಿಟ್ ಕುಡಿಸಿದ್ದಾಳೆ.
ಕೂಡಲೇ, ರುಚಿಯಲ್ಲಿನ ವ್ಯತ್ಯಾಸವನ್ನು ಅರಿತ ಬಾಲಕಿ ಅದನ್ನು ಉಗುಳಿದ್ದಾಳೆ. ಇದಾದ ಸ್ವಲ್ಪ ಸಮಯದ ನಂತರ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ನರ್ಸ್‌ಗಳ ನಿರ್ಲಕ್ಷ್ಯದಿಂದ ಮಗಳ ಹಾಸಿಗೆಯ ಬಳಿ ಇಟ್ಟಿದ್ದ ಸ್ಪಿರಿಟ್ನ್ನು ತಾನು ಕುಡಿಸಿದ್ದೇನೆ. ಹಾಗಾಗಿಯೇ ಅವಳು ಮೃತಪಟ್ಟಿದ್ದಾಳೆ ಎಂದು ತಾಯಿ ಆರೋಪಿಸಿದ್ದಾಳೆ.
ಇದನ್ನೂ ಓದಿ: ಮಹಿಳೆಯರ ಚಿನ್ನಾಭರಣ ದೋಚಿ ಹೊಸ ಸಿನಿಮಾ ನಿರ್ಮಾಣ: ಪತ್ನಿ, ಪುತ್ರನ ಸಮೇತ ಸಿಕ್ಕಿಬಿದ್ದ ನಟ!
ಆದರೆ, ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ವೈದ್ಯರು ಆಕೆಯ ಸಾವಿಗೆ ಸ್ಪಿರಿಟ್ ಸೇವನೆ ಕಾರಣವಲ್ಲ. ಮೆದುಳಿನ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)