

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಕ್ರೇಜ್ ಜನರಲ್ಲಿ ಹೆಚ್ಚಾಗುತ್ತಿದ್ದು ಚಾಟ್ ಜಿಪಿಟಿಯ ಪ್ರಾಬಲ್ಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ. ಆದರೆ ಇದನ್ನೇ ಕೆಲ ಕಿಲಾಡಿಗಳು ದುರ್ಬಳಕೆ ಮಾಡಿಕೊಳ್ಳಲು ದಾರಿ ಹುಡುಕಿಕೊಂಡಿದ್ದಾರೆ.
ಅವರು ಪ್ಲೇಸ್ಟೋರ್ನಲ್ಲಿ ನಕಲಿ ಆ್ಯಪ್ ತಯಾರಿಸಿ ಅಪ್ಲೋಡ್ ಮಾಡುತ್ತಿದ್ದು ಇವುಗಳನ್ನು ಅಪ್ಪಿ ತಪ್ಪಿ ಜನ ಡೌನ್ಲೋಡ್ ಮಾಡಿದರೆ ಅವರ ಮಾಹಿತಿ ದುರ್ಬಳಕೆ ಆಗುವುದು ಖಚಿತ. ಚಾಟ್ ಜಿಪಿಟಿ ಎಂದು ಹೇಳಿಕೊಳ್ಳುವ ಆ್ಯಪ್ಗಳು ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು ಅವುಗಳು ಅನೇಕ ಮಾಲ್‌ವೇರ್‌ಗಳನ್ನು ಹೊಂದಿರುತ್ತವೆ. ಇವನ್ನು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ವಿನ್ಯಾಸ ಮಾಡಲಾಗಿರುತ್ತದೆ.
ಇದನ್ನೂ ಓದಿ: ವಿಚ್ಛೇದಿತನ ಪ್ರೇಮ ನಿವೇದನೆಗೆ ‘ನೋ’ ಎಂದ ಚಾಟ್ಬಾಟ್!
ಮಾಲ್‌ವೇರ್ ಒಂದು ಹಾನಿಕಾರಕ ಸಾಫ್ಟ್‌ವೇರ್ ಆಗಿದ್ದು ಅದು ಹಾನಿಯನ್ನು ಉಂಟುಮಾಡಬಹುದು ಅಥವಾ ನಿಮ್ಮ ಫೋನ್‌ನಿಂದ ಮಾಹಿತಿಯನ್ನು ಕದಿಯಬಹುದು. ಈ ಸಂದರ್ಭದಲ್ಲಿ, ಮಾಲ್‌ವೇರ್ ಚಾಟ್‌ಜಿಪಿಟಿ ಎಂಬ ಜನಪ್ರಿಯ AI ಚಾಟ್‌ಬಾಟ್‌ನಂತೆ ಅಥವಾ ಇನ್ಯಾವುದೋ ರೂಪದಲ್ಲಿ ನಟಿಸುತ್ತಿದೆ, ಇದನ್ನು ಅನೇಕ ಜನರು ತಿಳಿಯದೇ ಬಳಸುತ್ತಾರೆ.
ಪಾಲೊ ಅಲ್ಲೊ ನೆಟ್‌ವರ್ಕ್ಸ್ ಘಟಕ 42ರ ಸಂಶೋಧಕರು ಈ ಮಾಲ್‌ವೇರ್ ಅನ್ನು ಕಂಡುಹಿಡಿದಿದ್ದಾರೆ. OpenAI GPT-3.5 ಮತ್ತು GPT-4 ಅನ್ನು ಬಿಡುಗಡೆ ಮಾಡಿದ ಸಮಯದಲ್ಲೇ ಇವು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ ಎಂದು ಅವರು ಕಂಡುಕೊಂಡಿದ್ದಾರೆ. ಈ ಮಾಲ್‌ವೇರ್ ರೂಪಾಂತರಿಗಳು ನಿರ್ದಿಷ್ಟವಾಗಿ ChatGPT ಟೂಲ್ ಅನ್ನು ಬಳಸಲು ಆಸಕ್ತಿ ಹೊಂದಿರುವ ಜನರನ್ನು ಗುರಿಯಾಗಿಸುತ್ತವೆ.
ಎರಡು ರೀತಿಯ ಸಕ್ರಿಯ ಮಾಲ್‌ವೇರ್‌ಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಒಂದನ್ನು ಮೀಟರ್‌ಪ್ರಿಟರ್ ಟ್ರೋಜನ್ ಎಂದು ಕರೆಯಲಾಗುತ್ತದೆ ಮತ್ತು ಅದು "ಸೂಪರ್‌ಜಿಪಿಟಿ" ಎಂಬ ಅಪ್ಲಿಕೇಶನ್‌ನಂತೆ ತನ್ನನ್ನು ತಾನು ತೋರಿಸುತ್ತದೆ. ಇತರ ಮಾಲ್‌ವೇರ್ ನಿಜವಾದ ಚಾಟ್ ಜಿಪಿಟಿ ಅಪ್ಲಿಕೇಶನ್‌ನಂತೆ ಕಾಣಿಸಿಕೊಳ್ಳುತ್ತವೆ. ಅದರೆ ಇವು ರಹಸ್ಯವಾಗಿ ಥೈಲ್ಯಾಂಡ್‌ನಲ್ಲಿರುವ ದುಬಾರಿ ಫೋನ್ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುತ್ತವೆ.
ಸಂಶೋಧಕರು ದುರುದ್ದೇಶಪೂರಿತ Android ಪ್ಯಾಕೇಜ್ ಕಿಟ್ (APKI ಮಾದರಿಯನ್ನು ಸಹ ನೋಡಿದ್ದು, ಇವು Android ಸಾಧನಗಳಲ್ಲಿ ಆಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಬಳಸುವ ಒಂದು ರೀತಿಯ ಫೈಲ್ ಆಗಿದೆ. ಈ ದುರುದ್ದೇಶಪೂರಿತ APK ಮೂಲ ಅಪ್ಲಿಕೇಶನ್‌ನ ಮಾರ್ಪಡಿಸಿದ ಆವೃತ್ತಿಯಾಗಿದೆ. ಯಾರಾದರೂ ಟ್ರಿಕ್‌ಗೆ ಬಲಿಯಾಗಿ ಈ ದುರುದ್ದೇಶಪೂರಿತ ಅ್ಯಪ್ ಇನ್ಸ್ಟಾಲ್ ಮಾಡಿದರೆ, ಇದು Android ಫೋನ್ಅನ್ನು ರಿಮೋಟ್‌ನಲ್ಲಿ ನಿಯಂತ್ರಿಸಲು ಅನುಮೋದಿತಿಸುತ್ತದೆ.
ಇದಲ್ಲದೆ, ಸಂಶೋಧಕರು APK ಫಾರ್ಮ್ಯಾಟ್‌ನಲ್ಲಿ ಮಾಲ್‌ವೇರ್ ಮಾದರಿಗಳ ಮತ್ತೊಂದು ಗುಂಪನ್ನು ಕಂಡುಹಿಡಿದಿದ್ದಾರೆ. ಈ ಮಾದರಿಗಳು ಮೇಲ್ನೋಟಕ್ಕೆ ಚೆನ್ನಾಗಿಯೇ ಕಾಣಿಸುತ್ತವೆ. ChatGPT ಕುರಿತು ಮಾಹಿತಿ ಇರುವ ವೆಬ್‌ಪುಟವನ್ನು ತೋರಿಸುತ್ತದೆ. ಆದಾಗ್ಯೂ, ವರದಿಯಲ್ಲಿ ಬಹಿರಂಗಪಡಿಸಿದಂತೆ ಈ ಆ್ಯಪ್ ತಯಾರಕರು ದುರುದ್ದೇಶ ಹೊಂದಿದ್ದಾರೆ.
ಹೀಗಾಗಿ ಚಾಟ್ ಜಿಪಿಟಿ ಆ್ಯಪ್ಅನ್ನು ಜನರು ತಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡುವ ಮೊದಲು ಸಾವಿರ ಬಾರಿ ಪರಿಶೀಲನೆ ಮಾಡಿದರೆ ಒಳ್ಳೆಯದು. ಯಾವ ಆ್ಯಪ್ ಮಾಲ್‌ವೇರ್ ಎನ್ನುವ ಸುಳಿವು ಎಷ್ಟೇ ಪರಿಶೀಲನೆ ಮಾಡಿದರೂ ಸಿಗದಿದ್ದರೆ, ಓಪನ್ ಎಐ ಸಂಸ್ಥೆಯ ವೆಬ್ಸೈಟ್ ಮೂಲಕ ಚಾಟ್ ಜಿಪಿಟಿ ಬಳಸುವುದು ಒಳ್ಳೆಯದು. (ಏಜೆನ್ಸೀಸ್)