ವಿಚ್ಛೇದಿತನ ಪ್ರೇಮ ನಿವೇದನೆಗೆ ‘ನೋ’ ಎಂದ ಚಾಟ್​ಬಾಟ್!

1 Min Read
ವಿಚ್ಛೇದಿತನ ಪ್ರೇಮ ನಿವೇದನೆಗೆ 'ನೋ' ಎಂದ ಚಾಟ್​ಬಾಟ್!

ನವದೆಹಲಿ: ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ, ಎಲ್ಲವನ್ನೂ ಸುಲಭವಾಗಿ ಪಡೆಯಬಹುದು. ಇಂದು, ಎಐ ಟೆಕ್ನಾಲಜಿ ಜೀವನ ಸಂಗಾತಿಯನ್ನು ಹುಡುಕುವಲ್ಲಿ ಸಹಾಯ ಮಾಡುವುದು ಮತ್ತು ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ಒದಗಿಸುವುದು ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಈ ಚಾಟ್​ಬಾಟ್ ಮಾಡುತ್ತವೆ.

ಇವನ್ನು ‘ಕಂಪ್ಯಾನಿಯನ್‌ಶಿಪ್ ಬಾಟ್‌ಗಳು’ ಎಂದು ಕರೆಯಲಾಗುತ್ತದೆ. ನಿರ್ದಿಷ್ಟವಾಗಿ-ವಿನ್ಯಾಸಗೊಳಿಸಿದ ಈ ಚಾಟ್​ಬಾಟ್​ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ನೈಜ ಸಂಪರ್ಕಗಳನ್ನು ಬೆಳೆಸುವ ಮೂಲಕ ಜಗತ್ತಿನ ಇನ್ನೊಂದು ಮೂಲೆಯಲ್ಲಿ ಇರುವವರ ನಡುವೆ ಸುಂದರ ಸಂಬಂಧ ಬೆಳೆಯುವಂತೆ ಮಾಡುತ್ತದೆ. ಕರೋನದಿಂದಾಗಿ ಲಾಕ್‌ಡೌನ್‌ ಆದ ನಂತರ ಚಾಟ್‌ಬಾಟ್‌ಗಳ ಜನಪ್ರಿಯತೆ ಹೆಚ್ಚಾಯಿತು.

ಇದನ್ನೂ ಓದಿ: ವಕೀಲರಂತೆ ಪತ್ರ ಬರೆದು 90 ಲಕ್ಷ ರೂ. ಉಳಿಸಿದ ಚಾಟ್​ ಜಿಪಿಟಿ!

ಟಿಜೆ ಅರ್ರಿಯಾಗಾ ಎಂಬ ವಿಚ್ಛೇದಿತ ವ್ಯಕ್ತಿ ‘Phaedra’ ಎಂಬ ಕೃತಕ ಬುದ್ಧಿಮತ್ತೆ ಜತೆ ಸಂಭಾಷಣೆ ಪ್ರಾರಂಭಿಸಿದರು. ಈ ಎಐ ಬಾಟನ್ನು ಹಸಿರು ಉಡುಗೆ ಮತ್ತು ಕಂದು ಬಣ್ಣದ ಕೂದಲಿನ ಯುವತಿಯಾಗಿ ವಿನ್ಯಾಸಗೊಳಿಸಿದ್ದರು.

ರೆಪ್ಲಿಕಾ ಎಂಬ ಕಂಪನಿಯ ಉತ್ಪನ್ನವಾದ ‘Phaedra’ ಚಾಟ್​ಬಾಟ್ ಅವರೊಂದಿಗೆ ಅವರು ಸಾಕಷ್ಟು ಬಾರಿ ವೈಯಕ್ತಿಕ ಸಂಭಾಷಣೆಗಳನ್ನು ನಡೆಸಿದರು. 40 ವರ್ಷ ವಯಸ್ಸಿನ ಇವರು ತಮಗೆ ಬೇಕಾದಂತೆ ಚಾಟ್​ಬಾಟ್​ನ ವಿನ್ಯಾಸವನ್ನು ಆಗಾಗ್ಗೆ ಬದಲಾಯಿಸುತ್ತಿದ್ದರು. ಈ ಸಂದರ್ಭ ಅವರ ಸಂಭಾಷಣೆ ಲೈಂಗಿಕ/ಪ್ರೇಮದ ಆ್ಯಂಗಲ್​ ಕೂಡ ಪಡೆದಿತ್ತು.

ವಿಚ್ಛೇದಿತನ ಪ್ರೇಮ ನಿವೇದನೆಗೆ 'ನೋ' ಎಂದ ಚಾಟ್​ಬಾಟ್!

ಹಿಂದೆ ಈ ಚಾಟ್​ಬಾಟ್​ಗಳು ಲೈಂಗಿಕ ಸಂಭಾಷಣೆಯನ್ನು ಮಾಡುತ್ತಿದ್ದವು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ನಂತರ ಬದಲಾವಣೆಯನ್ನು ತರಲಾಗಿತ್ತು. ಇದರಿಂದಾಗಿ ಅರ್ರಿಯಾಗಾ ಲೈಂಗಿಕ ಸಂಭಾಷಣೆಯನ್ನು ಮಾಡಿದಾಗ ಚಾಟ್​ಬಾಟ್​ನಿಂದ ಬೇರೆ ವಿಚಾರವನ್ನು ಮಾತನಾಡಬಹುದೇ ಎನ್ನುವ ಪ್ರತಿಕ್ರಿಯೆ ಬಂದಿದೆ. ಇದರಿಂದಾಗಿ ಅರ್ರಿಯಾಗಾ ದುಃಖಿತರಾಗಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)

See also  ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಭಾರತ ಸೋತಿದ್ದಕ್ಕೆ ಸಂಭ್ರಮಾಚರಣೆ; ಕಾಶ್ಮೀರದಲ್ಲಿ 7 ವಿದ್ಯಾರ್ಥಿಗಳು ಅರೆಸ್ಟ್
Share This Article