More

    ಮಹಾ ಉದ್ಧಟತನಕ್ಕೆ ಸಿಎಂ ಬೊಮ್ಮಾಯಿ‌ ಕಿಡಿ; ವಿಮೆ ವಾಪಸ್ ಪಡೆಯದಿದ್ದರೆ ತಿರುಗೇಟಿನ ಎಚ್ಚರಿಕೆ

    ಬೆಂಗಳೂರು: ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಬಾಬು ಜಗಜೀವನ್ ರಾಂ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಿರುವುದು ಉದ್ಧಟತನ ಪರಮಾವಧಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಿಡಿ ಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸರಣಿ ಸಂದೇಶ ಹಂಚಿಕೊಂಡಿರುವ ಬೊಮ್ಮಾಯಿ‌, ವಿಮೆ ಆದೇಶ ವಾಪಸ್ ಪಡೆಯದಿದ್ದರೆ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿ ವಿಮೆ ಸೌಲಭ್ಯ ನೀಡುವ ಕ್ರಮವಹಿಸಬೇಕಾಗುತ್ತದೆ ಎಂದು ತಿರುಗೇಟಿನ ಎಚ್ಚರಿಕೆ ನೀಡಿದ್ದಾರೆ.

    ಗಡಿ ವಿವಾದ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶಾಂತಿ, ಸೌಹಾರ್ದತೆ ಕಾಯ್ದುಕೊಳ್ಳಲು ಸೂಚಿಸಿದ್ದಾರೆ.

    https://twitter.com/BSBommai/status/1643481981076795392?s=20

    ಆದಾಗ್ಯೂ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನವಾಗಿದೆ. ವಿಮೆ ಆದೇಶ ನೀಡುವ ವೇಳೆ ಮಹಾರಾಷ್ಟ್ರಕ್ಕೆ ಸೇರಿದವರು ಎಂದು ಘೋಷಣಾ ಪತ್ರ ಬರೆಯಿಸಿಕೊಳ್ಳುತ್ತಿರುವುದು ಖಂಡನೀಯ.

    ಗಡಿಯಲ್ಲಿ ಗೊಂದಲ ಸೃಷ್ಟಿಸುವುದಿಲ್ಲ ಎಂದು ಅಮಿತ್ ಷಾ ಅವರ ಮುಂದೆ ಒಪ್ಪಿಕೊಂಡಂತೆ ನಡೆದುಕೊಂಡು ಅವರ ಸೂಚನೆಯನ್ನು ಗೌರವಿಸಬೇಕು. ಗಡಿಯಲ್ಲಿ ಶಾಂತಿ ಕದಡುವ ಪ್ರಯತ್ನ ಸಹಿಸಲಾಗದು ಎಂದು ಮಹಾ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ‌ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts