More

    ಮುಂಗಾರಿಗೆ ಕಾಯುತ್ತಿರುವ ರೈತ

    ಬ್ರಹ್ಮಾವರ: ಮುಂಗಾರು ಕೊಂಚ ತಡವಾಗಬಹುದೆಂಬ ಹವಾಮಾನ ಇಲಾಖೆ ಮುನ್ಸೂಚನೆಯ ನಡುವೆಯೇ ಕರಾವಳಿ ಜಿಲ್ಲೆಯಾದ್ಯಂತ ರೈತರು ಮಳೆಗಾಲದ ಸಿದ್ಧತೆ ನಡೆಸುತ್ತಿದ್ದು, ಹೊಲದಲ್ಲಿ ಪೂರ್ವಸಿದ್ಧತೆ ಎಲ್ಲೆಡೆ ಕಂಡು ಬರುತ್ತಿದೆ.

    ಬ್ರಹ್ಮಾವರ, ಬಾರಕೂರು ಗ್ರಾಮೀಣ ಭಾಗದ ರೈತರು ಮಳೆಗಾಲಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಮಳೆಗಾಗಿ ಕಾದು ಕುಳಿತಿದ್ದಾರೆ. ಅತಿ ಹೆಚ್ಚು ತುಂಡುಭೂಮಿ ಹೊಂದಿರುವ ಕರಾವಳಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭೂಮಿಯನ್ನು ಹಡಿಲು ಬಿಡಬಾರದು ಎಂಬ ಸದುದ್ದೇಶದಿಂದ ಮಾತ್ರ ರೈತರು ಕೂಲಿ ಆಳುಗಳ ಕೊರತೆ, ದುಬಾರಿ ಬಾಡಿಗೆಯ ಟಿಲ್ಲರ್, ಕಟಾವು ಯಂತ್ರ, ಅಕಾಲಿಕ ಮಳೆ ಇತ್ಯಾದಿ ಸಮಸ್ಯೆಗಳ ನಡುವೆ ಆರ್ಥಿಕ ಲಾಭದ ದೃಷ್ಟಿ ತೊರೆದು ಕೃಷಿ ಮಾಡುತ್ತಿದ್ದಾರೆ.

    Agriculture 2

    ಯುಗಾದಿ ಹಬ್ಬದ ಬಳಿಕ ರೈತರು ಕೃಷಿ ಗದ್ದೆಯನ್ನು ಹದಗೊಳಿಸುವ, ಗಿಡಗಂಟಿ ಸವರಿ ಕಳೆ ತೆಗೆಯುವ, ಹಟ್ಟಿ ಗೊಬ್ಬರ ತರಗೆಲೆ , ಸುಣ್ಣ ಗದ್ದೆಗೆ ಹಾಕಿ ನಂಜು ಭೂಮಿಯನ್ನು ಹೀರಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ.

    ಇನ್ನೊಂದೆಡೆ ಮನೆ ವಠಾರದಲ್ಲಿ ಹಸು ಕರುಗಳಿಗಾಗಿ ಒಣಹುಲ್ಲಿನ ಬಣವೆ, ಬೇಕಾದ ಉರುವಲು ಕಟ್ಟಿಗೆ, ತರಗೆಲೆಗಳ ಬಣವೆ ಮಾಡಿಕೊಂಡು ಮಳೆಗಾಲದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು ಮಳೆ ಸುರಿದ ಕೂಡಲೇ ಉಳುಮೆ ಆರಂಭವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts