

ಪಂಜಾಬ್: ಫೆ.29ರವರೆಗೆ ದೆಹಲಿ ಚಲೋ ಧರಣಿ ಸ್ಥಗಿತಗೊಳಿಸುವ ನಿರ್ಧಾರವನ್ನು ಇದೀಗ ರೈತ ಮುಖಂಡರು ಕೈಗೊಂಡಿದ್ದು, ಪ್ರತಿಭಟನಾ ನಿರತ ರೈತರು ಹಾಗೂ ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಎಂದಿನಂತೆ ಮುಂದುವರೆಯಲಿದೆ ಎಂದಿದ್ದಾರೆ. ಮುಂದಿನ ಕ್ರಮದ ಕುರಿತು ಫೆ.29ರ ನಂತರ ತೀರ್ಮಾನ ಮಾಡಲಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಶುಕ್ರವಾರ ಸಂಜೆ ಖಾನೇರಿ ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಸರ್ವಣ್ ಸಿಂಗ್ ಪಂಢೇರ್, "ಪ್ರತಿಭಟನೆಯ ಮುಂದಿನ ಕಾರ್ಯತಂತ್ರವನ್ನು ಫೆಬ್ರವರಿ 29ರಂದು ಪ್ರಕಟಿಸಲಾಗುವುದು. ಫೆ.27ರಂದು ರೈತ ಸಂಘಗಳ ಸಭೆ ಕರೆದು ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ" ಎಂದರು.
ಪಂಜಾಬ್ ಸರ್ಕಾರ ರೈತ ಸುಭ್ಕರನ್ ಸಿಂಗ್ ಸಾವಿನ ಕುರಿತು ಎಫ್‌ಐಆರ್ ದಾಖಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದ್ದಾರೆ,(ಏಜೆನ್ಸೀಸ್).