"2028ಕ್ಕೆ ವಿರಾಟ್ ಕೊಹ್ಲಿ ನಿವೃತ್ತಿ": ವೈರಲ್ ಆಗ್ತಿದೆ 2016ರಲ್ಲಿ ಈ ಜ್ಯೋತಿಷಿ ನುಡಿದ ಭವಿಷ್ಯ!

Untitled design - 2024-02-22T191057.146
Published on

ಬೆಂಗಳೂರು: ಇತ್ತೀಚಿಗಷ್ಟೇ ಗಂಡು ಮಗುವಿನ ತಂದೆಯಾದ ಭಾರತೀಯ ಕ್ರಿಕೆಟ್ ತಂಡ ಮಾಜಿ ಕ್ಯಾಪ್ಟನ್​, ರನ್ ಮಷಿನ್ ವಿರಾಟ್ ಕೊಹ್ಲಿ, ಸದ್ಯ ಎರಡನೇ ಮಗುವಿನ ಖುಷಿಯಲ್ಲಿದ್ದಾರೆ. ಮಂಗಳವಾರ ನಮಗೆ ಗಂಡು ಮಗು ಜನಿಸಿತು ಎಂದು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡ ವಿರಾಟ್​, ಈ ಸಂತಸದ ವಿಷಯವನ್ನು ಎಲ್ಲರೊಂದಿಗೂ ಬಹಿರಂಗವಾಗಿ ಹಂಚಿಕೊಂಡರು. ಈ ಮಧ್ಯೆ ಕೊಹ್ಲಿ 2028ರಲ್ಲಿ ನಿವೃತ್ತಿ ಹೊಂದಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದು, ಅದರ ಫೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಒಂದೆಡೆ ಅಭಿಮಾನಿಗಳು ವಿರಾಟ್​ ಕೊಹ್ಲಿ ಎರಡನೇ ಮಗುವಿಗೆ ತಂದೆಯಾದ ವಿಷಯ ಕೇಳಿ ಸಂತಸಪಟ್ಟರೇ, ಮತ್ತೊಂದೆಡೆ ಈ ವೈರಲ್ ಸುದ್ದಿ ತಿಳಿದು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. 2016ರಲ್ಲಿ ಈ ಜ್ಯೋತಿಷಿ ಮಾಡಿರುವ ಪೋಸ್ಟ್​ಗಳು ಸದ್ಯ ನೆಟ್ಟಿಗರಲ್ಲಿ ಭಾರಿ ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಪೋಸ್ಟ್​ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.

ಕಳೆದ 8 ವರ್ಷಗಳ ಹಿಂದೆ ಈ ವ್ಯಕ್ತಿ ಕೊಹ್ಲಿ ಅವರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಕುರಿತು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಭವಿಷ್ಯ ನುಡಿದಿದ್ದಾರೆ. ಇವರು ಪಾಯಿಂಟ್​ ಮಾಡಿ ಹಾಕಿರುವ ಒಂದಷ್ಟು ಭವಿಷ್ಯವಾಣಿಗಳು ಈ ಕೆಳಕಂಡಂತಿದೆ ಗಮನಿಸಿ.

"ವಿರಾಟ್ ಸೆಪ್ಟಂಬರ್ 2021-2025ರ ನಡುವೆ ವೃತ್ತಿಪರವಾಗಿ ಮತ್ತು ವಿತ್ತೀಯವಾಗಿ ದೊಡ್ಡ ಯಶಸ್ಸಿನೊಂದಿಗೆ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಲಿದ್ದಾರೆ"

"ಆಗಸ್ಟ್ ಫೆಬ್ರವರಿ 2025- 2027ರ ನಡುವೆ ವಿರಾಟ್ ವೃತ್ತಿಜೀವನದಲ್ಲಿ ತೊಡಕುಗಳು ಎದುರಾಗಲಿದೆ. 2027ರಲ್ಲಿ ವಿರಾಟ್ ವೃತ್ತಿಜೀವನವು ಮತ್ತೊಮ್ಮೆ ಪ್ರಾರಂಭವಾಗಲಿದ್ದು, ಮಾರ್ಚ್ 2028ರ ವೇಳೆಗೆ ನಿವೃತ್ತಿ ಹೊಂದಲಿದ್ದಾರೆ" ಎಂದು ಭವಿಷ್ಯ ನುಡಿದಿದ್ದಾರೆ.

ಅಕಸ್ಮಾತ್​ ಇದೇನಾದರೂ ನಿಜವಾದರೆ ಹೇಗೆ? ವಿರಾಟ್​ ಅವರ ಅಂತಾರಾಷ್ಟ್ರೀಯ ಸೆಂಚುರಿಗಳು ಮಿಸ್​ ಆಗಲಿದೆಯಾ? ಈ ರೀತಿಯ ಹಲವು ಆತಂಕಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net