Director Atlee:ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ, ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಆ್ಯಕ್ಷನ್ ಕಟ್ ಹೇಳಲಿದ್ದು, ಈ ಇಬ್ಬರ ಕಾಂಬಿನೇಷನ್ ಸಿನಿಮಾ 500 ಕೋಟಿ ರೂ. ವೆಚ್ಚದಲ್ಲಿ ಸೆಟ್ಟೇರಲಿದೆ ಎಂದು ವರದಿಯಾಗಿದೆ.
ಈ ಚಿತ್ರಕ್ಕಾಗಿ ನಟ ಸಲ್ಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಾತ್ಕಾಲಿಕವಾಗಿ ಈ A6 ಎಂದು ಹೆಸರಿಸಲಾಗಿದೆ. ಈ ಸಿನಿಮಾ ಆ್ಯಕ್ಷನ್ ಮತ್ತು ಡ್ರಾಮದಿಂದ ಕೂಡಿರಲಿದೆ. ಶೀಘ್ರವೇ ಸಿನಿಮಾ ಸೆಟ್ಟೆರಲಿದೆ ಎಂದು ವರದಿ ಉಲ್ಲೇಖಿಸಿವೆ.
ವರದಿ ಪ್ರಕಾರ, ನಿರ್ದೇಶಕ ಅಟ್ಲಿ ಚಿತ್ರಕ್ಕಾಗಿ ಹೊಸ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಸಿನಿಮಾದಲ್ಲಿ ಸಲ್ಲುಗಾಗಿ ಹೊಸ ಪ್ರಪಂಚವನ್ನೇ ಸೃಷ್ಠಿಸಿಲಿದ್ದಾರೆ. ಇದಕ್ಕಾಗಿ ನಿರ್ಮಾಣ ಸಂಸ್ಥೆ ಹಣದಹೊಳೆ ಹರಿಸಲಿದ್ದಾರೆ. ಇನ್ನು ಈ ಚಿತ್ರವು ಪುನರ್ಜನ್ಮದ ಕಥೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಸಲ್ಮಾನ್ಖಾನ್ ಸದ್ಯಕ್ಕೆ ಸಿಕಿಂದರ್ ಚಿತ್ರದಲ್ಲಿ ಬ್ಯೂಸಿ ಇದ್ದು, ಜೊತೆಜೊತೆಗೆ ಈ ಹೊಸ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. A6 ಚಿತ್ರಕ್ಕೆ ಸಲ್ಲು ತೂಕ ಇಳಿಸಿಕೊಳ್ಳಬೇಕಿದ್ದು, ಅದನ್ನಜು ಈಗಾಗಲೇ ಆರಂಭಿಸಿದ್ದಾರೆ. ಅಲ್ಲದೆ, ಅಟ್ಲಿ ಕೂಡ ಸಲ್ಲುಗೆ ನಿರ್ದೇಶನ ಮಾಡಲು ತುಂಬಾ ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಖಿನ್ನತೆಗೆ ಒಳಾಗದವರು ಮಾಡಬೇಕಾದ್ದು ಇಷ್ಟೆ..; ಶಾಲಾಮಕ್ಕಳಿಗೆ ದೀಪಿಕಾ ಪಡುಕೋಣೆ ಕಿವಿಮಾತು | Deepika Padukone
ಇನ್ನು ಈ ಚಿತ್ರದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ನಟನೆ ಮಾಡಲಿದ್ದಾರೆ ಎಂಬ ವದಂತಿ ಇದೆ. ಆದರೆ, ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.(ಏಜೆನ್ಸೀಸ್)
ಖಿನ್ನತೆಗೆ ಒಳಾಗದವರು ಮಾಡಬೇಕಾದ್ದು ಇಷ್ಟೆ..; ಶಾಲಾಮಕ್ಕಳಿಗೆ ದೀಪಿಕಾ ಪಡುಕೋಣೆ ಕಿವಿಮಾತು | Deepika Padukone