ಗಾಂಧಿನಗರ: ತರಗತಿಯಲ್ಲಿ ವಿದ್ಯಾರ್ಥಿಗಳ ಜೊತೆ ದುರ್ವತನೆ ಸಹಿಸಲಾರದೆ ಪ್ರಾಂಶುಪಾಲರೊಬ್ಬರು ಶಿಕ್ಷಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತ್ನ ಭರೂಚ್ ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಶಿಕ್ಷಕನನ್ನು ರಾಜೇಂದ್ರ ಪರ್ಮಾರ್ ಎಂದು ಗುರುತಿಸಲಾಗಿದ್ದು, ಪ್ರಾಂಶುಪಾಲನ ಹೆಸರು ಹಿತೇಂದ್ರ ಸಿಂಗ್ ಠಾಕೂರ್ ಎಂದು ತಿಳಿದು ಬಂದಿದೆ. ಸದ್ಯ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಪ್ರಾಂಶುಪಾಲರು 20 ಸೆಕೆಂಡ್ ಅಂತರದಲ್ಲಿ 18ಕ್ಕೂ ಅಧಿಕ ಬಾರಿ ಶಿಕ್ಷಕನ ಕಪಾಳಕ್ಕೆ ಬಾರಿಸಿರುವುದು ಕಂಡು ಬರುತ್ತದೆ.
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ಪ್ರಾಂಶುಪಾಲರ ಕೊಠಡಿಯಲ್ಲಿ ಶಿಕ್ಷಕರೊಂದಿಗೆ ಸಭೆ ನಡೆಯುತ್ತಿದ್ದು, ಈ ವೇಳೆ ರಾಜೇಂದ್ರ ಹಾಗೂ ಹಿತೇಂದ್ರ ನಡುವೆ ವಿಚಾರ ಒಂದಕ್ಕೆ ಮಾತಿನ ಚಕಮಕಿ ನಡೆಯುತ್ತದೆ. ಈ ವೇಳೆ ಸಿಟ್ಟಿಗೆದ್ದ ಪ್ರಾಂಶುಪಾಲ ಹಿತೇಂದ್ರ ಶಿಕ್ಷಕ ರಾಜೇಂದ್ರ ಮೇಲೆ ಹಲ್ಲೆ ನಡೆಸುತ್ತಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
નવયુગ વિદ્યાલયના પ્રિન્સિપાલ અને શિક્ષક વચ્ચે છુટ્ટા હાથની મારામારી#bharuch #Jambusar #principal #teacher #fight #video #cctv #trending #tv13gujarati pic.twitter.com/gFodQV2kHb
— TV13 Gujarati (@tv13gujarati) February 8, 2025
ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡದೆ ಅನುಚಿತ ವರ್ತನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಬಗ್ಗೆ ಕೇಳಿದಾಗ ಆತ ಸರಿಯಾಗಿ ಉತ್ತರಿಸಲಿಲ್ಲ ಎಂದು ಪ್ರಾಂಶುಪಾಲ ಹಿತೇಂದ್ರ ಆರೋಪಿಸಿದ್ದಾರೆ. ಶಿಕ್ಷಕ ರಾಜೇಂದ್ರ ಮಾತನಾಡಿ, ಯಾರದೋ ಮೇಲಿನ ಸಿಟ್ಟಿನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪ್ರಾಂಶುಪಾಲ ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ-ಪ್ರಾಂಶುಪಾಲ ಆರೋಪ-ಪ್ರತ್ಯಾರೋಪವನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದ್ದ ಇವರು ನಗೆಪಾಟಲಿಗೀಡಾಗಿದ್ದಾರೆ. ಜಿಲ್ಲಾ ಶಿಕ್ಷಣ ಅಧಿಕಾರಿ ಸ್ವಾತಿಬಾ ರೌಲ್ ಘಟನೆಯ ತನಿಖೆಗೆ ಆದೇಶಿಸಿದ್ದು, ಸದ್ಯ ಇವರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ (Viral Video) ಆಗಿದೆ.
ಆಂಗ್ಲರ ಬೆಂಡೆತ್ತಿದ್ದ Team India ಬ್ಯಾಟರ್ಸ್; ಪ್ರವಾಸಿ ತಂಡಕ್ಕೆ 357 ರನ್ಗಳ ಗುರಿ ನೀಡಿದ ಆತಿಥೇಯರು
ಇಲ್ಲಾಜಿಕಲ್ ಎನ್ನುವುದೇ… KGF ಚಿತ್ರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ Ram Gopal Varma