

Deepika Padukone:'ಪರೀಕ್ಷಾ ಪೇ ಚರ್ಚೆ-2025' ಕಾರ್ಯಕ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮಗಾದ ಖಿನ್ನತೆ ಮತ್ತು ಅದರಿಂದ ಹೇಗೆ ಹೊರಬಂದೆ ಎನ್ನುವುದರ ಬಗ್ಗೆ ಶಾಲಾ ಮಕ್ಕಳ ಎದುರು ಇತ್ತೀಚಿಗೆ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ನಟಿ, ಮಾನಸಿಕ ಆರೋಗ್ಯಕ್ಕಾಗಿ ಜಾಗೃತಿ ಮತ್ತು ಸಂಹವನದ ಬಗ್ಗೆ ಒತ್ತಿ ಹೇಳಿದರು.
ದೀಪಿಕಾ ಪಡುಕೋಣೆ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ '' ಆ ದಿನಗಳಲ್ಲಿ ಅಧ್ಯಯನ, ಕ್ರೀಡೆ ಮತ್ತು ಮಾಡೆಲಿಂಗ್ನಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಒಂದು ದಿನ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಮೂರ್ಚೆ ಹೋದೆ. ಕೆಲ ದಿನಗಳ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ನನಗೆ ಅರಿವಾಯಿತು. ಖಿನ್ನತೆ ಬಂದರೆ ಅದನ್ನು ಪತ್ತೆಹಚ್ಚೋದು ಕಷ್ಟಸಾಧ್ಯ, ಆ ಸಮಯದಲ್ಲಿ ಇದು ನನಗೂ ಸಾಧ್ಯವಾಗಲಿಲ್ಲ. ಇದರ ಬಗ್ಗೆ ನಾನು ಬೇಗ ಯಾರೊಂದಿಗೂ ಹಂಚಿಕೊಳ್ಳಲಿಲ್ಲ'' ಎಂದು ತಮಗಾದ ಅನುಭವನ್ನು ಹೇಳಿಕೊಂಡಿದ್ದಾರೆ.
ಮುಂದುವರೆದು, '' ನಾನು ಮುಂಬೈನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೆ. ಅದನ್ನೂ ಯಾರೊಂದಿಗೂ ಹೇಳಿಕೊಳ್ಳಲಿಲ್ಲ. ಅಲ್ಲದೆ, ಅದೇ ಸಂದರ್ಭದಲ್ಲಿ ಅಮ್ಮ ಮನೆಗೆ ಬಂದು ಕೆಲ ದಿನಗಳ ಬಳಿಕ ಹೊರಟುಹೋದರು, ನನಗೆ ನಿರಾಶದಾಯಕ ಭಾವನೆ ಮೂಡಿತು. ಆಳಬೇಕು ಅನಿಸಿತು. ಏನಾಯಿತೋ ಗೊತ್ತಿಲ್ಲ. ಎಲ್ಲಾ ಕಳೆದುಕೊಂಡೆ ಅನಿಸಿತು. ಬದುಕಬೇಕೆಂದು ನನಗನಿಸಲಿಲ್ಲ. ಬಳಿಕ ಮನೋಶಾಸ್ತ್ರಜ್ಞರ ಬಳಿ ಚಿಕಿತ್ಸೆ ಪಡೆದುಕೊಂಡೆ'' ಎಂದು ಖಿನ್ನತೆಯಿಂದ ಹೊರಬಂದ ಬಗ್ಗೆ ದೀಪಿಕಾ ಹಂಚಿಕೊಂಡರು.
ನಾನು ಖಿನ್ನತೆಗೆ ಒಳಗಾಗಿದ್ದೆ ಎಂದರೆ ಎಲ್ಲರೂ ಆಚ್ಚರಿ ವ್ಯಕ್ತಪಡಿಸುತ್ತಾರೆ ಎಂದ ನಟಿ ದೀಪಿಕಾ, ದಿನನಿತ್ಯ ಧ್ಯಾನ ಮಾಡಿ, ಉತ್ತಮ ವಿಷಯಗಳ ಮೇಲೆ ನಿಮ್ಮ ಬುದ್ದಿ ಕೇಂದ್ರಿಕರಿಸಿ ಮತ್ತು ತಂದೆತಾಯಿಯೊಂದಿಗೆ ಭಾನೆಗಳನ್ನು ಹಂಚಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು.(ಏಜೆನ್ಸೀಸ್)