ಹೈದರಾಬಾದ್: ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನಲ್ಲಿ ಮೂಡಿಬಂದ ಎರಡನೇ ಸಿನಿಮಾ ‘ಥಂಡೇಲ್’ ಫೆಬ್ರವರಿ 7ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.(Nagarjuna)
ಮಗನ ಸಿನಿಮಾ ಕುರಿತು ಅಕ್ಕಿನೇನಿ ನಾಗಾರ್ಜುನ ಪ್ರತಿಕ್ರಿಯಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಥಂಡೇಲ್ ಚಿತ್ರದ ಯಶಸ್ಸಿನಿಂದ ತಮಗೆ ತುಂಬಾ ಸಂತೋಷವಾಗಿದೆ. ನಾಗ ಚೈತನ್ಯ ಅವರನ್ನು ನೋಡಿದಾಗ ತಂದೆಯಾಗಿರುವುದಕ್ಕೆ ಹೆಮ್ಮೆಯಾಗುತ್ತದೆ. ಈ ಚಿತ್ರಕ್ಕಾಗಿ ನೀವು ಒಬ್ಬ ನಟನಾಗಿ ಸವಾಲುಗಳನ್ನು ಎದುರಿಸುವುದನ್ನು ಮತ್ತು ಮಿತಿಗಳನ್ನು ಮೀರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.
ನಾಗ ಚೈತನ್ಯ ಅವರನ್ನು ಥಂಡೇಲ್ ಚಿತ್ರಕ್ಕಾಗಿ ಮಾತ್ರವಲ್ಲದೆ ಅವರ ಉತ್ಸಾಹ ಮತ್ತು ಕಠಿಣ ಪರಿಶ್ರಮಕ್ಕೂ ಪ್ರಶಂಸಿದ್ದಾರೆ. ಜತೆಗೆ ಅಕ್ಕಿನೇನಿ ಅಭಿಮಾನಿಗಳು ಕುಟುಂಬದ ಸದಸ್ಯರಂತೆ ಯಾವಾಗಲೂ ಅವರ ಹಿಂದೆ ಇದ್ದಾರೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಅಲ್ಲು ಅರವಿಂದ್ ಗಾರು ಮತ್ತು ಬನ್ನಿ ವಾಸು ಅವರಿಗೆ ತುಂಬಾ ಧನ್ಯವಾದಗಳು. ಸಾಯಿ ಪಲ್ಲವಿ ನೀವು ಯಾವಾಗಲೂ ಅದ್ಭುತವಾಗಿರುತ್ತೀರಿ. ದೇವಿ ಶ್ರೀಪ್ರಸಾದ್ ನೀವು ಅದ್ಭುತ, ಈ ಕ್ಷಣವನ್ನು ಅವಿಸ್ಮರಣೀಯವಾಗಿಸಿದ ಉದಯೋನ್ಮುಖ ನಿರ್ದೇಶಕ ಚಂದೂ ಮೊಂಡೆಟಿ ಮತ್ತು ಅದ್ಭುತ ಥಂಡೇಲ್ ಸಿನಿಮಾ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Dear @chay_akkineni, Proud of you my son!❤️ I have watched you push boundaries, face challenges, and give your heart to the craft. Thandel is not just another film—it is a testament to your relentless passion, your courage to dream big, and your hard work. 💐 ✨ ✨ ❤️
To all… pic.twitter.com/cE9u2EKaTn
— Nagarjuna Akkineni (@iamnagarjuna) February 9, 2025
ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಇಬ್ಬರೂ ಪೈಪೋಟಿ ನಡೆಸಿ ಬಹಳ ಚೆನ್ನಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತದೆ. ಇಡೀ ಚಿತ್ರದಲ್ಲಿ ನಿರ್ದೇಶಕರು ಚಿತ್ರದ ಕೊನೆಯ 20 ನಿಮಿಷಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ನಾಗ ಚೈತನ್ಯ ಅವರ ಅಭಿನಯ ಎಲ್ಲರನ್ನೂ ಬೆರಗುಗೊಳಿಸುವುದು ಸುಳ್ಳಲ್ಲ. ಚಂದು ಮೊಂಡೆಟಿ ನಿರ್ದೇಶನ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತ ಮುಂದಿನ ಹಂತದ್ದು ಎಂದು ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್)
ನನ್ನ ಅಕೌಂಟ್ನಲ್ಲಿ ಎಷ್ಟು ಹಣವಿದೆ ಎಂಬುದೆ ನನಗೆ ತಿಳಿದಿಲ್ಲ; ನಟ ಮಾಧವನ್ ಹೀಗೇಳಿದ್ದೇಕೆ? | Madhavan