ಮುಂಬೈ: ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್(Aamir Khan), ಅವರ ಚಲನಚಿತ್ರ ಕೌಶಲ್ಯಕ್ಕಾಗಿ ಸಾಕಷ್ಟು ಪ್ರಶಂಸೆ ಪಡೆಯುತ್ತಾರೆ. ಯಾವುದೇ ಪಾತ್ರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಶ್ರಮವಹಿಸುತ್ತಾರೆ ಎಂಬುದು ಆ ನಟನ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಂತರ ಸ್ಪಷ್ಟವಾಗುತ್ತದೆ. ದಂಗಲ್ ನಟನನ್ನು ಹಿಂದಿ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲಾಗುತ್ತದೆ. ಏಕೆಂದರೆ ವರ್ಷಕ್ಕೆ ಒಂದು ಅವರ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಹಣ ಗಳಿಸುತ್ತಾರೆ.
ಇದನ್ನು ಓದಿ: ರಣವೀರ್ ಅಲ್ಲಾಬಾಡಿಯಾಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ; ಕಾರಣ ಹೀಗಿದೆ.. | Ranveer Allahbadia
ಅವರೊಂದಿಗೆ ಕೆಲಸ ಮಾಡುವುದು ಹೆಚ್ಚಿನ ಬಾಲಿವುಡ್ ನಟಿಯರ ಕನಸಾಗಿರುತ್ತದೆ. ಚಿಕ್ಕ ಪಾತ್ರವಾದರೂ ಸಹ ಅಮೀರ್ ಜತೆ ಕೆಲಸ ಮಾಡುವ ಅವಕಾಶ ಸಿಗಬೇಕು ಎಂದು ಅನೇಕ ನಟಿಯರು ಹೇಳಿದ್ದಾರೆ. ಆದರೆ 90ರ ದಶಕದ ನಟಿ ಕಾಜೋಲ್ ಅವರ ಆಲೋಚನೆ ಎಲ್ಲರಿಗೂ ಸಂಪೂರ್ಣವಾಗಿ ವಿರುದ್ಧವಾಗಿದೆ. ವರದಿಗಳ ಪ್ರಕಾರ, ಒಮ್ಮೆ ಕಾಜೋಲ್ ಒಂದು ಸಿನಿಮಾದಲ್ಲಿ ಕೆಲಸ ಮಾಡಲು ಬಯಸಿದ್ದರು. ಆದರೆ ಆ ಚಿತ್ರದ ನಾಯಕ ಅಮೀರ್ ಖಾನ್ ಎಂದು ಕೇಳಿದ ತಕ್ಷಣ ಆ ಸಿನಿಮಾವನ್ನು ನಿರಾಕರಿಸಿದ್ದಾರೆ.
ಅಮೀರ್ ಖಾನ್ ಮತ್ತು ಕಾಜೋಲ್ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಅವರಿಗೆ ಹಿಟ್ ಗ್ಯಾರಂಟಿ. ಈ ಇಬ್ಬರು ಸೂಪರ್‌ಸ್ಟಾರ್‌ಗಳು ಮೊದಲು 1997ರ ಇಷ್ಕ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇದಾದ ನಂತರ 2000ರಲ್ಲಿ ಕಾಜೋಲ್‌ಗೆ ಮತ್ತೊಂದು ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಅದರಲ್ಲಿ ಮುಖ್ಯ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ದರು. ಆದರೆ ನಟಿಗೆ ಈ ವಿಷಯ ತಿಳಿದ ತಕ್ಷಣ ಅವರು ಚಿತ್ರದ ಭಾಗವಾಗಲು ಸ್ಪಷ್ಟವಾಗಿ ನಿರಾಕರಿಸಿದರು.
ಧರ್ಮೇಶ್ ದರ್ಶನ್ ಅವರ ‘ಮೇಳ’ ಚಿತ್ರದಿಂದ ಅವಕಾಶ ಸಿಕ್ಕಿತ್ತು. ಆದರೆ ಅಮೀರ್ ಖಾನ್ ಹೆಸರು ಕೇಳಿದ ನಂತರ ನಿರಾಕರಿಸಿದ್ದಾಗಿ ಕಾಜೋಲ್ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದಾದ ನಂತರವೇ ಈ ಚಿತ್ರ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರ ಕೈಗೆ ಹೋಯಿತು. ಈ ಚಿತ್ರವು ಜನವರಿ 17, 2000ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಅಷ್ಟು ಹಿಟ್ ಆಗಲಿಲ್ಲ. ಚಿತ್ರದ ಹಾಡುಗಳು ಹಿಟ್ ಆದರೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ಸೋತಿತು. ಈ ಚಿತ್ರದಲ್ಲಿ ಕೆಲಸ ಮಾಡದಿರಲು ಕಾಜೋಲ್ ತೆಗೆದುಕೊಂಡ ನಿರ್ಧಾರ ಅವರ ವೃತ್ತಿಜೀವನಕ್ಕೆ ಸರಿಯಾಗಿದೆ ಎಂದು ಹೇಳಿದ್ದಾರೆ.
ಕಾಜೋಲ್ ಮತ್ತು ಅಮೀರ್ ಖಾನ್ ಅವರ ಚಿತ್ರಗಳ ಬಗ್ಗೆ ಹೇಳುವುದಾದರೆ ಇಷ್ಕ್ ಚಿತ್ರದ ನಂತರ, ಅವರು 2006 ರಲ್ಲಿ ‘ಫನಾ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಆ ಸಮಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 105.48 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಈ ಚಿತ್ರದ 16 ವರ್ಷಗಳ ನಂತರ ಅವರ ಜೋಡಿ ‘ಸಲಾಮ್ ವೆಂಕಿ’ ಚಿತ್ರದಲ್ಲಿ ಕಾಣಿಸಿಕೊಂಡಿತು. ಇದರಲ್ಲಿ ಅಮೀರ್ ಅತಿಥಿ ಪಾತ್ರದಲ್ಲಿ ನಟಿಸಿದರು.(ಏಜೆನ್ಸೀಸ್)