ಮುಂಬೈ: ಬಾಲಿವುಡ್, ಹಾಲಿವುಡ್ ಸೆಲಿಬ್ರಿಟಿಗಳು, ಜ್ಯೋತಿಷಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಸಂದರ್ಶನ ಮಾಡುವ ಹಾಗೂ ಭಾರತದ ಅತ್ಯುತ್ತಮ ಯೂಟ್ಯೂಬ್ ಕಂಟೆಂಟ್ ಪ್ರಶಸ್ತಿ ಮತ್ತು ಅತ್ಯಂತ ಸ್ಟೈಲಿಶ್ ಉದ್ಯಮಿ ಪ್ರಭಾವಿ ಪ್ರಶಸ್ತಿಯನ್ನು ಪಡೆದಿರುವ ರಣವೀರ್ ಅಲ್ಲಾಬಾಡಿಯಾ ನೀಡಿರುವ ಹೇಳಿಕೆಯು ಸದ್ಯ ಎಲ್ಲೆಡೆ ಚರ್ಚೆಯಲ್ಲಿದೆ. ರಣವೀರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಮುಖೇಶ್ ಖನ್ನಾ(Mukesh Khanna) ಖಂಡಿಸಿದ್ದಾರೆ.
ಇದನ್ನು ಓದಿ: ನಾನು ಆ ರೀತಿ ಹೇಳಬಾರದಿತ್ತು.. ಕ್ಷಮೆಯಾಚಿಸುವೆ; ರಣವೀರ್ ಅಲ್ಲಾಬಾಡಿಯಾ ಹೀಗೇಳಿದ್ದೇಕೆ? | Ranveer Allahbadia
ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಣವೀರ್ ಅಲ್ಲಾಬಾಡಿಯಾ ಅವರು ಪಾಲಕರ ಬಗ್ಗೆ ತುಂಬಾ ಆಕ್ಷೇಪಾರ್ಹವಾದ ಮಾತನ್ನು ಹೇಳಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಮುಖೇಶ್ ಖನ್ನಾ ‘ಇದು ಎಂತಹ ಅಶ್ಲೀಲತೆ? ಯಾರೂ ಯಾಕೆ ಅವರನ್ನು ಹೊಡೆಯುವುದಿಲ್ಲ?’ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದರೊಂದಿಗೆ ಅವರು “ಇಂಡಿಯಾಸ್ ಗಾಟ್ ಟ್ಯಾಲೆಂಟ್ ಎಂಬ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾನಂತಹ ಯಶಸ್ವಿ ಯೂಟ್ಯೂಬರ್ ಭಯಾನಕ ಹೇಳಿಕೆ ನೀಡಿರುವುದು ದುಃಖಕರವಾಗಿದೆ. ಇದು ಪಾಲಕರು ಮತ್ತು ಲೈಂಗಿಕತೆಗೆ ಸಂಬಂಧಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲು ನಮ್ಮ ದೇಶದ ಯುವಕರಿಗೆ ನೀಡಿರುವ ಅನ್ಯಾಯದ ಸ್ವಾತಂತ್ರ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಮಿತಿ ಮೀರಿರುವುದು ಇದೇ ಮೊದಲಲ್ಲ. ಇದು ಗಂಭೀರ ಅಪರಾಧ. ಇದನ್ನು ಹಗುರವಾಗಿ ಪರಿಗಣಿಸಬಾರದು. ಇಂತಹ ಅಸಭ್ಯ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಜನರನ್ನು ನಿರುತ್ಸಾಹಗೊಳಿಸಲು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಅಂತಹ ಜನರಿಗೆ ನನ್ನ ಬಳಿ ಶಿಕ್ಷೆ ಇದೆ. ಅವರ ಮುಖಗಳಿಗೆ ಕಪ್ಪು ಬಣ್ಣ ಬಳಿದು ಕತ್ತೆಯ ಮೇಲೆ ನಗರದಲ್ಲಿ ಸುತ್ತುವಂತೆ ಮಾಡಿ. ಮುಂದಿನ ಬಾರಿ ಯಾರೂ ಹಾಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ರಣವೀರ್ ಅಲ್ಲಾಬಾಡಿಯಾಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ; ಕಾರಣ ಹೀಗಿದೆ.. | Ranveer Allahbadia