More

    ನಕಲಿ ಇಮ್ಮಿಗ್ರೇಷನ್​ ಕನ್ಸಲ್​ಟೆನ್ಸಿ ಭೇದಿಸಿದ ಪೊಲೀಸರು; ನಾಲ್ವರು ಅರೆಸ್ಟ್​

    ಹೈದರಾಬಾದ್​: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

    ಇದೀಗ ಇದೇ ರೀತಿಯ ಪ್ರಕರಣ ಒಂದರಲ್ಲಿ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಲು ಮುಂದಾಗಿದ್ದ ನಕಲಿ ಜಾಬ್​ ಕನ್ಸಲ್​ಟೆನ್ಸಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

    ನಕಲಿ ದಾಕಲಾತಿ ಸೃಷ್ಟಿ

    ಘಟನೆ ಸಂಬಂಧ ಪೊಲೀಸರು ಪ್ರಕರಣದ ಕಿಂಗ್​ಪಿನ್​ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು ನಕಲಿ ದಾಖಲಾತಿಗಳನ್ನು ಸಲ್ಲಿಸಿ ಈಗಾಗಲೇ ಯುಎಸ್​ಗೆ 10 ಮಂದಿಯನ್ನು ಈ ತಂಡ ಕಳುಹಿಸಿದೆ ಎಂದು ತಿಳಿದು ಬಂದಿದೆ.

    ಪ್ರಕರಣದ ಕಿಂಗ್​ಪಿನ್​ ವಿಲ್ಸನ್​ ಚೌಧರಿ ಸಿಕಂದ್ರಬಾದ್​ನಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು ತೆಲಂಗಾಣ ಸರ್ಕಾರ ನೀಡುವ ಉದ್ಯೋಗಿ ಗುರುತಿನ ಚೀಟಿ, ಸರ್ಕಾರಿ ಪ್ರಾಯೋಜಕತ್ವ ಪತ್ರಗಳನ್ನು ಅಕ್ರಮವಾಗಿ ತಯಾರಿಸಿದ್ದಾರೆ.

    ನಕಲಿ ಇಮ್ಮಿಗ್ರೇಷನ್​ ಕನ್ಸಲ್​ಟೆನ್ಸಿ ಭೇದಿಸಿದ ಪೊಲೀಸರು; ನಾಲ್ವರು ಅರೆಸ್ಟ್​

    ತಪ್ಪಾಗಿ ನಮೂನೆ

    ಉದ್ಯೋಗ ಆಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ್ದ ಆರೋಪಿಗಳಿಗೆ ಸ್ಥಳೀಯ ಫೈನಾನ್ಷಿಯರ್​ ಹಾಗೂ ಕಮಿಷನ್​ ಏಜೆಂಟ್​ ಸಹಾಯ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಆರೋಪಿಗಳು ತೆಲಂಗಾಣ ಸರ್ಕಾರದ ಪ್ರಾಯೋಜಕತ್ವದಲ್ಲಿ ಯುಎಸ್​ಗೆ ತೆರಳಿದ ದಂಪತಿಗಳ ಗುರುತಿನ ಚೀಟಿಯನ್ನು ಬಳಸಿಕೊಂಡು ನಕಲು ಮಾಡಿದೆ. ಭಾರತದಿಂದ ಯುಎಸ್​ಗೆ ದಂಪತಿಗಳನ್ನು ಭೇಟಿ ಮಾಡಲು ತೆರಳುತ್ತಿರುವುದಾಗಿ ವೀಸಾದಲ್ಲಿ ತಪ್ಪಾಗಿ ನಮೂದಿಸುತ್ತಿದ್ದ ವಿಷಯ ವಿಚಾರಣೆ ವೇಳೆ ತಿಳಿದಿದೆ.

    ಇದನ್ನೂ ಓದಿ: ಕಿರುಕುಳಕ್ಕೆ ಪ್ರತಿರೋಧ ಒಡ್ಡಿದ ಯುವತಿ; ಪೆಟ್ರೋಲ್​ ಸುರಿದು ಹತ್ಯೆ

    ಹಣ ಸುಲಿಗೆ

    ಬಂಧಿತ ಆರೋಪಿ ಚೌಧರಿ ಉದ್ಯೋಗಕಾಂಕ್ಷಿಗಳನ್ನು ಫೈನಾನ್ಷಿಯರ್​ ಒಬ್ಬರಿಗೆ ಪರಿಚಯ ಮಾಡಿಸುತ್ತಿದ್ದ. ಈ ವೇಳೆ ಆತ ಸಹಕಾರಿ ಬ್ಯಾಂಕುಗಳಲ್ಲಿ ಖಾತೆ ತೆರದು 40-50 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿ ತಮ್ಮ ಮೇಲೆ ವಿಶ್ವಾಸ ಮೂಡುವಂತೆ ಮಾಡುತ್ತಿದ್ದರು.

    ಉದ್ಯೋಗಕಾಂಕ್ಷಿಗಳಿಗೆ ವೀಸಾ ದೊರೆತ ನಂತರ ಅವರ ಬಳಿ 3.5-4.5 ಲಕ್ಷದಬರೆಗೆ ಹಣ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts