16 ದಿನ ಮನೆಯಲ್ಲಿ ಯಾರೂ ಇರಲಿಲ್ಲ, ಆದ್ರೂ ಬಂತು ಕರೆಂಟ್ ಬಿಲ್ ಮೂರುಪಟ್ಟು!

Electricity bill
Published on

ಬೆಂಗಳೂರು: ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಜ್ಯೋತಿಗೆ ಚಾಲನೆ ಸಿಕ್ಕ ಆರಂಭದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಕರೆಂಟ್ ಬಿಲ್ ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದು ಕೆಲವರು ಆರೋಪಿಸಿದ್ದರು.

ಇದೀಗ ಅಂಥದ್ದೇ ಒಂದು ಪ್ರಕರಣ ಕಂಡುಬಂದಿದೆ. ಬೆಸ್ಕಾಂ ನೀಡಿರುವ ಕರೆಂಟ್ ಬಿಲ್​ ಬಗ್ಗೆ ಬಳಕೆದಾರರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಇತ್ತೀಚಿನ ಬಿಲ್ ಜತೆಗೆ ಹಿಂದಿನ ಎರಡು ಬಿಲ್​ಗಳನ್ನೂ ಹಂಚಿಕೊಂಡಿರುವ ಅವರು ತಮಗೆ ಬಂದಿರುವ ಲೇಟೆಸ್ಟ್ ಬಿಲ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳಲ್ಲಿ 16 ದಿನಗಳ ಮನೆಯಲ್ಲಿ ಇರದಿದ್ದರೂ ಬಿಲ್ ಮಾತ್ರ ಮೂರುಪಟ್ಟು ಬಂದಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಬಿಲ್​ಗಳನ್ನು ಬೆಸ್ಕಾಂ ಸೋಷಿಯಲ್ ಮೀಡಿಯಾ ಹ್ಯಾಂಡಲ್​ಗೂ ಮೆನ್ಷನ್ ಮಾಡಿ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಯಾಸಿರ್ ಮುಷ್ತಾಕ್ ಎಂಬವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಗೃಹಜ್ಯೋತಿಯ ಪರಿಣಾಮವೇ ಎಂದು ಪ್ರಶ್ನಿಸಿರುವ ಅವರು, ಗೃಹಜ್ಯೋತಿ ಬರುವುದಕ್ಕಿಂತಲೂ ಮೊದಲು ಬರುತ್ತಿದ್ದಂಥ ಬಿಲ್​ನ ಮೂರು ಪಟ್ಟು ಬಿಲ್ ಈಗ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್​ನಲ್ಲಿ 16 ದಿನಗಳ ಕಾಲ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಈ ಸಲ 2247 ರೂ. ಬಿಲ್ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಜೊತೆಗೆ ಸೆಪ್ಟೆಂಬರ್​ನಲ್ಲಿ ಬಂದಿದ್ದ 1528 ರೂ. ಬಿಲ್ ಮತ್ತು ಏಪ್ರಿಲ್​ನಲ್ಲಿ ಬಂದಿದ್ದ 228 ರೂ. ಬಿಲ್​ನ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net