

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ವುಡ್ನ ಮಾದಕ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು ಸಿಕ್ಕಿ ಮೂರು ದಿನವಾದರೂ ಬಿಡುಗಡೆ ಭಾಗ್ಯ ಇನ್ನೂ ಸಿಕ್ಕಿಲ್ಲ.
ನಾಲ್ಕೂವರೆ ತಿಂಗಳ ಬಳಿಕ ಜೈಲಿನಿಂದ ಬಿಡುಗಡೆ ಆಗುವ ಖುಷಿಯಲ್ಲಿದ್ದ ರಾಗಿಣಿಗೆ ಇನ್ನೂ ಎರಡು ದಿನ ಜೈಲುವಾಸವೇ ಗಟ್ಟಿ ಎಂಬಂತಾಗಿದೆ. 2020ರ ಸೆಪ್ಟೆಂಬರ್ 14ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರುವ ರಾಗಿಣಿ, ಜಾಮೀನು ಕೋರಿ ಸುಪ್ರೀಂಕೋರ್ಟ್ನ ಮೊರೆಹೋಗಿದ್ದರು. ಸುಪ್ರೀಂಕೋರ್ಟ್ ಜ.21ರಂದೇ ಜಾಮೀನು ಮಂಜೂರು ಮಾಡಿದೆ. ಆದರೆ, ಸುಪ್ರೀಂಕೋರ್ಟ್ನ ಆದೇಶ ಪ್ರತಿ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಸಲ್ಲಿಕೆ ಯಾಗಿದ್ದು ಮಾತ್ರ ಇಂದು(ಶನಿವಾರ) ಮಧ್ಯಾಹ್ನ. ಇದನ್ನೂ ಓದಿರಿ ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್.. ನನ್ನ ಮಗಳನ್ನು ಕಾಪಾಡಿ…
ಇನ್ನೇನ್ನು ಜೈಲಿಂದ ಮನೆಗೆ ಹೋಗುವ ತವಕದಲ್ಲಿದ್ದ ರಾಗಿಣಿಗೆ ಜಾಮೀನು ಸಂಬಂಧ ಎನ್ಡಿಪಿಎಸ್ ಕೋರ್ಟ್ ಕೆಲ ಷರತ್ತುಗಳನ್ನ ವಿಧಿಸಿದೆ. 3 ಲಕ್ಷ ಮೌಲ್ಯದ ಬಾಂಡ್, ಇಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿದೆ. ಈ ಷರತ್ತುಗಳನ್ನು ಇಂದೇ ಪೂರೈಸಲು ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ಸೋಮವಾರ(ಜ.25) ಷರತ್ತು ಪೂರೈಸಿ ಬಿಡುಗಡೆಗೆ ಆದೇಶ ಪಡೆಯಲು ರಾಗಿಣಿ ಪರ ವಕೀಲರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.