ಸಿರಿಯಾದಲ್ಲಿ ಭೀಕರ ಡ್ರೋಣ್​ ದಾಳಿ: 100ಕ್ಕೂ ಹೆಚ್ಚು ಮಂದಿ ದುರ್ಮರಣ

siriya
ಸಿರಿಯಾದಲ್ಲಿ ಡ್ರೋಣ್​ ದಾಳಿಯಿಂದ ಬೆಂಕಿ ಹೊತ್ತಿರುವುದು.
Published on

ಬೀರುಟ್​(ಸಿರಿಯಾ): ಕಳೆದ 13ವರ್ಷದಿಂದ ಅಂತರ್ಯುದ್ಧದಲ್ಲಿ ನಲುಗಿಹೋಗಿರುವ ಸಿರಿಯಾದಲ್ಲಿ ಭೀಕರ ಡ್ರೀಣ್​ ದಾಳಿ ಸಂಭವಿಸಿದೆ. ಹೋಮ್ಸ್​ ನಗರದಲ್ಲಿ ಗುರುವಾರ ಸೇನೆ ಸಿಪಾಯಿಗಳ ಸ್ನಾತಕೋತ್ಸವ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಸೈನಿಕರು ಮತ್ತು ಸಾರ್ವಜನಿಕರು ಸೇರಿ 100ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದು, 125ಮಂದಿ ಗಾಯಗೊಂಡಿದ್ದಾರೆ.

ಸಿರಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜರುಗಿದ ತೀವ್ರವಾದ ದಾಳಿ ಇದಾಗಿದೆ ಎನ್ನಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಸಿರಿಯಾ ಸರ್ಕಾರ ಮೂರು ದಿನಗಳ ಸಂತಾಪ ಪ್ರಕಟಿಸಿದೆ. ವಿದೇಶಿ ಶಕ್ತಿಗಳ ಬೆಂಬಲದಿಂದ ಉಗ್ರರು ಸ್ಫಟಕಗಳನ್ನು ಡ್ರೋಣ್​ ನೆರವಿನಿಂದ ಸ್ಫೋಟಿಸಿ ಕೃತ್ಯವೆಸಗಿದ್ದಾರೆ ಎಂದು ಸೇನೆ ಆರೋಪಿಸಿದೆ. ಘಟನೆಗೆ ತಾವೇ ಕಾರಣವೆಂದು ಯಾರೂ ಹೇಳಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net