More

    ಖ್ಯಾತ​​ ನಟನ ಕೈಹಿಡಿಯಲಿದ್ದಾರೆ ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್

    ಹೈದರಾಬಾದ್​:  ನಟ ಪುನೀತ್​​ ರಾಜ್​ಕುಮಾರ್​​ ಅಭಿನಯದ ʼನಟ ಸಾರ್ವಭೌಮʼ  ಸಿನಿಮಾ ನಟಿ ಅನುಪಮಾ ಪರಮೇಶ್ವರನ್ ತೆಲುಗಿನ ನಟ ರಾಮ್ ಪೋತಿನೇನಿ ಜತೆ ಅನುಪಮಾ ಮದುವೆ ಆಗಲಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ.

    ಕನ್ನಡ ಸಿನಿಮಾ ರಂಗದಲ್ಲಿ ಡಾ ಪುನೀತ್‌ ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮನಗೆದ್ದಿರುವ ನಟಿ  ಅನುಪಮಾ ಪರಮೇಶ್ವರನ್. ಕಳೆದ ಬಾರಿ ಕ್ರಿಕೆಟರ್ ಜಸ್ಟ್ರಿತ್ ಬುಮ್ರಾ ಜತೆ ಅನುಪಮಾ ಮದುವೆ ಎಂದು ಸುದ್ದಿಯಾಗಿತ್ತು. ಬಳಿಕ ಈ ಸುದ್ದಿ ಸುಳ್ಳು ಎಂದು ನಟಿ ಸ್ಪಷ್ಟನೆ ನೀಡಿದ್ದರು. ಈಗ ತೆಲುಗು ಹೀರೋ ರಾಮ್ ಪೋತಿನೇನಿ ಜತೆ ನಟಿ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

    2018ರಲ್ಲಿ ‘ಹಲೋ ಗುರು ಪ್ರೇಮ ಕೋಸಮೆ’ ಎಂಬ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು. ಶೂಟಿಂಗ್‌ ಸಂದರ್ಭದಲ್ಲಿ ಅನುಪಮಾ- ರಾಮ್‌ಗೆ ಪ್ರೇಮಾಂಕುರವಾಗಿದ್ದು, ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

    ಅನುಪಮಾ ಮತ್ತು ತೆಲುಗು ನಟ ರಾಮ್ ಪೋತಿನೇನಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತಾಗಿ ಕೆಲವು ತೆಲುಗು ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿವೆ. ಇದೀಗ ಮದುವೆ ಸುದ್ದಿಗೆ ನಟಿಯ ತಾಯಿ ಸುನಿತಾ ಪ್ರತಿಕ್ರಿಯಿಸಿದ್ದಾರೆ. ಹೊರಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ. ಅಂತಹ ಯಾವುದೇ ಘಟನೆ ಇಲ್ಲ ಎನ್ನುತ್ತಾರೆ.  ಈ ಸುದ್ದಿ ಎಷ್ಟರ ಮಟ್ಟಿಗೆ ನಿಜವಾಗಿದೆ ಎನ್ನುವುದನ್ನು ಸ್ವತಃ ನಟಿಯೇ ಸ್ಟಷ್ಟನೆ ನೀಡಬೇಕಾಗಿದೆ.

    ಕರ್ಲಿ ಹೇರ್‌, ತೆಳ್ಳಗೆ ಬೆಳ್ಳಗೆ ಕ್ಯೂಟ್‌ ಆಗಿರುವ ನಟಿ ಅನುಪಮಾ ಪರಮೇಶ್ವರನ್ ಟಾಲಿವುಡ್‌ ಮಾತ್ರವಲ್ಲದೇ ಸ್ಯಾಂಡಲ್ವುಡನಲ್ಲೂ ಇವರ ನಟನೆ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಡಾ ಪುನೀತ್‌  ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮನಗೆದಿದ್ದಾರೆ.

    ಪಾಕ್​ನಲ್ಲಿ ಅಂಧತ್ವದಿಂದ ಬಳಲುತ್ತಿದ್ದಾರೆ 4 ಲಕ್ಷ ಮಂದಿ!; ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts