ನವದೆಹಲಿ: ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಾಗ ನೀವು ಏನು ಮಾಡುತ್ತೀರಿ? ಸಹಜವಾಗಿ ಕೆಲವರು ಅದನ್ನು ಬಿಟ್ಟು ಬೇರೆ ಪ್ರಶ್ನೆಯತ್ತ ಗಮನ ಹರಿಸುತ್ತಾರೆ. ಇನ್ನು ಕೆಲವರೂ ಏನಾದರೂ ತುಂಬಿಸೋಣ ಅಂತ ಮನಸ್ಸಿಗೆ ಅನಿಸಿದ್ದನ್ನು ಬರೆಯುತ್ತಾರೆ. ಅದೇ ರೀತಿ ಉತ್ತರ ಪತ್ರಿಕೆಯಲ್ಲಿ ಹಾಡಿನ ಸಾಹಿತ್ಯ ಬರೆದಿರುವುದು ಮತ್ತು ತಮ್ಮ ನೋವಿನ ಮಾತುಗಳನ್ನು ಬರೆದಿರುವುದನ್ನು ಈಗಾಗಲೇ ಹಲವು ಬಾರಿ ನಾವು ನೋಡಿದ್ದೇವೆ.
ಈ ರೀತಿಯ ಪ್ರಯತ್ನಗಳಿಂದ ಅಂಕಗಳನ್ನು ಗಳಿಸದೇ ಇದ್ದರೂ, ಅವು ಖಂಡಿತವಾಗಿಯೂ ಉಳಿದವುಗಳಿಗಿಂತ ಎದ್ದು ಕಾಣುತ್ತವೆ ಮತ್ತು ಎಲ್ಲರ ಗಮನವನ್ನು ಸೆಳೆಯುತ್ತವೆ. ಇತ್ತೀಚಿನ ಪ್ರಕರಣವೊಂದರಲ್ಲಿ, ಮಾನವನ ಹೃದಯ ಬಿಡಿಸಿ, ಅಂಗಗಳನ್ನು ಹೆಸರಿಸಿ, ಅದರ ಕಾರ್ಯಗಳನ್ನು ವಿವರಿಸಲು ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿತ್ತು. ಅಲ್ಲದೆ, ವಿದ್ಯಾರ್ಥಿಯು ಸಹ ತುಂಬಾ ಸೊಗಸಾಗಿ ಹೃದಯದ ಚಿತ್ರವನ್ನು ಬಿಡಿಸಿದ್ದಾನೆ. ಆದರೆ, ಹೃದಯದ ಕೋಣೆಗಳನ್ನು ಹೆಸರಿಸುವಾಗ ವಿದ್ಯಾರ್ಥಿ ಯಾರೂ ನಿರೀಕ್ಷೆ ಮಾಡಿರದ ಹೆಸರನ್ನುಗಳನ್ನು ಬರೆದಿದ್ದಾನೆ.
ಅಷ್ಟಕ್ಕೂ ವಿದ್ಯಾರ್ಥಿ ಬರೆದಿದ್ದೇನು?
ಇಲ್ಲಿ ವಿದ್ಯಾರ್ಥಿಯು ಶೂನ್ಯ ಅಂಕಗಳನ್ನು ಗಳಿಸಿದರೂ ಕೂಡ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಏಕೆಂದರೆ, ಆ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ತನ್ನ ಹೃದಯವನ್ನೇ ತೆರೆದಿಟ್ಟಿದ್ದಾನೆ. ಅಷ್ಟಕ್ಕೂ ವಿದ್ಯಾರ್ಥಿ ಬರೆದ ಆ ಹೆಸರುಗಳು ಯಾವುವು? ಎಲ್ಲವು ಕೂಡ ಹುಡುಗಿಯರ ಹೆಸರಾಗಿದೆ. ಈ ಮೂಲಕ ತನ್ನ ಭಾವನೆಗಳನ್ನು ಉತ್ತರ ಪತ್ರಿಕೆ ಮೂಲಕ ಬಹಿರಂಗಪಡಿಸಿದ್ದಾನೆ.
ಹೆಸರುಗಳು ಯಾವುವು?
ಅಪರಿಚಿತ ವಿದ್ಯಾರ್ಥಿ ಚಿತ್ರಿಸಿರುವ ಹೃದಯದಲ್ಲಿ ಐದು ಹುಡುಗಿಯರ ಹೆಸರಿದೆ. ಅವುಗಳೆಂದರೆ, ಹರಿತಾ, ಪ್ರಿಯಾ, ರೂಪ, ನಮಿತಾ ಮತ್ತು ಪೂಜಾ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಹುಡುಗಿಯರ ಹೆಸರನ್ನು ಬರೆದ ಬಳಿಕ ಅವರ ಕಾರ್ಯಕಗಳನ್ನು ಸಹ ವಿದ್ಯಾರ್ಥಿ ವಿವರಿಸಿದ್ದಾನೆ.
* ಪ್ರಿಯಾ: ಯಾವಾಗಲೂ ನನ್ನೊಂದಿಗೆ ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡುತ್ತಿರುತ್ತಾಳೆ. ಹೀಗಾಗಿ ನಾನು ಆಕೆಯನ್ನು ಇಷ್ಟಪಡುತ್ತೇನೆ.
* ರೂಪಾ: ಈಕೆ ನನ್ನೊಂದಿಗೆ ಸ್ನಾಪ್ಚಾಟ್ನಲ್ಲಿ ಚಾಟ್ ಮಾಡುತ್ತಾಳೆ. ತುಂಬಾ ಸುಂದರವಾಗಿದ್ದಾಳೆ ಮತ್ತು ಕ್ಯೂಟ್ ಆಗಿದ್ದಾಳೆ.
* ನಮಿತಾ: ಈಕೆ ನಮ್ಮ ನೆರೆಮನೆಯವರ ಮಗಳು. ಈಕೆಗೆ ಉದ್ದವಾದ ಕೂದಲು ಮತ್ತು ದೊಡ್ಡ ಕಣ್ಣುಗಳಿವೆ.
* ಪೂಜಾ: ಈಕೆ ನನ್ನ ಮಾಜಿ ಪ್ರೇಯಸಿ. ನಾನು ಆಕೆಯನ್ನು ಮರೆಯಲು ಆಗುತ್ತಿಲ್ಲ.
* ಹರಿತಾ: ಹರಿತಾ ನನ್ನ ಸಹಪಾಠಿ
ಸದ್ಯ ವಿದ್ಯಾರ್ಥಿ ಬರೆದ ಹೃದಯದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. (ಏಜೆನ್ಸೀಸ್)
ಸೆಮಿಸ್ ತಲುಪಿದ ಅಫ್ಘಾನಿಸ್ತಾನ… ರೋಹಿತ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಶೀದ್ ಖಾನ್!
ಡಿವೋರ್ಸ್ ಹಾದಿಯಲ್ಲಿ ಮತ್ತೊಂದು ಸ್ಟಾರ್ ಜೋಡಿ: ನಟ ಜಯಂ ರವಿ ದಾಂಪತ್ಯ ಜೀವನದಲ್ಲಿ ಬಿರುಗಾಳಿ!?