ಬೆಂಗಳೂರು: ವಿಶ್ವಪರ್ಯಟನೆ ಮಾಡುತ್ತ, ಕನ್ನಡದಲ್ಲೇ ವಿಶ್ವದ ಪರಿಚಯ ಮಾಡಿಸುತ್ತ ಲಕ್ಷಾಂತರ ಜನರ ಮನಸೂರೆಗೊಳಿಸಿರುವ ಡಾ.ಬ್ರೋ (ಗಗನ್ ಶ್ರೀನಿವಾಸ್) ‘ರೋಮಿಂಗ್ ಸ್ಟಾರ್’ ಎಂದರೂ ಅತಿಶಯೋಕ್ತಿ ಅಲ್ಲ. ಅದರಲ್ಲೂ ಇನ್ನೊಂದು ವಿಷಯದಲ್ಲಂತೂ ಅವರನ್ನು ‘ಸೂಪರ್ ಸ್ಟಾರ್’ ಎಂದೇ ಹೇಳಬಹುದು.
ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್ವುಡ್ನಲ್ಲೂ ಸಿನಿಮಾ ಸ್ಟಾರ್ಗಳು ಬೆಟ್ಟಿಂಗ್ ಆ್ಯಪ್ನಂಥವುಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಹಾಗೆ ಅಂಥವುಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಕೆಲವು ಸ್ಟಾರ್ ನಟರು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದೂ ಉಂಟು. ಆದರೆ ಈ ವಿಷಯದಲ್ಲಿ ಡಾ.ಬ್ರೋ ಸ್ವಯಂನಿಯಂತ್ರಣ ಹಾಕಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.
1 ನಿಮಿಷಕ್ಕೆ 70 ಸಾವಿರ ಕೊಟ್ರೂ ಬೇಡ: ಗಗನ್ಗೆ ಯೂಟ್ಯೂಬ್ನಲ್ಲಿ 11 ಲಕ್ಷ, ಫೇಸ್ಬುಕ್ನಲ್ಲೂ 11 ಲಕ್ಷ ಫಾಲೋವರ್ಸ್ ಇದ್ದಾರೆ. ಅವರು ಒಂದೊಂದು ಕಂಟೆಂಟ್ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನಕ್ಕೆ ತಲುಪಿ ಸಾವಿರಾರು ಪ್ರತಿಕ್ರಿಯೆ ಪಡೆಯುತ್ತದೆ. ಅದೇ ಕಾರಣಕ್ಕೆ ಹಲವರು ಜಾಹೀರಾತು ಕೊಡಲು ಮುಂದೆ ಬರುತ್ತಾರೆ. ಆದರೆ ಈ ವಿಷಯದಲ್ಲೂ ಗಗನ್ ಕಟ್ಟುನಿಟ್ಟು. ಬೆಟ್ಟಿಂಗ್ ಆ್ಯಪ್ನವರು 1 ನಿಮಿಷದ ಜಾಹೀರಾತಿಗೆ ಸುಮಾರು 70 ಸಾವಿರ ರೂ. ಕೊಡುತ್ತಾರೆ. ಆದರೆ ಅಂಥ ಜಾಹೀರಾತು ನಾನು ಸ್ವೀಕರಿಸುವುದಿಲ್ಲ. ಜನ ನಮಗೆ ಹೆಸರು ಕೊಟ್ಟು ದುಡ್ಡೂ ಕೊಡುವಾಗ ನಾವ್ಯಾಕೆ ಅವರಿಗೆ ಅಂಥ ಆ್ಯಪ್ ಕೊಡಬೇಕು, ಆ ಕೆಲಸ ನಾನು ಮಾಡಲ್ಲ. ಜನರಿಗೆ ಪ್ರಯೋಜನವಾಗುವ ಜಾಹೀರಾತು ಮಾತ್ರ ಸ್ವೀಕರಿಸುತ್ತೇನೆ ಎನ್ನುತ್ತಾರೆ.
ಸ್ವಾತಂತ್ರ್ಯವೇ ಮುಖ್ಯ: ಪ್ರಾಯೋಜಕತ್ವದ ವಿಷಯದಲ್ಲೂ ಗಗನ್ ಸ್ಪಷ್ಟವಾಗಿದ್ದಾರೆ. ತಮ್ಮ ಪ್ರಯಾಣಕ್ಕೆ ಯಾರದ್ದಾದರೂ ಪ್ರಾಯೋಜಕತ್ವ ಪಡೆದರೆ ನನಗೆ ಸ್ವಾತಂತ್ರ್ಯ ಇರುವುದಿಲ್ಲ. ಹಣಕ್ಕಾಗಿ ನಾನು ಸ್ವಾತಂತ್ರ್ಯ ಕಳೆದುಕೊಳ್ಳುವುದಿಲ್ಲ. ನಾಲ್ಕು ಸ್ಥಳ ನೋಡುವ ಬದಲು ಒಂದೇ ಸ್ಥಳ ನೋಡಿದರೂ ಪರವಾಗಿಲ್ಲ, ನನಗೆ ಸ್ವಾತಂತ್ರ್ಯ ಮುಖ್ಯ ಎಂಬುದು ಡಾ.ಬ್ರೋ ಖಡಕ್ ಮಾತು.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..
ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ
ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್ಕ್ಲೂಸಿವ್ ಫೋಟೋಗಳು..