ರೂಟ್​, ಸ್ಮಿತ್​, ಕೇನ್​ ಅಲ್ಲವೇ ಅಲ್ಲಾ... Virat Kohli ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್​ ಆಟಗಾರ

Virat Kohli
Published on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ (Virat Kohli) ಅವರ ರನ್​ ಬರ ಮುಂದುವರೆದಿದ್ದು, ಇದಕ್ಕೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಸಾಕ್ಷಿಯಾಗಿತ್ತು. ಟೆಸ್ಟ್​ ಪಂದ್ಯದ ಎರಡು ಇನ್ನಿಂಗ್ಸ್​ನಿಂದ ಒಟ್ಟು 23 ರನ್​ ಸಿಡಿಸಿ ತೀವ್ರ ಟೀಕೆಗೆ ಗುರಿಯಾಗಿರುವ ವಿರಾಟ್​ ಅವರ ಬೆಂಬಲಕ್ಕೆ ಇದೀಗ ಟೀಮ್​ ಇಂಡಿಯಾದ(Team India) ಮಾಜಿ ಆಟಗಾರ ಪಾರ್ಥೀವ್​ ಪಟೇಲ್​ ನಿಂತಿದ್ದು, ವಿರಾಟ್​ ರನ್​ ಬರ ಎದುರಿಸಲು ಕಾರಣವನ್ನು ತಿಳಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಾರ್ಥೀವ್​, ವಿರಾಟ್​ ತನಗಾಗಿ ಸೆಟ್​​ ಮಾಡಿಕೊಂಡಿರುವ ಸ್ಟಾಂಡರ್ಡ್​ನಿಂದಾಗಿ ಒತ್ತಡವನ್ನು ಎದುರಿಸುತ್ತಿದ್ದಾನೆ. ನನ್ನ ಪ್ರಕಾರ ಜೋ ರೂಟ್​, ಕೇನ್​ ವಿಲಿಯಮ್ಸನ್​ ಅಥವಾ ಸ್ಟೀವ್​ ಸ್ಮಿತ್​ ಕೂಡ ಈ ರೀತಿಯ ಒತ್ತಡವನ್ನು ಎದುರಿಸುತ್ತಿರುತ್ತಾರೆ ಎಂಬುದು ನನ್ನ ಅನಿಸಿಕೆ. ಆತನ ಮೇಲೆ ನಿರೀಕ್ಷೆಯ ಒತ್ತಡ ಹೆಚ್ಚಿದ್ದು, 60 ಅಥವಾ 70 ರನ್​ ಗಳಿಸಿದರೂ ಅದು ವೈಫಲ್ಯ ಎಂದೇ ಪರಿಗಣಿಸಲಾಗುತ್ತದೆ.

Parthiv Patel

ಏಕೆಂದರೆ ಆತ ಪ್ರತಿಬಾರಿ ಮೈದಾನಕ್ಕೆ ಇಳಿದಾಗ ನಾವು ಶತಕವನ್ನು ನಿರೀಕ್ಷಿಸುತ್ತೇವೆ. ಆತ ಪ್ರತಿಬಾರಿಯೂ ತೀವ್ರತೆಯೊಂದಿಗೆ ಆಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ನನ್ನ ಪ್ರಕಾರ ಅನುಭವಿಸಬೇಕಾದ ಒತ್ತಡದ ಪ್ರಕಾರವನ್ನು ಯೋಚಿಸಬಹುದು ಎಂದು ನಾನು ಭಾವಿಸುವುದಿಲ್ಲ. ಈ ಬಗ್ಗೆ ಆತ ಗಮನಹರಿಸುವುದು ಸೂಕ್ತ ಎಂದು ಪಾರ್ಥೀವ್​ ಪಟೇಲ್​ ಅಭಿಪ್ರಾಯಪಟ್ಟಿದ್ದಾರೆ.

ಈವರೆಗೆ 114 ಟೆಸ್ಟ್​ ಪಂದ್ಯಗಳನ್ನು ಆಡಿರುವ ವಿರಾಟ್​ 193 ಇನ್ನಿಂಗ್ಸ್‌ಗಳಲ್ಲಿ 48.74 ಸರಾಸರಿಯಲ್ಲಿ 29 ಶತಕ ಮತ್ತು 30 ಅರ್ಧಶತಕಗಳೊಂದಿಗೆ 8,871 ರನ್ ಗಳಿಸಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್​ ರನ್​ ಬರವನ್ನು ನೀಗಿಸುತ್ತಾರೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net