ಇಂಫಾಲ್: ನಾಯಿ ಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಿ ನಾಗಾಲ್ಯಾಂಡ್ ಸರ್ಕಾರ 2020ರಲ್ಲಿ ಹೊರಡಿಸಿದ್ದ ಆದೇಶವನ್ನು ಗುವಾಹಟಿ ಹೈಕೋರ್ಟ್ ರದ್ದುಗೊಳಿಸಿದೆ.
ಇದನ್ನೂ ಓದಿ: ಮೀಸಲಾತಿ ನಿಗಧಿಪಡಿಸುವ ಸಭೆಗೆ ಆಗಮಿಸಿ: ಡಾ.ಬಿ.ಸಿ.ಸತೀಶ
ಸರ್ಕಾರವು ಈ ಹಿಂದೆ ಆದೇಶವನ್ನು ಹೊರಡಿಸಿ ನಾಯಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಆಮದು ಮಾಡಿಕೊಳ್ಳುವುದು, ನಾಯಿಗಳ ಮಾರಾಟ, ಮಾರುಕಟ್ಟೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ನಾಯಿ ಮಾಂಸವನ್ನು ಮಾರಾಟ ಮಾಡುವುದನ್ನು ನಿಷೇಧಿಸಿತ್ತು. ಇದು ರಾಜ್ಯದಲ್ಲಿ ವ್ಯಾಪಕವಾದ ವಿವಾದವನ್ನು ಹುಟ್ಟುಹಾಕಿತ್ತು.
ನಾಗಾ ಬುಡಕಟ್ಟುಗಳಿಗೆ ತಮ್ಮ ಸಾಂಪ್ರದಾಯಿಕ ಕಾನೂನುಗಳು ಮತ್ತು ಸಾಮಾಜಿಕ ಆಚರಣೆಗಳನ್ನು ಆಚರಿಸುವ ಮತ್ತು ಸಂರಕ್ಷಿಸುವ ಹಕ್ಕನ್ನು ನೀಡಲಾಗಿದೆ. 2011ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಅಡಿಯಲ್ಲಿ ನಾಯಿಗಳ ಸೇವನೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ.
ನಾಗಾಲ್ಯಾಂಡ್‌ನಲ್ಲಿರುವ ಬುಡಕಟ್ಟು ಜನಾಂಗದವರು ನಾಯಿ ಮಾಂಸವನ್ನು ಸೇವಿಸುತ್ತಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಹಾಗಾಗಿ ನಾಯಿ ಮಾಂಸ ನಿಷೇಧ ಸೂಕ್ತವಾದುದಲ್ಲ ಎಂದು ಹೈಕೋರ್ಟ್ ಹೇಳಿದೆ.(ಏಜೆನ್ಸೀಸ್)