More

    ಉಗುರುಗಳು ಪದೇ ಪದೇ ಕಟ್​ ಆಗ್ತಿದ್ರೆ ಈ ಟಿಪ್ಸ್​​ ಆ್ಯಂಡ್​ ಟ್ರಿಕ್ಸ್​​ ನಿಮಗಾಗಿ…

    ಬೆಂಗಳೂರು: ಉಗುರು ಉತ್ತಮ ಆರೋಗ್ಯದ ಸಂಕೇತವಾಗಿದ್ದು, ಇಲ್ಲಿನ ಬಣ್ಣ ಹಾಗೂ ಗೆರೆಗಳ ಆಧಾರದ ಮೇಲೆ ಶರೀರದ ಆರೋಗ್ಯಕರ ಲಕ್ಷಣಗಳು ಗುರುತಿಸಬಹುದಾಗಿದೆ. ಸರಿಯಾದ ಆಹಾರಕ್ರಮ ಮತ್ತು ಮನೆಮದ್ದುಗಳಿಂದ ಉದ್ದ, ಸುಂದರ ಹಾಗೂ ದೃಢವಾದ ಉಗುರುಗಳು ಬೆಳೆಯುವಂತೆ ಮಾಡಬಹುದು.

    ನಿಂಬೆ ತುಂಡನ್ನು ತೆಗೆದುಕೊಂಡು ದಿನಕ್ಕೆ ಒಮ್ಮೆಯಾದರೂ ನಿಮ್ಮ ಬೆರಳಿನ ಉಗುರು ಮತ್ತು ಕಾಲ್ಬೆರಳ ಉಗುರುಗಳ ಮೇಲೆ ಉಜ್ಜಿ, 5 ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಉಗುರುಗಳು ಬೆಳೆಯಲು ಸಹಾಯ ಮಾಡುವುದರ ಜತೆಗೆ ಉಗುರುಗಳನ್ನು ಬ್ಯಾಕ್ಟೀರಿಯಾ ಮುಕ್ತವಾಗಿಡುತ್ತದೆ.

    ಇದನ್ನೂ ಓದಿ: ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವುದು ಈ ಕುಟುಂಬದ ಸಂಪ್ರದಾಯವಂತೆ!

    ಬೆಚ್ಚಗಿನ ತೆಂಗಿನ ಎಣ್ಣೆಯಿಂದ ನಿಮ್ಮ ಉಗುರುಗಳನ್ನು ಮಸಾಜ್ ಮಾಡುವುದರಿಂದ, ವೇಗವಾಗಿ ಉಗುರಿನ ಬೆಳವಣಿಗೆಯಾಗುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಕಿತ್ತಳೆ ರಸ ತೆಗೆದುಕೊಂಡು ನಿಮ್ಮ ಉಗುರುಗಳನ್ನು ಸುಮಾರು 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

    ಆಲಿವ್ ಎಣ್ಣೆಯು ನಿಮ್ಮ ಉಗುರುಗಳ ಒಳ ಪದರವನ್ನು ತಲುಪಿ, ಅಲ್ಲಿನ ಶುಷ್ಕತೆಯನ್ನು ಗುಣಪಡಿಸುತ್ತದೆ. ಇದು ರಕ್ತ ಪರಿಚಲನೆಗೆ ಸಹಾಯ ಮಾಡಿ, ಉಗುರು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ವಲ್ಪ ವರ್ಜಿನ್ ಆಲಿವ್ ಎಣ್ಣೆಯನ್ನು ಬೆಚ್ಚಗೆ ಕಾಯಿಸಿ, ಸುಮಾರು ಐದು ನಿಮಿಷಗಳ ಕಾಲ ನಿಮ್ಮ ಉಗುರುಗಳು ಮತ್ತು ಹೊರಪೊರೆಗಳನ್ನು ನಿಧಾನವಾಗಿ ಮಸಾಜ್ ಮಾಡಿ. ನಿಮ್ಮ ಕೈಗಳನ್ನು ಕೈಗವಸುಗಳಿಂದ ಮುಚ್ಚಿ ಮತ್ತು ರಾತ್ರಿಯಿಡೀ ವಿಶ್ರಾಂತಿಗೆ ಬಿಡಿ.

    ಎಲೆಗಳ ತರಕಾರಿಗಳು, ವಿಶೇಷವಾಗಿ ಪಾಲಕ್​ ಹೆಚ್ಚಿನ ಮಟ್ಟದ ವಿಟಮಿನ್ ಬಿ9 ಪ್ರೋಟಿನ್​ಗಳನ್ನು ಒಳಗೊಂಡಿದೆ. ಇದು ಉಗುರುಗಳ ಬೆಳವಣಿಗೆಗೆ ಪೂರಕವಾಗಿದ್ದು, ಅವುಗಳನ್ನು ಬಲಪಡಿಸುತ್ತದೆ. ಎಲ್ಲ ಮನೆಮದ್ದುಗಳು ಎಲ್ಲರಿಗೂ ಯಶಸ್ಸನ್ನು ನೀಡುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts