BBKS10: ಪ್ರತಾಪ್ ಹೆಣ್ಮಕ್ಳನ್ನು‌ ನೋಡೋ ರೀತಿ ಸರಿ ಇಲ್ವಾ?

Untitled design - 2023-11-05T164411.145
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಇದೀಗ ಯಶಸ್ವಿಯಾಗಿ ಮುಂದುವರೆಯುತ್ತಿದ್ದು, ನಾಲ್ಕನೇ ವಾರಾಂತ್ಯಕ್ಕೆ ಕಾಲಿಟ್ಟಿದೆ. ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ನಟ. ನಿರೂಪಕ ಸುದೀಪ್​ ಮತ್ತೊಮ್ಮೆ ಮನೆಯ ಸ್ಪರ್ಧಿಗಳಿಗೆ ತಲುಪಿಸಬೇಕಿದ್ದ ಮಾತುಗಳನ್ನು ಗಂಭೀರವಾಗಿ ತಿಳಿಸಿದರು.

ವಿನಯ್​ ಮತ್ತು ಸಂಗೀತಾ ಅವರ ನಡುವಿನ ಏಕವಚನದ ವಾಗ್ದಾಳಿಗೂ ತಕ್ಕ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ನಮ್ರತಾ ಸೇರಿದಂತೆ ಇತರರಿಗೆ ನಿದರ್ಶನಗಳ ಮುಖೇನ ಸುದೀಪ್​ ಅರ್ಥೈಸಿದರು. ಇದೀಗ ಇದರ ಬೆನ್ನಲ್ಲೇ ಭಾನುವಾರದ ಸೂಪರ್​ ಸಂಡೆ ವಿತ್​ ಸುದೀಪ್​ ಸಂಚಿಕೆಯಲ್ಲಿ ಡ್ರೋನ್​ ಪ್ರತಾಪ್​ ವಿರುದ್ದ ಕೆಲವರು ಮಾಡಿದ ಆರೋಪವನ್ನು ಪ್ರಶ್ನಿಸಲಾಗಿದೆ.

ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿಗಳಲ್ಲಿ ಆಟದ ವೈಖರಿಯಲ್ಲಿ ಇರಬೇಕಿದ್ದ ಪೈಪೋಟಿ, ಜಿದ್ದಾಜಿದ್ದಿ ಕೇವಲ ಮಾತಿನಲ್ಲಿ, ಆರೋಪ-ಪ್ರತ್ಯಾರೋಪಗಳಲ್ಲಿ ಮಾತ್ರ ಕಾಣಿಸುತ್ತಿದೆ. ದಿನದಿಂದ ದಿನಕ್ಕೆ ಬಿಗ್​ ಮನೆ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ತೀವ್ರ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ಇಂದು ಸೂಪರ್​ ಸಂಡೆ ವಿತ್​ ಸುದೀಪ ಸಂಚಿಕೆಯಲ್ಲಿ ಕೆಲವರು ಪ್ರತಾಪ್​ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿಯಿಲ್ಲ ಎಂದು ಮಾಡಿದ ಆರೋಪವನ್ನು ಸುದೀಪ್​ ನೇರವಾಗಿ ಸ್ಪರ್ಧಿಗಳ ಬಳಿ ಪ್ರಶ್ನಿಸಿದ್ದಾರೆ.

ಪ್ರತಾಪ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ವಾ? ಕಳೆದ ವಾರ ವಿನಯ್ ಬಾಯಲ್ಲಿ ಇಂಥದೊಂದು ಮಾತು ಹೊರಬಂದಿತ್ತು. ಅದಕ್ಕೆ ಇಶಾನಿ‌ ಕೂಡ 'ಹೌದು. ನಂಗೂ ಗೊತ್ತು ಅದು' ಎಂದು ಅನುಮೋದಿಸಿದ್ದರು.‌ ತುಕಾಲಿ, ನಮ್ರತಾ ಕೂಡ ಆ ಮಾತನ್ನು ಅನುಮೋದಿಸಿದ್ದರು. ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಏನಾಯಿತು? ಸುದೀಪ್​ ಯಾರಿಗೆ ಕ್ಲಾಸ್​ ತೆಗೆದುಕೊಂಡರು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net