ಮುಂಬೈ: ಈ ವಾರ ಭಾರತೀಯ ಚಿತ್ರೋದ್ಯಮದ ಹಲವು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಅವುಗಳ ಪೈಕಿ ಸ್ಟಾರ ನಟರ ಚಿತ್ರಗಳೇ ಸಾಲುಗಟ್ಟಿ ನಿಂತಿವೆ. ವಿಶೇಷವೆಂದರೆ ಆ.15ರಂದು ದೇಶಾದ್ಯಂತ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತದೆ. ಇದೇ ದಿನದಂದು ಕೆಲವು ಫಿಲಂಗಳು ರಿಲೀಸ್ ಆಗುತ್ತಿದ್ದರೆ, ಇನ್ನು ಒಂದಷ್ಟು ಚಿತ್ರಗಳು ಶುಕ್ರವಾರದಂದು (ಆ.16) ತೆರೆಕಾಣಲು ಎದುರುನೋಡುತ್ತಿವೆ. ಸರಣಿ ರಜೆಗಳನ್ನು ಪಡೆಯಲಿರುವ ಪ್ರೇಕ್ಷಕರು, ಥಿಯೇಟರ್ನತ್ತ ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಲಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡೆ ತಮ್ಮ ಸಿನಿಮಾಗಳನ್ನು ಇದೇ ವಾರದಂದು ತೆರೆಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಚಿತ್ರರಸಿಕರ ಮನೆಗೆಲ್ಲಲು ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ತೊಡಗಿರುವ ಚಿತ್ರತಂಡ, ವಿಭಿನ್ನ ರೀತಿಯಲ್ಲಿ ಸಿನಿಪ್ರಿಯರ ಗಮನಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ತಜ್ಞರ ಆಗಮನ ನೀರು ಉಳಿಸಲು ಗಮನ: ಗೇಟ್ ಅಳವಡಿಕೆ ಪ್ರಕ್ರಿಯೆಗೆ ಚಾಲನೆ
ಬಾಲಿವುಡ್ನಿಂದ ‘ಸ್ತ್ರೀ 2’, ‘ಖೇಲ್ ಖೇಲ್ ಮೇನ್’ ಮತ್ತು ‘ವೇದಾ’ ಚಿತ್ರಗಳು ಅಖಾಡಕ್ಕಿಳಿದರೆ, ಟಾಲಿವುಡ್ನಿಂದ ‘ಡಬಲ್ ಐಸ್ಮಾರ್ಟ್’, ‘ಮಿ.ಬಚ್ಚನ್’ ಹಾಗೂ ‘ಏಯ್’ ಸಿನಿಮಾಗಳು ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಕರೆತರಲು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಇದರೊಟ್ಟಿಗೆ ತಮಿಳು ಚಿತ್ರರಂಗದಿಂದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅಭಿನಯದ ಒಂದೊಳ್ಳೆ ಕಥಾಹಂದರ ಹಾಗೂ ಉತ್ತಮ ಸಂದೇಶ ಹೊಂದಿರುವ ‘ರಘು ತಾತ’ ಚಿತ್ರ ಇದೇ ಆ.15ರಂದು ತೆರೆಗೆ ಬರಲು ಸಿದ್ಧವಾಗಿದೆ. ಆದ್ರೆ, ಇತರೆ ಸಿನಿಮಾಗಳಂತೆ ಸದ್ದು ಮಾಡದೆ, ಮೂಲೆಯಲ್ಲಿ ಇರುವುದು ಇದೀಗ ಕೆಲವು ಗೊಂದಲಗಳನ್ನು ಹುಟ್ಟುಹಾಕಿದೆ.
‘ರಘು ತಾತ’ ಕೀರ್ತಿ ನಟಿಸಿರುವ ಚಿತ್ರ ಎಂಬ ಸಂಗತಿ ಅವರ ಅಭಿಮಾನಿಗಳಿಗೆ ಗೊತ್ತಿದೆ. ಆದ್ರೆ, ಪ್ರಚಾರ ಕೆಲಸಗಳಲ್ಲಿ ಅಷ್ಟಾಗಿ ಸದ್ದು ಮಾಡದ ಕೀರ್ತಿ ಸಿನಿಮಾಗೆ ಸ್ಟಾರ್ ನಟರ ಸಿನಿಮಾಗಳು ಹಾಗೂ ಸಾಲು ಸಾಲು ಚಿತ್ರಗಳ ಬಿಡುಗಡೆಯೇ ಇದೀಗ ದೊಡ್ಡ ಹೊಡೆತ ಕೊಟ್ಟಿದ್ಯಾ? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಬಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳ ಮಧ್ಯೆ ರಘು ತಾತ ಮಂಕಾದಂತೆ ಕಾಣುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸಿನಿಪ್ರೇಕ್ಷಕರು ಕೂಡ ಚಿತ್ರಕ್ಕೆ ಯಾವುದೇ ಆಸಕ್ತಿ ತೋರಿರುವುದು ಕಂಡುಬಂದಿಲ್ಲ. ಒಟ್ಟಾರೆ ಸಿನಿಮಾ ಬಿಡುಗಡೆಯ ನಂತರ ಪ್ರೇಕ್ಷಕರು ಕೊಡುವ ಅಭಿಪ್ರಾಯಗಳ ಮೇಲೆಯೇ ಚಿತ್ರದ ಗೆಲುವು, ಸೋಲು ಸ್ಪಷ್ಟವಾಗಿ ತಿಳಿಯಲಿದೆ,(ಏಜೆನ್ಸೀಸ್).
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ
ವಿನೇಶ್ ಬೆಳ್ಳಿ ಪದಕದ ತೀರ್ಪು ಮತ್ತೆ ಮುಂದೂಡಿಕೆ! ಈ ದಿನದಂದು ಹೊರಬೀಳಲಿದೆ ಮುಂದಿನ ಅಪ್ಡೇಟ್