ಸರ್ಜರಿ ವೇಳೆ ತಪ್ಪಾಗಿ ಬೇರೆ ಅಂಗ ಕಟ್​ ಮಾಡಿದ ವೈದ್ಯ; ಮುಂದೇನಾಯ್ತು ನೀವೇ ನೋಡಿ..

ವಾಷಿಂಗ್ಟನ್​​ಡಿಸಿ: ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ರೋಗಿಯ ತಪ್ಪಾದ ಅಂಗ ತೆಗೆದ ನಂತರ ಅಧಿಕ ರಕ್ತಸ್ರಾವವಾಗಿ 70 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಆಪರೇಟಿಂಗ್ ಟೇಬಲ್‌ನಲ್ಲಿ ಅವರು ಮೃತಪಟ್ಟಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇದನ್ನು ಓದಿ: 6 ಪತ್ನಿಯರು, 10000 ಮಕ್ಕಳ ತಂದೆ ಹೆನ್ರಿ; ವಿಶ್ವದ ಅತ್ಯಂತ ಹಳೆಯ ಜೀವಂತ ಮೊಸಳೆ ಬಗ್ಗೆ ನಿಮಗೆಷ್ಟು ಗೊತ್ತು?

ವಿಲಿಯಂ ಬ್ರಿಯಾನ್ ಮತ್ತು ಅವರ ಪತ್ನಿ ಬೆವರ್ಲಿ ಕಳೆದ ತಿಂಗಳು ಫ್ಲೋರಿಡಾದಲ್ಲಿ ತಮ್ಮ ಸ್ಥಳಕ್ಕೆ ಭೇಟಿ ನೀಡಲು ಹೊರಟಾಗ ಇದ್ದಕ್ಕಿದ್ದಂತೆ ಬ್ರಿಯಾನ್​ ಅವರಿಗೆ ಕೆಳ ಎಡಹೊಟ್ಟೆ ನೋವು ಕಾಣಿಸಿಕೊಂಡಿದೆ. ಭಯಗೊಂಡ ಅವರು ತಕ್ಷಣವೇ ಅಸೆನ್ಶನ್ ಸೇಕ್ರೆಡ್ ಹಾರ್ಟ್ ಎಮರಾಲ್ಡ್ ಕೋಸ್ಟ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಕೆಲವೊಂದು ಪರೀಕ್ಷೆ ಮಾಡಿಸುವಂತೆ ಹೇಳಿ ವೈದ್ಯರು ತಿಳಿಸಿದ್ದಾರೆ.

ಬಳಿಕ ಜನರಲ್ ಸರ್ಜನ್ ಡಾ.ಥಾಮಸ್ ಶಕ್ನೋವ್ಸ್ಕಿ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಕ್ರಿಸ್ಟೋಫರ್ ಬಕಾನಿ ನೇತೃತ್ವದ ವೈದ್ಯಕೀಯ ತಂಡವು ಸರ್ಜರಿ ಮಾಡಿಸುವಂತೆ ಶಿಫಾರಸು ಮಾಡಿದೆ. ದಂಪತಿ ಅದಕ್ಕೆ ಒಪ್ಪದಿದ್ದಾಗ ಮುಂದೆ ಗಂಭೀರ ಸಮಸ್ಯೆಯನ್ನು ಅನುಭವಿಸಬೇಕಾಗಬಹುದು ಎಂದು ಹೇಳಿದ್ದಾರೆ. ಆರಂಭದಲ್ಲಿ ಸರ್ಜರಿ ಮಾಡಿಸಲು ಒಪ್ಪದ ದಂಪತಿಯನ್ನು ಬಳಿಕ ವೈದ್ಯರು ಒಪ್ಪಿಸಿದ್ದಾರೆ.

ಕಳೆದ ತಿಂಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಪರೇಷನ್​ ಮಾಡುವ ವೇಳೆ ಬ್ರಿಯಾನ್ ಚಿಕಿತ್ಸೆ ನೀಡಬೇಕಾದ ಅಂಗದ ಬದಲಿಗೆ ಲಿವರ್​ ಅನ್ನು ತೆಗೆದುಹಾಕಿದ್ದಾರೆ, ಆ ವೇಳೆ ಅಧಿಕ ರಕ್ತಸ್ರಾವವಾಗಿ ಅಲ್ಲಿಯೇ ಬ್ರಿಯಾನ್​ ಮೃತಪಟ್ಟಿದ್ದಾರೆ. ಬಳಿಕ ತಮ್ಮ ತಪ್ಪನ್ನು ಮುಚ್ಚಿಹಾಕಲು ವೈದ್ಯರು ಯತ್ನಿಸಿದರಾದರೂ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಅವರ ಪತ್ನಿ ಬೆವರ್ಲಿ ಪ್ರತಿಕ್ರಿಯಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರ ಅಸಮರ್ಥತೆಯಿಂದ ಬೇರೊಬ್ಬರು ಪ್ರಾಣ ಬಿಡುವುದನ್ನು ನಾನು ಸಹಿಸುವುದಿಲ್ಲ. ಇಲ್ಲಿಗೆ ಬರುವವರಿಗೆ ವೈದ್ಯರು ಈ ಹಿಂದೆ ತಪ್ಪಾದ ಸರ್ಜರಿ ಮಾಡಿ ವ್ಯಕ್ತಿಯೊಬ್ಬರು ಪ್ರಾಣಬಿಟ್ಟಿದ್ದಾರೆ ಎಂಬುದು ತಿಳಿಯಬೇಕು ಎಂದಿದ್ದಾರೆ.

ಸರ್ಜರಿ ವೇಳೆ ತಪ್ಪಾಗಿ ಬೇರೆ ಅಂಗ ಕಟ್​ ಮಾಡಿದ ವೈದ್ಯ; ಮುಂದೇನಾಯ್ತು ನೀವೇ ನೋಡಿ..

ಇನ್ನೂ ಈ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ, ಬ್ರಿಯಾನ್ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾವು ಈ ರೀತಿಯ ಆರೋಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಆಸ್ಪತ್ರೆ ಆರಂಭವಾದಗಿನಿಂದ ಇಲ್ಲಿಯವರೆಗ ಸುರಕ್ಷಿತ ಮತ್ತು ಗುಣಮಟ್ಟದ ಆರೈಕೆಯನ್ನು ಒದಗಿಸುತ್ತಾ ಬರಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ದಾಖಲಾಗುವವರ ಸುರಕ್ಷತೆಯೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದೆ. ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಯನ್ನು ಸದ್ಯ ಹಂಚಿಕೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್​​)

ಎಲ್ಲರ ಟಾರ್ಗೆಟ್​ ನಾನೇ ಆಗಿದ್ದೇನೆ ಎಂದಿದ್ದೇಕೆ ಬಿಟೌನ್​ ಕ್ವೀನ್​ ಕಂಗನಾ

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…