Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.
ಕೆಲವು ಮಕ್ಕಳಿಗೆ ತಂದೆ-ತಾಯಿ ಟೀ, ಬಿಸ್ಕೆಟ್ ಕೊಟ್ಟು ಅಭ್ಯಾಸ ಮಾಡಿಸುತ್ತಾರೆ. ಆದರೆ ಮಕ್ಕಳು ನಿತ್ಯವೂ ಟೀ ಕುಡಿದರೆ ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆ ಸಮಸ್ಯೆಗಳು ಯಾವುವು ಎಂದು ತಿಳಿಯೋಣ.
ಮಕ್ಕಳಿಗೆ ಟೀ ಅಭ್ಯಾಸ ಮಾಡುವುದರಿಂದ ಎದುರಾಗುವ ಮೊದಲನೆಯ ಸಮಸ್ಯೆಯೆಂದರೆ, ಹಲ್ಲಿನ ಆರೋಗ್ಯ. ಹೆಚ್ಚಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದಂತಕ್ಷಯದಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಚಹಾ. ಚಹಾ ಸಿಹಿಯಾಗಿರುತ್ತದೆ. ಅನೇಕ ಮಕ್ಕಳು ಚಹಾ ಕುಡಿದ ನಂತರ ಬಾಯಿ ತೊಳೆಯುವುದಿಲ್ಲ. ಅಲ್ಲದೆ, ಚಹಾದೊಂದಿಗೆ ಇತರ ಸಿಹಿತಿಂಡಿಗಳನ್ನು ತಿನ್ನುತ್ತಾರೆ. ಇದು ಹಲ್ಲುಗಳಿಗೆ ಸಕ್ಕರೆ ಅಂಟಿಕೊಳ್ಳುವಂತೆ ಮಾಡುತ್ತದೆ ಮತ್ತು ತ್ವರಿತವಾಗಿ ಹಲ್ಲು ಹುಳುಕಾಗಲು ಕಾರಣವಾಗುತ್ತದೆ.
ಚಹಾ ಮತ್ತು ಕಾಫಿಯಲ್ಲಿ ಬಹಳಷ್ಟು ಕೆಫೀನ್ ಇರುತ್ತದೆ. ಕೆಫೀನ್ ಹೊಂದಿರುವ ವಸ್ತುಗಳ ಅತಿಯಾದ ಸೇವನೆಯು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಚಹಾವು ಅಸಿಡಿಟಿ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಮಕ್ಕಳಿಗೆ ಟೀ ಕೊಡುವ ಬದಲು ಹರ್ಬಲ್ ಡ್ರಿಂಕ್ಸ್ ಕೊಡುವುದು ಉತ್ತಮ. ತುಳಸಿ ಎಲೆಗಳನ್ನು ಬೆರೆಸಿದ ನೀರು, ಸ್ವಲ್ಪ ಬೆಚ್ಚಗಿನ ನೀರನ್ನು ಮಕ್ಕಳಿಗೆ ನೀಡಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
2025ರಲ್ಲಿ ನಿಮ್ಮಲ್ಲಿ ಏನಾದರೂ ಬದಲಾವಣೆ ಕಾಣಲು ಬಯಸಿದರೆ ಈ ವಿಚಾರಗಳ ಮೇಲೆ ಗಮನಹರಿಸಿ…New Year 2025