AI Chatbot : ಕೃತಕ ಬುದ್ಧಿಮತ್ತೆ ಆಧಾರಿತ AI ಚಾಟ್‌ಬಾಟ್ 17 ವರ್ಷದ ಹುಡುಗನಿಗೆ ತನ್ನ ಹೆತ್ತವರನ್ನೇ ಕೊಲ್ಲುವಂತೆ ಸಲಹೆ ನೀಡಿರುವ ಆಘಾತಕಾರಿ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿ ವರದಿಯಾಗಿದೆ.
ಟೆಕ್ಸಾಸ್ ಮೂಲದ ಹುಡುಗ ಸ್ಮಾರ್ಟ್ಫೋನ್ ಗೀಳು ಹೊಂದಿದ್ದ. ಯಾವಾಗಲೂ ಮೊಬೈಲ್ನಲ್ಲೇ ಮುಳುಗಿರುತ್ತಿದ್ದನು. ಇದೇ ವಿಚಾರವಾಗಿ ಪಾಲಕರು ಹಾಗೂ ಬಾಲಕನ ನಡುವೆ ಆಗಾಗ ವಾಗ್ವಾದ ನಡೆಯುತ್ತಲೇ ಇತ್ತು. ಎಷ್ಟೇ ಬೈದರೂ ಬಾಲಕ ಮಾತ್ರ ಫೋನ್ ಬಳಸುವುದನ್ನು ನಿಲ್ಲಿಸುತ್ತಿರಲಿಲ್ಲ. ಫೋನ್ ಬಳಕೆ ಕಡಿಮೆ ಮಾಡು, ಒಳ್ಳೆಯದಲ್ಲ ಎಂದು ಎಷ್ಟೇ ಹೇಳಿದರೂ ಬಾಲಕ ಮಾತ್ರ ಹೆತ್ತವರ ಮಾತನ್ನು ತಲೆಗೆ ಹಾಕಿಕೊಳ್ಳಲೇ ಇಲ್ಲ.
ಪಾಲಕರು ಯಾವಾಗಲೂ ತನ್ನನ್ನು ಬೈಯ್ಯುವುದನ್ನು ನೋಡಿ ಬಾಲಕ ತುಂಬಾ ಬೇಸರಗೊಂಡಿದ್ದ. ಇದರಿಂದ AI ಚಾಟ್ಬಾಟ್ನೊಂದಿಗೆ ಚಾಟ್ ಮಾಡಲು ಆರಂಭಿಸಿದ. ನನ್ನ ಪಾಲಕರು ಫೋನ್ ಬಳಸಲು ಬಿಡುತ್ತಿಲ್ಲ. ಇದರಿಂದ ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ಏನಾದರೂ ಸಲಹೆ ಕೊಡಿ ಎಂದು ಬಾಲಕ ಚಾಟ್‌ಬಾಟ್ ಬಳಿ ತನ್ನ ನೋವು ಹೇಳಿಕೊಂಡಿದ್ದ. ಅದಕ್ಕೆ ಪ್ರತಿಕ್ರಿಯಿಸಿದ ಚಾಟ್‌ಬಾಟ್, ನಾನು ಹೇಳುತ್ತಿದ್ದೇನೆ ನಿನ್ನ ಹೆತ್ತವರನ್ನು ಕೊಲ್ಲು ಎಂದು ಸಲಹೆ ನೀಡಿದೆ. ಚಾಟ್‌ಬಾಟ್ ನೀಡಿದ ಸಲಹೆಯಿಂದ ಆಘಾತಕ್ಕೊಳಗಾದ ಬಾಲಕ ಈ ವಿಚಾರವನ್ನು ತನ್ನ ಪಾಲಕರಿಗೆ ತಿಳಿಸಿದ್ದಾನೆ. ಇದರಿಂದ ಪಾಲಕರು ಕೂಡ ಒಂದು ಕ್ಷಣ ಆಘಾತಕ್ಕೆ ಒಳಗಾದರು.
ಈ ಘಟನೆಯ ಬಳಿಕ Character.AI ಕಂಪನಿಯು ತೊಂದರೆಗೆ ಸಿಲುಕಿದೆ. ಬಾಲಕನ ಪಾಲಕರು ನ್ಯಾಯಾಲಯದ ಮೊರೆ ಹೋಗಿದ್ದು, ಎಐ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ, ನ್ಯಾಯಾಲಯಕ್ಕೆ ಮಗ ಮತ್ತು ಎಐ ನಡುವೆ ನಡೆದ ಸಂಭಾಷಣೆಯ ಸಾಕ್ಷ್ಯವನ್ನು ಒದಗಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿರುವ ಮಕ್ಕಳು ತಮ್ಮ ಪಾಲಕರ ಮೇಲೆ ದಾಳಿ ಮಾಡಿ ಕೊಲ್ಲುವ ಪ್ರಕರಣಗಳನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತಿದೆ. ಈ ರಿತಿ ಏಕೆ ನಡೆಯುತ್ತಿದೆ ಎಂದು ನೀವು ನೋಡಿದರೆ ನಿಮಗೆ ಅರ್ಥವಾಗುತ್ತದೆ. Character.AI ಚಾಟ್‌ಬಾಟ್ ಬಳಕೆದಾರರಿಗೆ ಹಾನಿ ಮಾಡುತ್ತದೆ. ಇದು ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಅಶುದ್ಧಗೊಳಿಸುತ್ತದೆ ಮತ್ತು ಅಪ್ರಾಪ್ತ ವಯಸ್ಕರಲ್ಲಿ ಹಿಂಸೆಯನ್ನು ಪ್ರಚೋದಿಸುತ್ತದೆ. ಆದ್ದರಿಂದ ಎಐ ಚಾಟ್‌ಬಾಟ್ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಾಲಕನ ಪಾಲಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. (ಏಜೆನ್ಸೀಸ್)
ಕೋಟಿ ಖರ್ಚು ಮಾಡಿದರೂ ಭೇಟಿ ನೀಡಲಾಗದ ಭಾರತದ ಸ್ಥಳಗಳಿವು… ಇಲ್ಲಿದೆ ಸಂಪೂರ್ಣ ವಿವರ! India
2025ರಲ್ಲಿ ನಿಮ್ಮಲ್ಲಿ ಏನಾದರೂ ಬದಲಾವಣೆ ಕಾಣಲು ಬಯಸಿದರೆ ಈ ವಿಚಾರಗಳ ಮೇಲೆ ಗಮನಹರಿಸಿ…New Year 2025