New Year 2025 : ನೆನಪುಗಳನ್ನು ಮಾತ್ರ ಉಳಿಸಿ ನಮ್ಮನ್ನು ಬಿಟ್ಟು ಹೋಗಲು 2024ನೇ ವರ್ಷ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ 2025ರ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹಳೆಯ ಕ್ಯಾಲೆಂಡರ್‌ಗಳನ್ನು ಕಸದ ಬುಟ್ಟಿಗೆ ಎಸೆದು ಹೊಸ ಕ್ಯಾಲೆಂಡರ್‌ಗಳನ್ನು ಗೋಡೆಗೆ ಹಾಕಲು ಜನರು ಮುಂದಾಗಿದ್ದಾರೆ. ಹೊಸ ವರ್ಷವನ್ನು ಬಹಳ ಸಂಭ್ರಮದಿಂದ ಬರಮಾಡಿಕೊಳ್ಳಲು ಜನ ಬಯಸಿದ್ದಾರೆ.
ಇನ್ನು ಹೊಸ ವರ್ಷ ಬಂದಾಗಲೆಲ್ಲ ಜನರು ಹೊಸ ಭರವಸೆಗಳೊಂದಿಗೆ ಅದನ್ನು ಸ್ವಾಗತಿಸುತ್ತಾರೆ. ಅಲ್ಲದೆ, ಜೀವನದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆಯೂ ಯೋಚನೆ ಮಾಡುತ್ತಾರೆ. ಹೀಗಾಗಿ 2025ನೇ ವರ್ಷ ನಿಮ್ಮ ಪಾಲಿಗೆ ಸಿಹಿ ವರ್ಷವಾಗಬೇಕಾದರೆ ನಿಮ್ಮ ಜೀವನದಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆ ಬದಲಾವಣೆ ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಅನಗತ್ಯ ಆ್ಯಪ್‌ಗಳನ್ನು ಡಿಲೀಟ್ ಮಾಡಿ
ನಮಗೆ ಅಗತ್ಯವಿರಲಿ ಇಲ್ಲದಿರಲಿ ಹಲವು ಆ್ಯಪ್‌ಗಳನ್ನು ಮೊಬೈಲ್ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತೇವೆ. ಅವುಗಳನ್ನು ಡಿಲೀಟ್ ಮಾಡಲು ಅನೇಕ ಬಾರಿ ಮರೆತಿರುತ್ತೇವೆ. ಇಂತಹ ಅಪ್ಲಿಕೇಶನ್‌ಗಳು ನಿಮ್ಮ ಗಮನವನ್ನು ಅಡ್ಡಿಪಡಿಸಬಹುದು. ಅದಕ್ಕಾಗಿಯೇ ವಾರಕ್ಕೊಮ್ಮೆ ಕುಳಿತು ನಿಮಗೆ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ.
ಸಣ್ಣ ಬದಲಾವಣೆಗಳನ್ನು ಮಾಡಿ
ಜೀವನದಲ್ಲಿ ಬದಲಾವಣೆಗಳು ಸುಲಭವಾಗಿ ಬರುವುದಿಲ್ಲ. ಅವುಗಳನ್ನು ಕ್ರಮೇಣ ನಿಮ್ಮ ಜೀವನದಲ್ಲಿ ಪರಿಚಯಿಸಬೇಕು. ನಿಮಗೆ ವ್ಯಾಯಾಮ ಮಾಡುವ ಅಭ್ಯಾಸವಿಲ್ಲ ಎಂದಿಟ್ಟುಕೊಳ್ಳಿ. ಹೊಸ ವರ್ಷದಲ್ಲಿ ನೀವು ಅದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಒಂದು ವಾರದವರೆಗೆ ಕೇವಲ ಹತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಮುಂದಿನ ವಾರ ಅದನ್ನು 20 ನಿಮಿಷಗಳಿಗೆ ಹೆಚ್ಚಿಸಿ. ಈ ರೀತಿಯಾಗಿ, ವ್ಯಾಯಾಮವು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.
ಗುರಿ ಕಡೆಗೆ ಹೋಗುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ
ಅನೇಕ ಬಾರಿ ನಾವು ನಮ್ಮ ಗುರಿಗಳನ್ನು ಮರೆತುಬಿಡುತ್ತೇವೆ. ಯಾವುದೇ ಕಾರಣಕ್ಕೂ ಅದನ್ನು ಮರೆಯಬೇಡಿ. ಪ್ರತಿದಿನ ಬೆಳಿಗ್ಗೆ ನೀವು ಎದ್ದಾಗ, ಜೀವನದಲ್ಲಿ ನೀವು ನಿಜವಾಗಿಯೂ ಏನನ್ನು ಸಾಧಿಸಲು ಬಯಸುತ್ತೀರಿ ಎಂದು ಯೋಚಿಸಲು ಎರಡು ನಿಮಿಷಗಳನ್ನು ತೆಗೆದುಕೊಳ್ಳಿ. ನೀವು ಸಾಗುತ್ತಿರುವ ದಾರಿ ಆ ದಿಕ್ಕಿನಲ್ಲಿದೆಯೇ ಎಂದು ಯೋಚಿಸಿ ನೋಡಿ.
ಹೊಸ ಹವ್ಯಾಸಗಳು
ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ವಿಶೇಷವಾಗಿ ಓದುವುದು ಮತ್ತು ಬರೆಯುವುದು. ಈ ಅಭ್ಯಾಸವನ್ನು ರೂಢಿ ಮಾಡಲು, ಪ್ರತಿದಿನ ಸಾಕಷ್ಟು ಸಮಯ ಓದವ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಓದಿದ ದಿನವನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಟಿಕ್ ಮಾಡಿ. ಈ ರೀತಿಯಾಗಿ ನೀವು ಹೊಸ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು.
ಸಂಬಂಧಗಳಿಂದ ದೂರವಿರಬೇಡಿ
ಜನರು ಕೆಲಸದಲ್ಲಿ ಒತ್ತಡದಲ್ಲಿ ಸಂಬಂಧಗಳನ್ನು ಮರೆತುಬಿಡುತ್ತಾರೆ. ಹೊಸ ವರ್ಷದಲ್ಲಿ ನೀವು ಅದನ್ನು ಮರೆಯಬಾರದು. 15 ದಿನಕ್ಕೊಮ್ಮೆಯಾದರೂ ನಿಮ್ಮ ಸಂಬಂಧಿಕರೊಂದಿಗೆ ಮಾತನಾಡಿ. ಜಾಸ್ತಿ ಬೇಡ, ಕನಿಷ್ಠ ಐದು ನಿಮಿಷವಾದರೂ ಮಾತನಾಡಿ. ಇದು ನಿಮ್ಮ ಜೀವನಕ್ಕೆ ಹೊಸ ಉತ್ತೇಜನವನ್ನು ನೀಡುತ್ತದೆ.
2024ನೇ ವರ್ಷ ಮುಗಿಯುವಷ್ಟರಲ್ಲಿ ನೀವು ಮಾಡಲೇಬೇಕಾದ ಕೆಲಸಗಳಿವು… Year End Special 2024
ಹುಚ್ಚಾಟ ಮೆರೆದ ಡ್ರೋನ್ ಪ್ರತಾಪ್ ಬಂಧನ! ಯಾವ ಪ್ರಕರಣದಡಿ ಕೇಸ್ ದಾಖಲು? ಹೀಗಿದೆ ವಿವರ…