ಹುಚ್ಚಾಟ ಮೆರೆದ ಡ್ರೋನ್ ಪ್ರತಾಪ್ ಬಂಧನ! ಯಾವ ಪ್ರಕರಣದಡಿ ಕೇಸ್​ ದಾಖಲು? ಹೀಗಿದೆ ವಿವರ...

ವಿಜಯವಾಣಿ - 2024-12-13T102728.974
Published on

Drone Prathap Arrest: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್​ 10ರ ರನ್ನರ್​ ಅಪ್ ಡ್ರೋನ್ ಪ್ರತಾಪ್​ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಿನ್ನೆ (ಡಿ.12) ರೈತರ ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟಿಸಿದ ಹಿನ್ನಲೆ ತಡರಾತ್ರಿ ಪ್ರತಾಪ್​ರನ್ನು ಪೊಲೀಸರು ಬಂಧಿಸಿದ್ದಾರೆ. ಎಫ್​ಐಆರ್​ ದಾಖಲಿಸಿಕೊಂಡಿದ್ದ ಖಾಕಿ ಪಡೆ, ತನಿಖೆ ಕೈಗೊಂಡಿದ್ದಾರೆ.

ಮಿಡಿಗೇಶಿ ಪೊಲೀಸ್ ಠಾಣೆ

ಕೃಷಿ ಹೊಂಡಕ್ಕೆ ರಾಸಾಯನಿಕ ಸೋಡಿಯಂ ಎಸೆಯುವ ಮೂಲಕ ಬ್ಲಾಸ್ಟ್​ ಮಾಡಿದ ಆರೋಪದಡಿ ಮಿಡಿಗೇಶಿ ಪೊಲೀಸರು ಪ್ರತಾಪ್​ರನ್ನು ಅರೆಸ್ಟ್ ಮಾಡಿದ್ದಾರೆ. ಸುಮೋಟೋ ಕೇಸ್​ನಡಿ ಎಫ್ಐಆರ್ ದಾಖಲಿಸಲಾಗಿದೆ.  ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯ ಅಧಿಕಾರಿಗಳು ಸದ್ಯ ಪ್ರತಾಪ್​ರನ್ನು ವಿಚಾರಣೆಗೆ ಒಳಪಡಿಸಿ, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಯೂಟ್ಯೂಬ್​ನಲ್ಲಿ ಅಪ್ಲೋಡ್​

ಬೆಂಗಳೂರಿನಲ್ಲಿ ಡ್ರೋನ್ ಪ್ರತಾಪ್​ರನ್ನು ಬಂಧಿಸಿರುವ ಖಾಕಿ ಪಡೆ, ಮಿಡಿಗೇಶಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದ್ದಾರೆ. ರೈತರ ಕೃಷಿಹೊಂಡದಲ್ಲಿ ಸೋಡಿಯಂ ಬಾಂಬ್ ಬ್ಲಾಸ್ಟ್ ಮಾಡಿ, ವಿಡಿಯೋವನ್ನು ತಮ್ಮ ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಿದ್ದರು. ಈ ದೃಶ್ಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ವಿಡಿಯೋ ಆಧರಿಸಿ ಎಫ್ಐಆರ್ ದಾಖಲಿಸಿದ್ದಾರೆ.

ಬಿಎನ್ಎಸ್ ಕಾಯ್ದೆ ಸೆಕ್ಷನ್ 288 ಮತ್ತು ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆ ಸೆಕ್ಷನ್ 3ರ ಅಡಿ ಎಫ್ಐಆರ್ ದಾಖಲಾಗಿದೆ. ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ರೈತರ ಕೃಷಿ ಹೊಂಡದಲ್ಲಿ ಪ್ರತಾಪ್ ಸೋಡಿಯಂ ಬ್ಲಾಸ್ಟ್ ಪ್ರಯೋಗ ಮಾಡಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net