ದಕ್ಷಿಣ ಭಾರತದಲ್ಲಿ ಯಾವ ಬಗೆಯ ಬಿರಿಯಾನಿ ತುಂಬಾ ಫೇಮಸ್​ ಗೊತ್ತಾ? ಇಲ್ಲಿದೆ ನೋಡಿ ಲೀಸ್ಟ್… ​

Biryani

ನಾನ್​ವೆಜ್​ ಅಂದರೆ ಅನೇಕರಿಗೆ ಪಂಚಪ್ರಾಣ. ಒಂದು ತುಂಡು ಮಾಂಸ ಸೇವಿಸದಿದ್ದರೂ ಆ ದಿನ ಕಂಪ್ಲೀಟ್​ ಆಗುವುದಿಲ್ಲ ಅನ್ನೋ ಭಾವನೆ ಅನೇಕರಲ್ಲಿದೆ. ನಾನ್​ವೆಜ್​ನಲ್ಲಿ ವೆರೈಟಿಗಳಿವೆ. ಅವುಗಳಲ್ಲಿ ಬಿರಿಯಾನಿ ಎಲ್ಲರ ನೆಚ್ಚಿನ ಆಹಾರವಾಗಿದೆ. ಈ ಪೋಸ್ಟ್‌ನಲ್ಲಿ ದಕ್ಷಿಣ ಭಾರತದಲ್ಲಿ ಯಾವೆಲ್ಲ ಬಿರಿಯಾನಿ ಹೆಚ್ಚು ಜನಪ್ರಿಯವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಬಿರಿಯಾನಿ ಹೆಸರು ಕೇಳಿದರೆ ಮಾಂಸಾಹಾರಿಗಳಿಗೆ ಬಾಯಲ್ಲಿ ನೀರು ಸುರಿಯುತ್ತದೆ. ಅಷ್ಟು ರುಚಿಕರವಾಗಿರುತ್ತದೆ ಈ ಖಾದ್ಯ. ಈ ಬಿರಿಯಾನಿಯಲ್ಲಿ ವೆಜ್ ಬಿರಿಯಾನಿ, ಮೊಟ್ಟೆ ಬಿರಿಯಾನಿ, ಫಿಶ್ ಬಿರಿಯಾನಿ, ಚಿಕನ್, ಮಟನ್, ಪ್ರಾನ್ ಹೀಗೆ ಹಲವು ವೆರೈಟಿಗಳಿವೆ. ಅಂದಹಾಗೆ ಬಿರಿಯಾನಿಯನ್ನು ಮೊದಲು ಇರಾನ್‌ನಲ್ಲಿ ಕಂಡುಹಿಡಿಯಲಾಯಿತು. ಬಳಿಕ ಇದನ್ನು ಮೊಘಲ್​ ಆಳ್ವಿಕೆ ಕಾಲದಲ್ಲಿ ಭಾರತಕ್ಕೆ ಪರಿಚಯಿಸಲಾಯಿತು.

ನಾವೀಗ ದಕ್ಷಿಣ ಭಾರತದಲ್ಲಿ ಪ್ರಸ್ತುತ ಯಾವ ಬಿರಿಯಾನಿ ಜನಪ್ರಿಯವಾಗಿದೆ ಎಂಬುದನ್ನು ತಿಳಿಯೋಣ.

ಹೈದರಾಬಾದಿ ಬಿರಿಯಾನಿ: ಈ ಬಿರಿಯಾನಿ ಹೈದರಾಬಾದ್‌ಗೆ ಹೆಮ್ಮೆ ತಂದಿದೆ. ಇದನ್ನು ಬಾಸುಮತಿ ಅಕ್ಕಿ ಮತ್ತು ಬಿರಿಯಾನಿ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಇದರ ಸುವಾಸನೆ ಮತ್ತು ರುಚಿ ಮತ್ತೊಂದು ಹಂತದಲ್ಲಿದೆ ಎಂದು ಹೇಳಬಹುದು. ದಕ್ಷಿಣ ಭಾರತಲ್ಲಿ ಈ ಬಿರಿಯಾನಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಾನ್​ವೆಜ್​ ಪ್ರಿಯರ ಮೊದಲ ಆಯ್ಕೆ ಇದೇ ಎಂದು ಹೇಳಬಹುದಾಗಿದೆ.

Hyderabadi Biryani

ತಲ್ಲಸ್ಸೆರಿ ಬಿರಿಯಾನಿ: ಇದು ಕೇರಳದ ಅತ್ಯಂತ ಜನಪ್ರಿಯ ಬಿರಿಯಾನಿಗಳಲ್ಲಿ ಒಂದಾಗಿದೆ. ಇದನ್ನು ಬಾಸುಮತಿ ಅಕ್ಕಿಯ ಬದಲಿಗೆ ಜೀರಾ ಅಕ್ಕಿಯಿಂದ ತಯಾರಿಸಲಾಗುತ್ತದೆ. ಈ ಅಕ್ಕಿ ದಕ್ಷಿಣ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ.

Thalassery Biryani

ಮಲಬಾರ್​ ಬಿರಿಯಾನಿ: ಈ ಬಿರಿಯಾನಿಯನ್ನು ಕೇರಳದ ಮಲಬಾರ್ ಪ್ರದೇಶದಲ್ಲಿ ಜೀರಿಗೆ ಅಕ್ಕಿ, ಬಿರಿಯಾನಿ ಮಸಾಲಾ ಮತ್ತು ತೆಂಗಿನ ಎಣ್ಣೆಯಿಂದ ತಯಾರಿಸಲಾಗುತ್ತದೆ. ಇದು ಕೂಡ ಬಹಳ ರುಚಿಯನ್ನು ಹೊಂದಿದೆ.

Malabar Biryani

ಕೋಯಿಕ್ಕೋಡ್​ ಬಿರಿಯಾನಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಈ ಬಿರಿಯಾನಿ ಬಹಳ ಜನಪ್ರಿಯವಾಗಿದೆ. ಈ ಬಿರಿಯಾನಿಯನ್ನು ಬಾಸುಮತಿ ಅಕ್ಕಿ ಮತ್ತು ಇತರ ಮಸಾಲೆಗಳ ಮಿಶ್ರಣದಿಂದ ಬೇಯಿಸಲಾಗುತ್ತದೆ.

Kozhikode Biryani

ಅಂಬೂರ್​ ಬಿರಿಯಾನಿ: ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬೂರದಲ್ಲಿ ಈ ಬಿರಿಯಾನಿ ಬಹಳ ಜನಪ್ರಿಯವಾಗಿದೆ. ಇದನ್ನು ಜೀರಿಗೆ ಸಾಂಬಾ ಅನ್ನ ಮತ್ತು ಬಿರಿಯಾನಿ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಕರ್ನಾಟಕದಲ್ಲೂ ಈ ಅಂಬೂರ್​ ಬಿರಿಯಾನಿ ಫೇಮಸ್​ ಆಗಿದೆ. ಇದಕ್ಕೆ ಸಂಬಂಧಿಸಿದ ಅನೇಕ ಹೋಟೆಲ್​ಗಳನ್ನು ನೀವು ಸಾಮಾನ್ಯವಾಗಿ ನೋಡಬಹುದಾಗಿದೆ.

Ambur Biryani

ಚೆಟ್ಟಿನಾಡ್​ ಬಿರಿಯಾನಿ: ಕಾರೈಕುಡಿ, ಚೆಟ್ಟಿನಾಡ್ ಬಿರಿಯಾನಿಗೆ ಹೆಸರುವಾಸಿಯಾಗಿದೆ. ರುಚಿಯಲ್ಲಿ ಖಾರವಾಗಿರುವ ಈ ಬಿರಿಯಾನಿಯನ್ನು ಸಾಂಬಾ ಅಕ್ಕಿ ಮತ್ತು ಬಿರಿಯಾನಿ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ.

Chettinad Biryani

ದಿಂಡಿಗಲ್​ ಬಿರಿಯಾನಿ: ಗುಣಮಟ್ಟದ ಬಿರಿಯಾನಿ ಎಂದರೆ ಅದು ದಿಂಡಿಗಲ್ ಬಿರಿಯಾನಿ. ಇದರ ರುಚಿ ಮತ್ತು ಪರಿಮಳ ಅಗಾಧವಾಗಿದ್ದು, ಇದನ್ನು ಜೀರಿಗೆ ಸಾಂಬಾ ಅನ್ನದೊಂದಿಗೆ ತಯಾರಿಸಲಾಗುತ್ತದೆ. (ಏಜೆನ್ಸೀಸ್​)

Dindigul Biryani

ಪ್ರತಿನಿತ್ಯವೂ ಪುದೀನಾ ಟೀ ಸೇವಿಸುವುದರಿಂದ ಇಷ್ಟೊಂದು ಲಾಭವಿದೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ…

ಯಾವುದೇ ಕಾರಣಕ್ಕೂ ಜೇನುತುಪ್ಪದ ಜತೆ ಈ ಆಹಾರಗಳನ್ನು ಸೇವಿಸಬೇಡಿ! ತಿಂದ್ರೆ ನಿಮ್ಮ ಆರೋಗ್ಯಕ್ಕೆ ಡೇಂಜರ್​

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…