ಪೌಷ್ಟಿಕಾಂಶದ ಪ್ರಮಾಣ ಮತ್ತು ರುಚಿ ಹೆಚ್ಚಿಸಲು ಸಾಮಾನ್ಯವಾಗಿ ಅಡುಗೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಕಾರಣ ಮನುಷ್ಯನಿಗೆ ಬಗೆ ಬಗೆಯ ಖಾದ್ಯಗಳನ್ನು ಸವಿಯುವ ಆಸೆ ಹೆಚ್ಚು. ಒಂದೇ ತಟ್ಟೆಯಲ್ಲಿ ತುಂಬಾ ವೆರೈಟಿ ಫುಡ್ ಇರಬೇಕೆಂಬುದು ಆಹಾರ ಪ್ರಿಯರ ಮಹದಾಸೆ. ಆದರೆ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಆಹಾರಗಳ ಸಂಯೋಜನೆ ಎಷ್ಟು ಒಳ್ಳೆಯದು? ಆಹಾರಗಳ ಸಂಯೋಜನೆ ಎಷ್ಟು ಅಪಾಯಕಾರಿ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಬಹುತೇಕರು ಯೋಚಿಸಿರುವುದೇ ಇಲ್ಲ. ಯಾವುದೇ ಕಾರಣಕ್ಕೂ ಕೆಲವೊಂದು ಆಹಾರಗಳನ್ನು ಒಟ್ಟಿಗೆ ಸೇವಿಸಬಾರದು. ಅದರಲ್ಲಿ ಜೇನುತುಪ್ಪವೂ ಕೂಡ ಒಂದು.
ಪ್ರಪಂಚದಲ್ಲಿ ಏಕೈಕ ಕೊಳೆಯದ ಆಹಾರ ಪದಾರ್ಥವೆಂದರೆ ಅದು ಜೇನುತುಪ್ಪ. ಸಾಮಾನ್ಯವಾಗಿ ಬೇರೆ ಆಹಾರ ಪದಾರ್ಥಗಳು ಸುಲಭವಾಗಿ ಕೆಟ್ಟು ಹೋಗುತ್ತವೆ. ಅದಕ್ಕಾಗಿಯೇ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಜೇನುತುಪ್ಪವು ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಜೇನುತುಪ್ಪವು ದೇಹಕ್ಕೆ ತುಂಬಾ ಒಳ್ಳೆಯದು ಏಕೆಂದರೆ ಇದು ವಿವಿಧ ಕಾಯಿಲೆಗಳಿಗೆ ಪರಿಹಾರವಾಗಿದೆ.
ಸಾಮಾನ್ಯವಾಗಿ ಪ್ರಯೋಜನಕಾರಿಯಾಗಿರುವ ಕೆಲವು ಆಹಾರಗಳು ಇತರ ಆಹಾರಗಳೊಂದಿಗೆ ಒಟ್ಟಿಗೆ ಸೇವಿಸಿದಾಗ ಆರೋಗ್ಯಕ್ಕೆ ಅಷ್ಟೇ ಪ್ರಮಾಣದಲ್ಲಿ ಹಾನಿಕಾರಕವಾಗಬಹುದು. ಆಹಾರಗಳು ತನ್ನದೇಯಾದ ಉತ್ತಮ ಗುಣಗಳನ್ನು ಹೊಂದಿದ್ದರು ಸಹ ಕೆಲವೊಮ್ಮೆ ಆಹಾರಗಳ ಸಂಯೋಜನೆ ಮಾರಕವಾಗಬಹುದು. ಅದೇ ರೀತಿ ಜೇನುತುಪ್ಪವನ್ನು ಕೆಲವೊಂದು ಆಹಾರಗಳ ಜತೆಗೆ ಸೇವಿಸಿದಾಗ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಹೀಗಾಗಿ ಜೇನುತುಪ್ಪವನ್ನು ಯಾವ್ಯಾವ ಆಹಾರದ ಜತೆ ಸೇವಿಸಬಾರದು ಎಂಬುದನ್ನು ಈ ಪೋಸ್ಟ್ ನಿಮಗೆ ತಿಳಿಸುತ್ತದೆ.
ಜೇನುತುಪ್ಪವನ್ನು ಎಂದಿಗೂ ಬಿಸಿ ಮಾಡಬಾರದು ಅಥವಾ ಬಿಸಿ ಪದಾರ್ಥಗಳೊಂದಿಗೆ ಬೆರೆಸಬಾರದು. ಇಲ್ಲವಾದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ತುಪ್ಪ ಮತ್ತು ಜೇನು ತುಪ್ಪವನ್ನು ಯಾವುದೇ ಕಾರಣಕ್ಕೂ ಮಿಶ್ರಣ ಮಾಡಬೇಡಿ. ತುಪ್ಪ ಮತ್ತು ಜೇನುತುಪ್ಪವನ್ನು ಪ್ರತ್ಯೇಕವಾಗಿ ತಿಂದರೆ ತುಂಬಾ ಪೌಷ್ಟಿಕವಾಗಿರುತ್ತವೆ. ಆದರೆ ತುಪ್ಪ ಮತ್ತು ಜೇನುತುಪ್ಪವು ಅಪಾಯಕಾರಿ ಸಂಯೋಜನೆಯಾಗಿದೆ. 2:1ರ ಅನುಪಾತದಲ್ಲಿ ತುಪ್ಪ ಮತ್ತು ಜೇನು ತುಪ್ಪ ಮಿಶ್ರಣ ಮಾಡುವುದು ಒಳ್ಳೆಯದು. ಆದರೆ, ಎರಡನ್ನೂ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ ಮಾರಕವಾಗಬಹುದು.
ಇನ್ನೂ ಮೂಲಂಗಿ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ವಿಷತ್ವ ಉಂಟಾಗುತ್ತದೆ. ಹಾಗಾಗಿ ಸಲಾಡ್ ಇತ್ಯಾದಿಗಳಿಗೆ ಜೇನುತುಪ್ಪವನ್ನು ಸೇರಿಸುವಾಗ, ಮೂಲಂಗಿಯನ್ನು ತಪ್ಪಿಸುವುದು ಕೂಡ ತುಂಬಾ ಮುಖ್ಯ. ಅದೇ ರೀತಿ ಜೇನುತುಪ್ಪ ಮತ್ತು ಮಾಂಸದ ಉತ್ಪನ್ನಗಳನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಈ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳಬಾರದು.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಈ 3 ಪ್ರಮುಖ ಕಾರಣಗಳಿಂದಲೇ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋತಿದ್ದು!
ವಿಷಕಾರಿ ಹಾವು ಕಡಿತ: ಆಸ್ಪತ್ರೆ ಬದಲು ಮಾಂತ್ರಿಕನನ್ನು ನಂಬಿ ಮಗನನ್ನು ಕಳೆದುಕೊಂಡ ಕುಟುಂಬ!