ರಾತ್ರಿ ಹೊತ್ತು ನೀವು ಮಾಡುವ ಈ ಸಣ್ಣ ತಪ್ಪುಗಳಿಂದ ನಿಮ್ಮ ದೇಹ ಬಲೂನ್​ನಂತೆ ಊದಿಕೊಳ್ಳುತ್ತೆ ಎಚ್ಚರ!

weight Gain (1)

ದಿನದಿಂದ ದಿನಕ್ಕೆ ತೂಕ ಹೆಚ್ಚಾಗುವುದು ಇಂದಿನ ಕಾಲದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಸಾಕಷ್ಟು ವೆರೈಟಿ ತಿಂಡಿಗಳು, ಒತ್ತಡ, ದಿನನಿತ್ಯದ ಕೆಟ್ಟ ಹವ್ಯಾಸಗಳಿಂದ ಈ ಆಧುನಿಕ ಜಗತ್ತಿನ ಅನೇಕ ಮಂದಿ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ದೇಹದ ತೂಕವನ್ನು ಕರಗಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕೆಟ್ಟ ಹವ್ಯಾಸಗಳಿಂದ ಎಷ್ಟೇ ಕಸರತ್ತು ಮಾಡಿದರೂ ತೂಕ ಮಾತ್ರ ಕಡಿಮೆಯಾಗುತ್ತಿಲ್ಲ.

ಈ ಅಧಿಕ ತೂಕಕ್ಕೆ ಕಾರಣ ನಿತ್ಯವೂ ನೀವು ಮಾಡುವ ಸಣ್ಣ ತಪ್ಪುಗಳು ಎಂಬುದನ್ನು ಗಮನದಲ್ಲಿಡಬೇಕು. ಅದರಲ್ಲೂ ವಿಶೇಷವಾಗಿ ರಾತ್ರಿಯಲ್ಲಿ ನೀವು ಮಾಡುವ ತಪ್ಪುಗಳಿಂದಾಗಿ, ಹೆಚ್ಚು ತೂಕವನ್ನು ಪಡೆಯುತ್ತೀರಿ. ಆ ತಪ್ಪುಗಳೇನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ತಿಳಿದುಕೊಂಡ ಬಳಿಕ ಅವುಗಳನ್ನು ತಪ್ಪಿಸುವುದರಿಂದ ನೀವು ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು.

1. ರಾತ್ರಿ ವೇಳೆ ಹೆಚ್ಚಿನ ಮಂದಿ ಊಟದ ಮೊದಲು ಮತ್ತು ನಂತರ ಕುರುಕಲು ತಿನಿಸುಗಳನ್ನು ತಿನ್ನುತ್ತಾರೆ. ವಾಸ್ತವವಾಗಿ ಈ ತಿಂಡಿಗಳನ್ನು ಸಂಜೆ 6 ಗಂಟೆಗೂ ಮೊದಲೇ ತಿನ್ನಬೇಕು. 6 ಗಂಟೆಯ ನಂತರ ಯಾವುದೇ ಕಾರಣಕ್ಕೂ ತಿಂಡಿ ಅಥವಾ ಜಂಕ್ ಫುಡ್ ತಿನ್ನಬೇಡಿ. ಒಂದು ವೇಳೆ ತಿಂದರೆ ನಿಮ್ಮ ತೂಕ ಸಹಜವಾಗಿಯೇ ಹೆಚ್ಚಾಗುತ್ತದೆ. ಯಾರೂ ಕೂಡ ಈ ತಪ್ಪು ಮಾಡಬಾರದು.

2. ಮಲಗುವ 6 ಗಂಟೆಗಳ ಮೊದಲು ಕಾಫಿ ಕುಡಿಯುವುದನ್ನು ತಪ್ಪಿಸಿ. ಕಾಫಿಯಲ್ಲಿರುವ ಕ್ಲೋರೊಜೆನಿಕ್ ಆಮ್ಲವು ತೂಕವನ್ನು ಹೆಚ್ಚಿಸಬಹುದು. ಅದರಲ್ಲೂ ರಾತ್ರಿ ಕಾಫಿ ಕುಡಿದರೆ ತೂಕ ಖಂಡಿತ ಹೆಚ್ಚುತ್ತದೆ. ಕಾಫಿಯ ಬದಲು ಹರ್ಬಲ್ ಟೀ ಕುಡಿದರೆ ತೂಕ ಇಳಿಸಿಕೊಳ್ಳಬಹುದು.

3. ಪ್ರತಿಯೊಬ್ಬರೂ ನಿಯಮಿತವಾಗಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ನಿದ್ರೆ ಸರಿಯಾಗಿಲ್ಲದಿದ್ದರೂ ತೂಕ ಹೆಚ್ಚಾಗುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಆದ್ದರಿಂದ ಪ್ರತಿಯೊಬ್ಬರಿಗೂ ಅಗತ್ಯಕ್ಕೆ ತಕ್ಕಷ್ಟು ನಿದ್ರೆ ಅವಶ್ಯಕ.

4. ಕನಿಷ್ಠ 15 ರಿಂದ 30 ನಿಮಿಷಗಳ ಕಾಲ ನಿಯಮಿತವಾಗಿ ವಾಕಿಂಗ್ ಮಾಡಬೇಕು. ಇದರಿಂದ ತೂಕ ಬಹಳಷ್ಟು ಕಡಿಮೆಯಾಗುತ್ತದೆ. ನೀವು ವ್ಯಾಯಾಮ ಮಾಡದಿದ್ದರೆ ಸಹಜವಾಗಿಯೇ ತೂಕ ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವ್ಯಾಯಾಮ ಮಾಡಿದರೆ ರಾತ್ರಿ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.

5. ರಾತ್ರಿ ವೇಳೆ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಬಳಕೆ ಕಡಿಮೆ ಮಾಡಬೇಕು. ಬೆಳಿಗ್ಗೆ ತನಕ ಟಿವಿ ನೋಡಬಾರದು. ಒಂದು ವೇಳೆ ನೋಡಿದರೆ ನಿದ್ರಾಹೀನತೆಯ ಸಮಸ್ಯೆ ಕಾಡುತ್ತದೆ. ಇದರಿಂದ ತೂಕವೂ ಸಹ ಹೆಚ್ಚಾಗುತ್ತದೆ.

6. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು. ಹಾಗೆಯೇ ಮಲಗುವ ಕೋಣೆಯಲ್ಲಿ ನೀಲಿ ಬಣ್ಣದ ಲೈಟ್ ಬಳಸಿದರೆ ಬೇಗ ನಿದ್ದೆ ಬರುತ್ತದೆ. ಇದರೊಂದಿಗೆ ನೀವು ಸಮಯಕ್ಕೆ ಮಲಗಬಹುದು. ಈ ರೀತಿ ಮಾಡುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಕಾಲಿನ ಹೆಬ್ಬೆರಳಿನಲ್ಲಿ ಕೂದಲು ಇದೆಯೇ? ನಿಮ್ಮ ಹೃದಯದ ಆರೋಗ್ಯದ ಗುಟ್ಟು ರಟ್ಟು! ಇಲ್ಲಿದೆ ಉಪಯುಕ್ತ ಮಾಹಿತಿ

ಅನ್ನ ತಿಂದರೆ ತೂಕ ಹೆಚ್ಚಾಗುತ್ತಾ? ಯಾವ ಸಮಯದಲ್ಲಿ ತಿನ್ನುವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ…

1 ದಿನಕ್ಕೆ ಇಷ್ಟು ಬಾಳೆಹಣ್ಣು ಮಾತ್ರ ತಿನ್ಬೇಕು: ಹೆಚ್ಚು ತಿಂದ್ರೆ ಇಷ್ಟೆಲ್ಲ ಸಮಸ್ಯೆ ಕಾಡುತ್ತೆ, ಈ ರೋಗಿಗಳು ತಿನ್ನಲೇಬಾರದು

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…