ಅನ್ನವು ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇದನ್ನು ವಿವಿಧ ರೀತಿಯಲ್ಲಿ ಸೇವಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಜನತೆಗೆ ಅನ್ನ ಪ್ರಮುಖವಾದ ಆಹಾರವಾಗಿದೆ. ನಿತ್ಯವೂ ಮೂರು ಹೊತ್ತು ಅನ್ನ ಸೇವಿಸುತ್ತಾರೆ. ಇದೆಲ್ಲದರ ನಡುವೆ ಅನ್ನದ ಬಗ್ಗೆ ಜನರಲ್ಲಿ ಒಂದು ಸಾಮಾನ್ಯ ನಂಬಿಕೆ ಇದೆ. ಅದೇನೆಂದರೆ, ಅನ್ನವನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದು ನಂಬಿದ್ದಾರೆ. ಅಲ್ಲದೆ, ಬೊಜ್ಜು ಕಡಿಮೆ ಮಾಡಲು ಅಥವಾ ತೂಕವನ್ನು ನಿಯಂತ್ರಿಸಲು ಜನರು ಸಾಮಾನ್ಯವಾಗಿ ಅನ್ನ ತಿನ್ನುವುದನ್ನು ಬಿಟ್ಟುಬಿಡುತ್ತಾರೆ.
ಅನ್ನ ತಿನ್ನುವುದರಿಂದ ನಿಜವಾಗಿಯೂ ತೂಕ ಹೆಚ್ಚಾಗುತ್ತಾ? ಅನ್ನ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ? ಅನ್ನ ಸೇವನೆಯು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಾವೀಗ ನಿಖರವಾದ ಉತ್ತರ ಕಂಡುಕೊಳ್ಳೋಣ.
ಅನ್ನ ತಿಂದರೆ ತೂಕ ಹೆಚ್ಚಾಗುತ್ತಾ?
ಅಕ್ಕಿಯು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇವು ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಬಿಳಿ ಅಕ್ಕಿ (ಸಂಸ್ಕರಿಸಿದ ಅಕ್ಕಿ) ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚು ಮತ್ತು ಕಡಿಮೆ ಫೈಬರ್ ಅನ್ನು ಹೊಂದಿರುತ್ತದೆ. ಅತಿಯಾಗಿ ಅನ್ನವನ್ನು ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಆದರೆ, ಅನ್ನವು ವಾಸ್ತವವಾಗಿ ತೂಕವನ್ನು ಹೆಚ್ಚಿಸುವುದಿಲ್ಲ. ಬದಲಿಗೆ ಅದು ತಿನ್ನುವ ಪ್ರಮಾಣ ಮತ್ತು ವಿಧಾನವನ್ನು ಅವಲಂಬಿಸಿರುತ್ತದೆ. ತಜ್ಞರ ಪ್ರಕಾರ ಸೀಮಿತ ಪ್ರಮಾಣದಲ್ಲಿ ಅನ್ನವನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ ಎನ್ನುತ್ತಾರೆ.
ಅನ್ನ ಸೇವಿಸುವ ಸರಿಯಾದ ವಿಧಾನ
ಬ್ರೌನ್ ರೈಸ್ ಅಥವಾ ಕೆಂಪು ಅಕ್ಕಿ, ಬಿಳಿ ಅಕ್ಕಿಗಿಂತ ಹೆಚ್ಚು ಫೈಬರ್, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿದೆ. ಕೆಂಪು ಅಕ್ಕಿ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ದೀರ್ಘಕಾಲ ಹಸಿವನ್ನು ತಡೆಯುತ್ತದೆ. ತೂಕವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಹೀಗಾಗಿ ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಗೆ ಹೆಚ್ಚಿನ ಆದ್ಯತೆ ಕೊಡಿ. ಬೇಳೆಕಾಳುಗಳು, ತರಕಾರಿಗಳು, ಸಲಾಡ್ ಅಥವಾ ಮೊಸರಿನೊಂದಿಗೆ ಅನ್ನವನ್ನು ತಿನ್ನಿರಿ. ಇವುಗಳು ನಿಮ್ಮ ಆಹಾರವನ್ನು ಸಮತೋಲನಗೊಳಿಸುತ್ತದೆ. ಆದರೆ, ಫ್ರೈಡ್ ರೈಸ್ ಅಥವಾ ಹೆಚ್ಚಿನ ಎಣ್ಣೆಯುಕ್ತ ಅನ್ನವನ್ನು ಆದಷ್ಟು ತಪ್ಪಿಸಿ.
ಅನ್ನ ತಿನ್ನಲು ಉತ್ತಮ ಸಮಯ
ಅನ್ನ ತಿನ್ನಲು ಉತ್ತಮ ಸಮಯವೆಂದರೆ ಮಧ್ಯಾಹ್ನದ ಊಟದ ಸಮಯದಲ್ಲಿ. ಈ ವೇಳೆ ದೇಹದ ಜೀರ್ಣ ಶಕ್ತಿ ಹೆಚ್ಚಾಗಿರುತ್ತದೆ. ಹೀಗಾಗಿ ಅನ್ನದ ಶಕ್ತಿಯನ್ನು ದಿನವಿಡೀ ಬಳಸಬಹುದು. ಒಂದು ವೇಳೆ ರಾತ್ರಿ ಅನ್ನ ತಿನ್ನುವುದಾದರೆ ಸ್ವಲ್ಪ ತಿನ್ನಿ. ಅನ್ನ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ರಾತ್ರಿಯಲ್ಲಿ ದೇಹದ ಚಯಾಪಚಯ ಕ್ರಿಯೆ ಕಡಿಮೆ ಇರುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ನಿಮ್ಮ ಲಿವರ್ ಸಂಪೂರ್ಣ ಕ್ಲೀನ್ ಆಗಬೇಕೆ? ಈ ಹಣ್ಣನ್ನು ನಿಯಮಿತವಾಗಿ ಮಿಸ್ ಮಾಡದೇ ಸೇವಿಸಿ