

ಯಾವುದೇ ಸೀಸನ್ಗಳಲ್ಲಿ ದೊರೆಯುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಒಂದು. ಪಪ್ಪಾಯಿ ಹಣ್ಣುಗಳು, ಬೀಜಗಳು ಮತ್ತು ಎಲೆಗಳನ್ನು ವಿವಿಧ ಪಾಕಶಾಲೆಯ ಮತ್ತು ಜಾನಪದ ಔಷಧ ಪದ್ಧತಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಪ್ಪಾಯಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಂದಲೂ ಎಲ್ಲರ ಮೊದಲ ಆಯ್ಕೆಯಾಗಿದೆ. ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಎಲೆಗಳು ಕೂಡ ವಿಶೇಷವಾದ ಗುಣಗಳನ್ನು ಹೊಂದಿದೆ.
ಪಪ್ಪಾಯಿಯ ರುಚಿ ಸಿಹಿ ಮತ್ತು ಹುಳಿ ಮಿಶ್ರಣವಾಗಿದೆ. ಕೆಲವೊಮ್ಮೆ ಮಾಗಿದ ಪಪ್ಪಾಯಿ ಹಣ್ಣುಗಳು ತುಂಬಾ ಸಿಹಿಯಾಗಿರುತ್ತವೆ. ಈ ಪಪ್ಪಾಯಿ ಪೌಷ್ಟಿಕಾಂಶಗಳ ಆಗರವಾಗಿದೆ. ನಿಯಮಿತವಾಗಿ ಪಪ್ಪಾಯಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಈ ಪಪ್ಪಾಯಿಯಲ್ಲಿ ವಿಟಮಿನ್ ಸಿ, ಫೈಬರ್, ವಿಟಮಿನ್ ಎ, ಫೋಲೆಟ್, ಪೊಟ್ಯಾಶಿಯಂ, ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಎಥೇಚ್ಚವಾಗಿದೆ. ಇದರಿಂದಾಗುವ ಅನುಕೂಲಗಳು ಏನು ಎಂಬುದನ್ನು ನಾವೀಗ ತಿಳಿಯೋಣ.
1. ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯಿ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು. ಲಿವರ್ನಲ್ಲಿರುವ ಕೆಟ್ಟ ಮತ್ತು ವಿಷಕಾರಿ ಪದಾರ್ಥಗಳನ್ನು ಇದು ತೆಗೆದುಹಾಕುತ್ತದೆ. ಇದರಿಂದ ಲಿವರ್ ಶುದ್ಧವಾಗುತ್ತದೆ.‘
2. ಮಲಬದ್ಧತೆ ಸಮಸ್ಯೆ ಇರುವವರು ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
3. ಪಪ್ಪಾಯಿಯಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ. ಅಲ್ಲದೆ ಇವುಗಳಲ್ಲಿರುವ ವಿಟಮಿನ್ ಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
4. ಪಪ್ಪಾಯಿ ಹಣ್ಣುಗಳಲ್ಲಿ ವಿಟಮಿನ್ ಬಿ1, ಬಿ2 ಮತ್ತು ನಿಯಾಸಿನ್ ಸಮೃದ್ಧವಾಗಿದೆ. ಆದ್ದರಿಂದ ಆಲಸ್ಯದಿಂದ ಬಳಲುತ್ತಿರುವವರು ಈ ಹಣ್ಣುಗಳನ್ನು ತಿಂದರೆ ಬೇಗ ಗುಣಮುಖರಾಗುತ್ತಾರೆ.
5. ಮೂತ್ರದ ಸಮಸ್ಯೆ ಇರುವವರು ಪಪ್ಪಾಯಿ ಹಣ್ಣನ್ನು ಪ್ರತಿನಿತ್ಯ ತಿಂದರೆ ಮೂತ್ರಕೋಶ ಶುದ್ಧವಾಗುತ್ತದೆ. ಮೂತ್ರ ಸರಾಗವಾಗಿ ಹರಿಯುತ್ತಿದೆ.
6. ಪಪ್ಪಾಯಿ ಹಣ್ಣಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಒಂದು ಪಪ್ಪಾಯಿ ಹಣ್ಣಿನಲ್ಲಿ ಕೇವಲ 120 ಕ್ಯಾಲೋರಿ ಇರುತ್ತದೆ. ಹೀಗಾಗಿ ತೂಕ ಇಳಿಕೆಗೂ ಪಪ್ಪಾಯಿ ಹಣ್ಣು ಸಹಕಾರಿಯಾಗಿದೆ.
7. ಪಪ್ಪಾಯಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಲು ಪಪ್ಪಾಯಿ ಹಣ್ಣು ಒಂದು ಉತ್ತಮ ಆಯ್ಕೆಯಾಗಿದೆ.
8. ಪಪ್ಪಾಯಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಚರ್ಮ ಮತ್ತು ಕೂದಲಿನ ಅಕಾಲಿಕ ವಯಸ್ಸನ್ನು ತಡೆಯಲು ಸಹಾಯ ಮಾಡುತ್ತದೆ.
9. ಪಪ್ಪಾಯಿಯಲ್ಲಿರುವ ಪೊಟ್ಯಾಶಿಯಂ ಅಂಶವು ರಕ್ತದೊತ್ತಡ ಮತ್ತು ದ್ರವ ಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.