blank

ನೀವಿದನ್ನು ನಿತ್ಯವೂ ಸೇವಿಸಿದರೆ ಸಕ್ಕರೆ ಕಾಯಿಲೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ!

Red rice porridge

ಪ್ರತಿಯೊಬ್ಬರಿಗೂ ರೋಗನಿರೋಧಕ ಶಕ್ತಿ ತುಂಬಾನೇ ಅವಶ್ಯಕ. ಒಂದು ವೇಳೆ ರೋಗನಿರೋಧಕ ಶಕ್ತಿ ಕಡಿಮೆಯಾದರೆ ಅದು ಹಲವಾರು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹೀಗಾಗಿ ಅವುಗಳನ್ನು ನಿಯಂತ್ರಿಸಲು ಅನೇಕ ಜನರು ಔಷಧಿಗಳ ಮೊರೆ ಹೋಗುತ್ತಾರೆ. ಆದರೆ, ಅತಿಯಾಗಿ ಔಷಧಿಗಳನ್ನು ಬಳಸಿದರೆ ಅದರಿಂದ ದೇಹಕ್ಕೆ ತೊಂದರೆಯೇ ಹೆಚ್ಚು. ಹೀಗಾಗಿ ಮನೆಯಲ್ಲೇ ಸಿಗುವ ಕೆಲವು ಆಹಾರ ಪದಾರ್ಥಗಳನ್ನು ತೆಗೆದುಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳು ದೂರ ಮಾಡಬಹುದು. ಅದರಲ್ಲಿ ಗಂಜಿಯೂ ಕೂಡ ಒಂದು. ಗಂಜಿ ತುಂಬಾ ಆರೋಗ್ಯಕರ.

ಮಾಮೂಲಿ ಅಕ್ಕಿಯ ಗಂಜಿಗಿಂತ ಕೆಂಪು ಅಕ್ಕಿಯ ಗಂಜಿ ತುಂಬಾನೇ ಒಳ್ಳೆಯದು. ಈ ಕೆಂಪು ಅಕ್ಕಿಯನ್ನು ಕೇರಳ ರೆಡ್ ರೈಸ್ ಎಂದೂ ಕರೆಯುತ್ತಾರೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿಟಮಿನ್ ಬಿ 12 ಜೊತೆಗೆ ವಿಟಮಿನ್​ ಸಿ, ಐರನ್​, ಮೆಗ್ನಿಶಿಯಂ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ತನ್ನ ಅದ್ಭುತ ಗುಣಲಕ್ಷಣಗಳಿಂದಾಗಿ ಆಯುರ್ವೇದದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಕೆಂಪು ಅಕ್ಕಿ ಗಂಜಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲೂ ಈ ಗಂಜಿಗೆ ಸ್ವಲ್ಪ ಮೆಂತ್ಯವನ್ನು ಸೇರಿಸಿದರೆ ಇನ್ನೂ ಒಳ್ಳೆಯದು. ಮೆಂತ್ಯವು ದೇಹದಲ್ಲಿ ಅತ್ಯುತ್ತಮವಾದ ಶಾಖವನ್ನು ಉತ್ಪಾದಿಸುವ ಗುಣಗಳನ್ನು ಹೊಂದಿದೆ. ಕೆಂಪು ಗಂಜಿಯಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಈಸ್ಟ್ರೊಜೆನ್ ಹಾರ್ಮೋನ್​ ನಿರ್ವಹಣೆಗೂ ಇದು ಸಹಕಾರಿ. ಇದರಲ್ಲಿ ಕಬ್ಬಿಣಾಂಶವೂ ಹೇರಳವಾಗಿದೆ.

ಇದು ಜೀರ್ಣಕ್ರಿಯೆಗೆ ಸಹಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿತಗೊಳಿಸುತ್ತದೆ. ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಸ್ತಮಾ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಚರ್ಮದ ಆರೋಗ್ಯಕ್ಕೂ ಉಪಕಾರಿ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಹೀಗೆ ಸಾಕಷ್ಟು ಪ್ರಯೋಜನಗಳನ್ನು ಕೆಂಪು ಅಕ್ಕಿ ಹೊಂದಿದೆ.

ಕೆಂಪು ಅಕ್ಕಿ ಗಂಜಿ ಮಾಡುವುದು ಹೇಗೆ?
ಈ ಗಂಜಿ ಮಾಡುವ ವಿಧಾನವೆಂದರೆ, ಒಂದು ಲೋಟ ಕೆಂಪು ಅಕ್ಕಿ ಮತ್ತು ಒಂದು ಚಮಚ ಮೆಂತ್ಯವನ್ನು ತೆಗೆದುಕೊಳ್ಳಿ. ಎರಡನ್ನು ತೊಳೆದು, ಚೆನ್ನಾಗಿ ಬೇಯಿಸಿ ಪಕ್ಕಕ್ಕೆ ಇಡಿ. ಎರಡರ ಮಿಶ್ರಣಕ್ಕೆ ಸ್ವಲ್ಪ ತೆಂಗಿನ ಹಾಲನ್ನು ಸೇರಿಸಿ. ನೀವು ಬಯಸಿದಲ್ಲಿ ಸಣ್ಣ ಈರುಳ್ಳಿಯನ್ನು ಕೂಡ ಸೇರಿಸಬಹುದು. ಇವುಗಳನ್ನು ಬೆರೆಸಿದ ನಂತರ ಸ್ವಲ್ಪ ಜೀರಿಗೆ, ಕರಿಮೆಣಸು ಹಾಗೂ ಉಪ್ಪು ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕೆಂಪು ಅಕ್ಕಿ ಗಂಜಿ ರೆಡಿ. ಬೆಳಗಿನ ಉಪಾಹಾರವಾಗಿ ಇದನ್ನು ತೆಗೆದುಕೊಳ್ಳುವುದು ಉತ್ತಮ. ಅಲ್ಲದೆ, ರಾತ್ರಿಯೂ ತೆಗೆದುಕೊಳ್ಳಬಹುದು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಊಟದಲ್ಲಿ ಬದನೆಕಾಯಿ ಕಂಡೊಡನೆ ಪಕ್ಕಕ್ಕಿಡುತ್ತೀರಾ? ಈ ವಿಚಾರ ತಿಳಿದ್ರೆ ಇನ್ನೆಂದೂ ಮಿಸ್​ ಮಾಡಲ್ಲ!

1963ರಲ್ಲಿ 1 ಲೀಟರ್​ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…