

ನೀವು ಗಮನಿಸಿರಬಹುದು ಕೆಲವರಿಗೆ ಕಾಲಿನ ಹೆಬ್ಬೆರಳಿನ ಮೇಲೆ ಕೂದಲು ಇರುತ್ತದೆ. ನಿಮಗೂ ಕಾಲ್ಬೆರಳಲ್ಲಿ ಕೂದಲು ಇದೆಯೇ? ಒಮ್ಮೆ ಪರಿಶೀಲಿಸಿ ನೋಡಿ. ಏಕೆಂದರೆ, ಇದು ಹೃದಯದ ಆರೋಗ್ಯಕ್ಕೂ ಇದು ಸಂಬಂಧಿಸಿದೆ. ಹೌದು ಕಾಲಿನ ಹೆಬ್ಬೆರಳಿನಲ್ಲಿರುವ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು.
ಸಾಮಾನ್ಯವಾಗಿ ಕೂದಲು ಬೆಳವಣಿಗೆಗೆ ಸಾಕಷ್ಟು ಪೋಷಕಾಂಶಗಳು ಅಗತ್ಯವಿದೆ. ಕೂದಲು ಚರ್ಮದ ಒಳಗೆ ಪ್ರಾರಂಭವಾಗುತ್ತದೆ. ಕೂದಲು ಬೆಳೆಯಲು ರಕ್ತದ ಸಹಾಯವೂ ಬೇಕು. ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳು ರಕ್ತದೊಂದಿಗೆ ಬೆರೆತು ಕೂದಲಿನ ಬುಡಕ್ಕೆ ತಲುಪುತ್ತವೆ. ಇದು ಕೂದಲಿನ ರಚನೆಗೆ ಕಾರಣವಾಗುತ್ತದೆ. ಜೀವಕೋಶಗಳು ನಿರ್ಮಾಣವಾದಂತೆ ಕೂದಲು ಬೆಳೆಯುತ್ತದೆ.
ನಮ್ಮ ದೇಹದಲ್ಲಿ ಕೂದಲು ಬೆಳೆಯಬೇಕಾದರೆ ಆ ಭಾಗಕ್ಕೆ ರಕ್ತ ಚೆನ್ನಾಗಿ ಪೂರೈಕೆಯಾಗಬೇಕು. ಕೆಲವರಿಗೆ ಹೆಬ್ಬೆರಳಿನ ಮೇಲ್ಭಾಗದಲ್ಲಿ ಕೂದಲು ಬೆಳೆಯುತ್ತದೆ. ಆದರೆ, ಕೆಲವರಲ್ಲಿ ಈ ರೀತಿ ಬೆಳೆಯುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಆ ಪ್ರದೇಶಕ್ಕೆ ರಕ್ತ ಪೂರೈಕೆ ಸರಿಯಾಗಿ ಆಗುವುದಿಲ್ಲ. ರಕ್ತ ಪೂರೈಕೆಯ ಕೊರತೆಗೆ ಕಾರಣವೆಂದರೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಅಡಚಣೆ ಉಂಟಾಗಿರುತ್ತದೆ.
ನಾವು ಆಹಾರವನ್ನು ಸೇವಿಸಿದಾಗ, ದೇಹದಲ್ಲಿ ಬಹಳಷ್ಟು ಕೊಬ್ಬು ಸಂಗ್ರಹವಾಗುತ್ತದೆ. ಈ ಕೊಬ್ಬು ಮೊದಲು ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ. ಕೊಬ್ಬು ಹೆಚ್ಚು ಶೇಖರಣೆಗೊಂಡರೆ, ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಇದು ಕೂದಲು ಬೆಳವಣಿಗೆಗೆ ಕಾರಣವಾಗುವುದಿಲ್ಲ. ನಾವು ಗಮನಿಸಿದಂತೆ ಕೆಲವರಲ್ಲಿ ತಲೆ ಮತ್ತು ತೋಳುಗಳ ಮೇಲೂ ಕೂದಲು ಇರುವುದಿಲ್ಲ. ಹಾಗಂತ ಅದನ್ನು ಹೃದಯದ ಆರೋಗ್ಯ ಲಿಂಕ್ ಮಾಡಲು ಆಗುವುದಿಲ್ಲ. ತಲೆ ಮತ್ತು ಕೈಗಳು ಹೃದಯಕ್ಕೆ ಹತ್ತಿರದಲ್ಲಿದೆ. ಆದರೆ ಕಾಲ್ಬೆರಳು ಹೃದಯದಿಂದ ದೂರವಿದೆ. ಆದ್ದರಿಂದ ನಾವು ಅದನ್ನು ಗಣನೆಗೆ ತೆಗೆದುಕೊಳ್ಳಬೇಕು.
ಹೆಬ್ಬೆರಳಿನಲ್ಲಿ ಕೂದಲು ಚೆನ್ನಾಗಿ ಬೆಳೆದರೆ ರಕ್ತ ಪೂರೈಕೆ ಚೆನ್ನಾಗಿದೆ ಎಂದರ್ಥ ಮತ್ತು ಹೃದಯದ ಆರೋಗ್ಯ ಚೆನ್ನಾಗಿದೆ ಎಂದರ್ಥ. ಇದು ಹೃದ್ರೋಗದ ಅಪಾಯ ಕಡಿಮೆ ಎಂಬ ಸೂಚನೆ ನೀಡುತ್ತದೆ. (ಏಜೆನ್ಸೀಸ್)