ನೀವು ಪ್ರತಿನಿತ್ಯ ಮಾಡುವ ಈ 8 ತಪ್ಪುಗಳಿಂದಲೇ ಅಪಾಯದಲ್ಲಿದೆ ನಿಮ್ಮ ಆರೋಗ್ಯ! ಈಗಲೇ ಎಚ್ಚೆತ್ತುಕೊಳ್ಳಿ

Health
Published on

ನಾವು ಅನುಸರಿಸುವ ಆಹಾರ ಪದ್ಧತಿ ಮತ್ತು ನಾವು ಅನುಸರಿಸುವ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯವು ಬದಲಾಗುತ್ತದೆ. ಪ್ರತಿನಿತ್ಯ ಆರೋಗ್ಯಕರ ಆಹಾರಗಳನ್ನು ಸೇವಿಸಿ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಇಲ್ಲದಿದ್ದರೆ ಅನೇಕ ರೋಗಗಳು ನಮ್ಮನ್ನು ಬಾಧಿಸುತ್ತವೆ. ಮೊದಲು ಕಾಣಿಸಿಕೊಳ್ಳುವ ಸಣ್ಣ ಆರೋಗ್ಯ ಸಮಸ್ಯೆಗಳು ನಂತರ ದೀರ್ಘಾವಧಿಯ ಸಮಸ್ಯೆಗಳಾಗಿ ಬದಲಾಗುತ್ತವೆ. ಸಾವು ಸಂಭವಿಸಿದರೂ ಅಚ್ಚರಿ ಇಲ್ಲ.

ಅಂದಹಾಗೆ ನಾವು ದಿನನಿತ್ಯ ಗೊತ್ತಿದ್ದು, ಗೊತ್ತಿಲದೇ ಕೆಲವು ತಪ್ಪುಗಳನ್ನು ಮಾಡುತ್ತಿದ್ದೇವೆ. ಅವುಗಳಿಂದ ನಮ್ಮ ಆರೋಗ್ಯ ಅಪಾಯದಲ್ಲಿ ಸಿಲುಕುತ್ತದೆ. ನಮ್ಮ ಕೈನಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿರುವುದು ನಿಜ. ನಾವು ಮಾಡುತ್ತಿರುವ ಆ ತಪ್ಪುಗಳು ಏನು ಎಂಬುದನ್ನು ನಾವೀಗ ತಿಳಿಯೋಣ.

1. ಒಂದು ದಿನಕ್ಕೆ ನಮ್ಮ ದೇಹಕ್ಕೆ ಬೇಕಾದಷ್ಟು ವಿಟಮಿನ್ ಡಿ ಅನ್ನು ಅನೇಕರು ಪಡೆಯುತ್ತಿಲ್ಲ. ವಿಟಮಿನ್ ಡಿ ಕೊರತೆಯು ಮೂಳೆಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ನಾವು ಹಲವಾರು ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ವಿಟಮಿನ್ ಡಿ ಪಡೆಯಲೇಬೇಕು. ಅದಕ್ಕಾಗಿ ಮೀನು, ಮೊಟ್ಟೆಯ ಹಳದಿ, ಅಣಬೆಗಳು, ಹಾಲು ಮತ್ತು ಕಿತ್ತಳೆ ರಸ ಸೇವಿಸಿ.

2. ಅನೇಕ ಜನರು ತಡರಾತ್ರಿಯಲ್ಲಿ ಮಲಗುತ್ತಾರೆ. ನಾವು ಮಾಡುವ ತಪ್ಪುಗಳಲ್ಲಿ ಇದು ಕೂಡ ಒಂದು. ಇದರಿಂದ ದೇಹಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಫೋನ್ ಅಥವಾ ಟಿವಿಗಳ ಮುಂದೆ ಹೆಚ್ಚು ಸಮಯ ಕಳೆಯುವುದು ತುಂಬಾ ಡೇಂಜರ್​. ಈ ಅಭ್ಯಾಸವನ್ನು ತಕ್ಷಣ ತಪ್ಪಿಸಬೇಕು. ಇಲ್ಲದಿದ್ದರೆ ಆರೋಗ್ಯ ಹಾಳಾಗುತ್ತದೆ.

3. ಅನೇಕ ಜನರು ದಿನನಿತ್ಯದ ಒತ್ತಡವನ್ನು ಎದುರಿಸುತ್ತಾರೆ. ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಈ ಒತ್ತಡವು ಅನೇಕ ರೋಗಗಳಿಗೆ ಕಾರಣವಾಗಬಹುದು. ವಿನಾಕಾರಣ ಒತ್ತಡಕ್ಕೆ ಸಿಲುಕದಿರಿ. ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಹೀಗಾಗಿ ಶಾಂತ ಮನೋಭಾವ ಇರಲಿ.

4. ಪ್ರತಿದಿನ ವ್ಯಾಯಾಮ ಮಾಡದಿರುವುದು ನಾವು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ. ವ್ಯಾಯಾಮ ಮಾಡದಿದ್ದರೆ ನಮ್ಮ ದೇಹವು ಹೆಚ್ಚು ಬಳಲುತ್ತದೆ. ಇದರಿಂದ ಅನೇಕ ರೋಗಗಳು ಬರುತ್ತವೆ. ಆದ್ದರಿಂದ ನೀವು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆಯಬೇಕು. ಇದರಿಂದ ಅನೇಕ ರೋಗಗಳನ್ನು ತಡೆಯಬಹುದು.

5. ಹೆಚ್ಚು ಸಕ್ಕರೆ ತಿನ್ನುವುದು ಕೂಡ ತಪ್ಪು. ಅನೇಕ ಜನರು ಪ್ರತಿನಿತ್ಯ ಹೆಚ್ಚು ಸಕ್ಕರೆ ತಿನ್ನುತ್ತಾರೆ. ಇದು ಅನೇಕ ರೋಗಗಳಿಗೆ ಮೂಲ ಕಾರಣವಾಗಿದೆ. ಆದ್ದರಿಂದ ಸಕ್ಕರೆಯನ್ನು ಕಡಿಮೆ ಮಾಡಬೇಕು.

6. ದಿನನಿತ್ಯ ಪ್ರಕೃತಿಯಲ್ಲಿ ಸಮಯ ಕಳೆಯದಿರುವುದು ಕೂಡ ತಪ್ಪು. ಹಿತಕರ ವಾತಾವರಣದಲ್ಲಿ ಹಸಿರನ್ನು ಎಂಜಾಯ್​ ಮಾಡುವ ಮೂಲಕ ಆರೋಗ್ಯವನ್ನು ಹೆಚ್ಚು ಸುಧಾರಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆದ್ದರಿಂದ ನೀವು ಪ್ರತಿದಿನ ಸ್ವಲ್ಪ ಸಮಯದವರೆಗೆ ಪ್ರಕೃತಿಯಲ್ಲಿ ನಡೆಯಬೇಕು. ಇದು ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

7. ಅನೇಕ ಜನರು ಹಾಸಿಗೆಯಲ್ಲಿ ಮಲಗಿರುವಾಗ ರಾತ್ರಿಯಲ್ಲಿ ತಮ್ಮ ಫೋನ್‌ಗಳನ್ನು ಬಳಸುತ್ತಾರೆ. ಇದು ಕೂಡ ತಪ್ಪು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಕೆಡುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ತಪ್ಪಿಸಬೇಕು.

8. ಅನೇಕ ಜನರು ಪ್ರತಿದಿನ ಸಾಕಷ್ಟು ನೀರು ಕುಡಿಯುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಯೂ ಉಂಟಾಗುತ್ತದೆ. ಆರೋಗ್ಯ ಹದಗೆಡಲಿದೆ. ಹಾಗಾಗಿ ಈ ತಪ್ಪನ್ನೂ ಮಾಡಬೇಡಿ. ಪ್ರತಿದಿನ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಬೇಕು. ಇದರಿಂದ ರೋಗಗಳನ್ನು ತಡೆಗಟ್ಟಬಹುದು. ಕನಿಷ್ಠ ಪಕ್ಷ 3 ರಿಂದ 4 ಲೀಟರ್​ ನೀರು ಕುಡಿಯಿರಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net