Pigeons Effects on liver : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಯಕೃತ್ತು ( ಲಿವರ್ ) ಸಮಸ್ಯೆಯು ಒಂದು. ಅತಿಯಾದ ಮದ್ಯಪಾನ ಸೇರಿದಂತೆ ಅನೇಕ ಕಾರಣಗಳಿಂದ ಈ ಲಿವರ್ ಸಮಸ್ಯೆ ಕಾಡುತ್ತದೆ. ಆದರೆ, ಪಾರಿವಾಳಗಳಿಂದಲೂ ಮನುಷ್ಯನ ಲಿವರ್ಗೆ ಹಾನಿಯಾಗುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು, ನಂಬಲೇಬೇಕು. ಪಾರಿವಾಳಗಳಿಂದ ಲಿವರ್ಗೆ ತೊಂದರೆ ಇದೆ. ಅದು ಹೇಗೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ ಅನೇಕ ಜನರು ಪಾರಿವಾಳಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಕೆಲವರು ಪಾರಿವಾಳಗಳ ಬಳಿ ಹೋಗಿ ಆಹಾರವನ್ನು ನೀಡಿದರೆ, ಇನ್ನು ಕೆಲವರು ತಮ್ಮ ಮನೆಯ ಮಹಡಿಯಲ್ಲಿ ಪಾರಿವಾಳಗಳಿಗೆ ಆಹಾರ ಮತ್ತು ನೀರನ್ನು ಇಡುವುದನ್ನು ನೀವು ನೋಡಿರುತ್ತೀರಿ. ಆದರೆ, ಪಾರಿವಾಳಗಳಿಂದ ಮನುಷ್ಯನ ಲಿವರ್ಗೆ ಹಾನಿಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಎಚ್ಚರಿಸಿವೆ.
ಪಾರಿವಾಳಗಳು ಹಾರಿಹೋದಾಗ, ಅವುಗಳ ಹಿಕ್ಕೆಗಳು ಗಾಳಿಯ ಮೂಲಕ ಸೋಂಕನ್ನು ಹರಡುತ್ತವೆ. ಹಿಕ್ಕೆಗಳಲ್ಲಿ ಮನುಷ್ಯನ ಯಕೃತ್ತನ್ನು ಹಾನಿಮಾಡುವ ಸೂಕ್ಷ್ಮಾಣು ಜೀವಿಗಳಿವೆ. ಉಸಿರಾಡುವಾಗ ಸೂಕ್ಷ್ಮಾಣು ಜೀವಿಗಳು ದೇಹದ ಒಳಗೆ ಸೇರಿ ಯಕೃತ್ತಿಗೆ ಹಾನಿ ಉಂಟುಮಾಡುತ್ತದೆ. ಅದರಲ್ಲೂ ಹೆಚ್ಚಿನ ಪ್ರಮಾಣದ ಪಾರಿವಾಳದ ಮಲಕ್ಕೆ ಆಗಾಗ ಒಡ್ಡಿಕೊಂಡರೆ, ಹಿಕ್ಕೆಗಳಲ್ಲಿರುವ ಕ್ರಿಪ್ಟೋಕಾಕಸ್‌ನಂತಹ ಶಿಲೀಂಧ್ರ ಜೀವಿಗಳು ಯಕೃತ್ತು ಸೇರಿ ದೇಹದಲ್ಲಿ ಸೋಂಕನ್ನು ಉಂಟುಮಾಡುತ್ತದೆ.
ಹಾಗೆ ನೋಡಿದರೆ ಪಾರಿವಾಳಗಳ ಹಿಕ್ಕೆಯಲ್ಲಿ ಎರಡು ರೀತಿಯ ಸೋಂಕುಗಳಿವೆ. ಒಂದು ಫಂಗಲ್ ಮತ್ತು ಇನ್ನೊಂದು ಬ್ಯಾಕ್ಟೀರಿಯಾ. ಇದು ಹೆಚ್ಚಾಗಿ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಯಾವುದೇ ವೈದ್ಯಕೀಯ ಸಮಸ್ಯೆ ಇರುವವರು ಕೂಡ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ಇವುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.
ಪಾರಿವಾಳಗಳ ಹಿಕ್ಕೆಗಳಿಂದ ನೇರ ಅಥವಾ ತಕ್ಷಣದ ಬೆದರಿಕೆ ಇಲ್ಲದಿದ್ದರೂ, ಹಿಕ್ಕೆಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕ್ರಿಪ್ಟೋಕೊಕಸ್ನಂತಹ ಶಿಲೀಂಧ್ರಗಳು, ಉಸಿರಾಟದ ಮೂಲಕ ಯಕೃತ್ತಿನ ಹಾನಿಗೆ ಕಾರಣವಾಗಬಹುದು. ಇದನ್ನು ಕ್ರಿಪ್ಟೋಕೊಕೋಸಿಸ್ ಎಂದು ಕರೆಯಲಾಗುತ್ತದೆ. ಅಂದರೆ, ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಮತ್ತು ಯಕೃತ್ತಿಗೆ ಹರಡುವ ಸೋಂಕು ಆಗಿದೆ. ಯಕೃತ್ತಿನ ಸಮಸ್ಯೆಗಳಲ್ಲದೆ, ಪಾರಿವಾಳದ ಹಿಕ್ಕೆಗಳಿಂದ ಚರ್ಮದ ಸೋಂಕುಗಳು ವಿಶೇಷವಾಗಿ ಅಲರ್ಜಿಗಳು ಉಂಟಾಗುತ್ತದೆ.
ಏನು ಮಾಡಬೇಕು?
ನಿಮ್ಮ ಮನೆಯ ಸುತ್ತಲೂ ನೀವು ಪಾರಿವಾಳಗಳನ್ನು ಹೊಂದಿದ್ದರೆ, ಸಂಭಾವ್ಯ ರೋಗಕಾರಕಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯಲು ಪಾರಿವಾಳಗಳ ಹಿಕ್ಕೆಗಳನ್ನು ತ್ವರಿತವಾಗಿ ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಹಿಕ್ಕೆಗಳನ್ನು ಸ್ವಚ್ಛಗೊಳಿಸುವಾಗ ಅದರ ಧೂಳಿನ ಕಣಗಳನ್ನು ಉಸಿರಾಡುವುದನ್ನು ತಡೆಯಲು ಮುಖವಾಡ ಮತ್ತು ಕೈಗವಸುಗಳನ್ನು ಧರಿಸಿ. ಪಾರಿವಾಳದ ಸಂಖ್ಯೆಯು ಅಧಿಕವಾಗಿದ್ದರೆ, ಪಕ್ಷಿ ನಿರೋಧಕ ತಂತ್ರಗಳನ್ನು ಅನುಸರಿಸಲು ತಜ್ಞರ ಸಲಹೆಯನ್ನು ಪರಿಗಣಿಸಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.
ಚಳಿಗಾಲ ಶುರುವಾಗ್ತಿದೆ ಜೇನುತುಪ್ಪ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮತ್ರ ಸುಳಿಯೋದೇ ಇಲ್ಲ! Honey in Winter
ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti