ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti

Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಚಾಣಕ್ಯ ಹೇಳಿದಂತೆ ನಡೆದುಕೊಂಡರೆ ಜೀವನವನ್ನು ಅದ್ಭುತವಾಗಿ ಪರಿವರ್ತಿಸಬಹುದು. ಚಾಣಕ್ಯನ ಪ್ರಕಾರ ಕೆಲವೊಂದು ವಿಷಯಗಳನ್ನು ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು. ಆ ವಿಚಾರಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಇದನ್ನೂ ಓದಿ: ಕೋಚಿಂಗ್​ಗೆ ಹಣವಿಲ್ಲದಿದ್ರೂ 7 ಸರ್ಕಾರಿ ಕೆಲ್ಸ ಗಿಟ್ಟಿಸಿದ ಈ ಯುವಕನ ಯಶೋಗಾಥೆಯೇ ಎಲ್ಲರಿಗೂ ಸ್ಫೂರ್ತಿ! Success Story

ಇಲ್ಲಿದೆ ಜೀವನದ ಗುಟ್ಟು... ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti

ನಿಮ್ಮ ಯಾವುದೇ ಯೋಜನೆಗಳನ್ನು ಹಂಚಿಕೊಳ್ಳಬೇಡಿ. ಪ್ರತಿಯೊಬ್ಬರೂ ಕೆಲವು ಯೋಜನೆಗಳನ್ನು ಹೊಂದಿರುತ್ತಾರೆ. ಇನ್ನೊಬ್ಬರಿಗೆ ಮೊದಲೇ ಹೇಳಬೇಡಿ. ಹೇಳಿದರೆ ಅದಕ್ಕೆ ಅಡಗ್ಡಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಯೋಜನೆ ಹೊಂದಿದ್ದಲ್ಲಿ ಅದು ಯಶಸ್ವಿಯಾದಾಗ ಮಾತ್ರ ಹೇಳಿಕೊಳ್ಳಿ. ಮೊದಲೇ ಹೇಳಿದರೆ ನಿಮ್ಮನ್ನು ಗೊಂದಲಕ್ಕೆ ದೂಡಬಹುದು. ಇದರಿಂದ ನಿಮಗೆ ಯಶಸ್ಸು ಸಿಗದೇ ಇರಬಹುದು ಎಚ್ಚರ.

ಇನ್ನು ನಿಮ್ಮ ಕಷ್ಟಗಳ ಬಗ್ಗೆ ಯಾರಿಗೂ ಹೇಳಬೇಡಿ. ನಿಮ್ಮ ತೊಂದರೆಗಳು ಇತರರಿಗೆ ನಗು ತರಿಸಬಹುದು. ಇನ್ನೊಬ್ಬರ ಬಳಿ ಹೇಳಿಕೊಂಡು ನಗಬಹುದು. ಇನ್ನೊಬ್ಬರ ಬಳಿ ಸಮಸ್ಯೆ ಹೇಳಿಕೊಂಡರೆ ತೊಂದರೆಯೇ ಹೆಚ್ಚು. ಇದನ್ನೇ ವೀಕ್​ನೆಸ್​ ಆಗಿ ಮಾಡಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಯನ್ನೂ ಯಾರೊಂದಿಗೂ ಹೇಳಿಕೊಳ್ಳಬಾರದು. ನಿಮ್ಮ ಬಳಿ ಹಣವಿಲ್ಲದಿದ್ದರೆ ಯಾರೂ ನಿಮಗೆ ಗೌರವ ಕೊಡುವುದಿಲ್ಲ. ಹಣ ಇಲ್ಲದಿದ್ದರೆ ಕೀಳಾಗಿ ನೋಡುವ ಜನರಿದ್ದಾರೆ.

ನಿಮ್ಮ ಕನಸುಗಳು ಮತ್ತು ನಿಮ್ಮ ಆಸೆಗಳ ಬಗ್ಗೆಯು ನೀವು ಎಂದಿಗೂ ಮಾತನಾಡಬಾರದು. ನಿಮ್ಮ ಕನಸು ಮತ್ತು ಆಸೆಗಳು ನಿಮ್ಮಲ್ಲೇ ಇರಲಿ ಮತ್ತು ನೀವೇ ಅನುಭವಿಸಿ, ಅದನ್ನು ಬಿಟ್ಟು ಯಾರಿಗೂ ಹೇಳಬೇಡಿ. ಯಾರೂ ಎಷ್ಟೇ ಆಪ್ತರಾಗಿರಲಿ ಈ ನಾಲ್ಕು ವಿಚಾರಗಳನ್ನು ಹೇಳಿಕೊಳ್ಳಬಾರದು. ಅದೇ ರೀತಿ ನಿಮ್ಮ ಪ್ರೀತಿಗೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದಲ್ಲ. ಅವುಗಳನ್ನು ರಹಸ್ಯವಾಗಿಡುವುದು ಉತ್ತಮ.

ನಿಮ್ಮ ಕೆಟ್ಟ ಅನುಭವಗಳ ಬಗ್ಗೆಯೂ ಇತರರಿಗೆ ಹೇಳಬೇಡಿ. ಹಾಗೆ ಹೇಳಿದರೆ ನಿಮ್ಮ ನೈತಿಕತೆ ಹಾಳಾಗುತ್ತದೆ. ಅಲ್ಲದೆ ಕೆಲವೊಮ್ಮೆ ನಿಮ್ಮ ಸಂತೋಷವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಮ್ಮ ಸಂತೋಷವು ಇತರರನ್ನು ಅಸೂಯೆ ಪಡುವಂತೆ ಮಾಡುತ್ತದೆ.

ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್​ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

10 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್ ರೀತಿ ಕೊಲ್ಲುವುದಾಗಿ ಸಿಎಂ ಯೋಗಿಗೆ ಬೆದರಿಕೆ! Yogi Adityanath

ಕೋಚಿಂಗ್​ಗೆ ಹಣವಿಲ್ಲದಿದ್ರೂ 7 ಸರ್ಕಾರಿ ಕೆಲ್ಸ ಗಿಟ್ಟಿಸಿದ ಈ ಯುವಕನ ಯಶೋಗಾಥೆಯೇ ಎಲ್ಲರಿಗೂ ಸ್ಫೂರ್ತಿ! Success Story

 

 

 

Share This Article

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…