ಚಳಿಗಾಲ ಶುರುವಾಗ್ತಿದೆ ಜೇನುತುಪ್ಪ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮತ್ರ ಸುಳಿಯೋದೇ ಇಲ್ಲ! Honey in Winter

Honey in Winter

Honey in Winter : ಚಳಿಗಾಲ ಇನ್ನೇನು ಶುರುವಾಗಲಿದೆ. ಈ ಚಳಿಗಾಲ ನಮ್ಮ ಚರ್ಮಕ್ಕೆ ತುಂಬಾನೇ ಹಾನಿಕಾರಕ. ಈ ಋತುವಿನಲ್ಲಿ ಚರ್ಮವು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ಇದಲ್ಲದೆ, ಶೀತ, ಕೆಮ್ಮು ಮತ್ತು ಜ್ವರದಂತಹ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ. ಹೀಗಾಗಿ ಇವುಗಳನ್ನು ತಡೆಯಲು ಜೇನುತುಪ್ಪ ತುಂಬಾನೇ ಉಪಯುಕ್ತವಾಗಿದೆ.

ಚಳಿಗಾಲದಲ್ಲಿ ಚರ್ಮದಲ್ಲಿನ ತೇವಾಂಶದ ನಷ್ಟ ಮತ್ತು ಚರ್ಮದ ಶುಷ್ಕತೆಯಿಂದ ಅನೇಕ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ಈ ಋತುವಿನಲ್ಲಿ ದೇಹಕ್ಕೆ ವಿಟಮಿನ್ ಡಿ ಅಗತ್ಯವಿದೆ. ಇಲ್ಲದಿದ್ದರೆ, ಅದರ ಪರಿಣಾಮ ಚರ್ಮದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಟಮಿನ್ ಡಿ ಕರಗುವ ವಿಟಮಿನ್ ಆಗಿದೆ. ಇದು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಚಳಿಗಾಲದಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ಯಾವ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

Do Not Mix Honey

* ಒಂದು ಚಮಚ ಜೇನುತುಪ್ಪವನ್ನು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಅದೂ ಅಲ್ಲದೆ, ಜೇನು ಮತ್ತು ನಿಂಬೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಸುಲಭವಾಗಿ ಯಾವುದೇ ಕಾಯಿಲೆ ಬರುವುದಿಲ್ಲ.

ಇದನ್ನೂ ಓದಿ: ನೀನು ಮುಸ್ಲಿಂ ಅಥವಾ ಹಿಂದುನಾ? 1ನೇ ತರಗತಿ ವಿದ್ಯಾರ್ಥಿ ಕೊಟ್ಟ ಉತ್ತರ ವೈರಲ್…Hindu or Muslim​

* ಒಂದು ಚಮಚ ಜೇನುತುಪ್ಪವನ್ನು ಒಂದು ಕಪ್ ಹರ್ಬಲ್ ಟೀಗೆ ಬೆರೆಸಿ ಸೇವಿಸಿದರೆ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ.

* ಜೇನುತುಪ್ಪವನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಅರ್ಧ ಚಮಚ ದಾಲ್ಚಿನ್ನಿ ಪುಡಿಯೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

Honey Health

* ಜೇನುತುಪ್ಪವನ್ನು ಸೇವಿಸುವುದರಿಂದ ಹಲ್ಲಿನ ಸಮಸ್ಯೆಗಳನ್ನೂ ನಿವಾರಿಸಬಹುದು. ಒಂದು ಚಮಚ ಜೇನುತುಪ್ಪವನ್ನು ಎರಡು ಚಮಚ ಆಪಲ್ ಸೈಡರ್ ವಿನೆಗರ್ ನೊಂದಿಗೆ ಬೆರೆಸಿ ಸೇವಿಸುವುದರಿಂದ ಸೈನಸ್ ಅನ್ನು ನಿಯಂತ್ರಣದಲ್ಲಿಡಬಹುದು.

* ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಚಳಿಗಾಲದಲ್ಲಿ ಬಿಸಿನೀರಿನ ಬದಲು ಬೆಚ್ಚಗಿನ ನೀರಿನ ಸ್ನಾನ ಮಾಡುವುದು ಉತ್ತಮ. ಇದಲ್ಲದೇ ಜೇನುತುಪ್ಪ ಸೇವನೆಯಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ಮಠ ಖ್ಯಾತಿಯ ನಿರ್ದೇಶಕ Guruprasad​ ಆತ್ಮಹತ್ಯೆಗೆ ಶರಣು

ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti

 

 

 

 

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…