ನೀನು ಮುಸ್ಲಿಂ ಅಥವಾ ಹಿಂದುನಾ? 1ನೇ ತರಗತಿ ವಿದ್ಯಾರ್ಥಿ ಕೊಟ್ಟ ಉತ್ತರ ವೈರಲ್...Hindu or Muslim​

Hindu or Muslim
Published on

Hindu or Muslim : ಧರ್ಮಗಳ ಹೆಸರಿನಲ್ಲಿ ಜನರು ಕಿತ್ತಾಡುತ್ತಿರುವ ಈ ಜಗತ್ತಿನಲ್ಲಿ ಅಜ್ನವ್ ಬೈಜು ಎಂಬ ಒಂದನೇ ತರಗತಿ ವಿದ್ಯಾರ್ಥಿ, ತನ್ನ ಮುಗ್ಧತೆ ಮತ್ತು ಮಾನವೀಯತೆಯ ಆಳವಾದ ದೃಷ್ಟಿಕೋನದಿಂದ ನೆಟ್ಟಿಗರ ಮನ ಗೆದ್ದಿದ್ದಾನೆ.

ತನ್ನ ಧಾರ್ಮಿಕ ಗುರುತಿನ ಬಗ್ಗೆ ಸಹಪಾಠಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರ ಬರೆದಿರುವ ಬಾಲಕನ ಡೈರಿ ಪುಟದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಡೈರಿಯಲ್ಲಿ ಬರೆದಿರುವ ಪ್ರಕಾರ, ಅಜ್ನವ್​ನನ್ನು ಸಹ ವಿದ್ಯಾರ್ಥಿಯೊಬ್ಬ, ನೀನು ಮುಸ್ಲಿಂ ಅಥವಾ ಹಿಂದುನಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ಬರೆದಿರುವ ಪುಟ್ಟ ಬಾಲಕ ಅಜ್ನವ್, ನಾನೊಬ್ಬ ಮನುಷ್ಯ ಎಂದಿದ್ದಾನೆ. ಈ ಬಗ್ಗೆ ತನ್ನ ತಾಯಿಯೊಂದಿಗೆ ಹೇಳಿಕೊಂಡಾಗ ಆಕೆ ಅಭಿನಂದಿಸಿದ್ದನ್ನು ಸಹ ಬಾಲಕ ಡೈರಿಯಲ್ಲಿ ಬರೆದುಕೊಂಡಿದ್ದಾನೆ.

ಬಾಲಕನ ಡೈರಿಯ ಪುಟದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಲ್ಲದೆ, ನೆಟ್ಟಿಗರ ಮೆಚ್ಚುಗೆಗೂ ಕಾರಣವಾಗಿದೆ. ಹಲವಾರು ಶೇರ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ.

ಅನೇಕ ನೆಟ್ಟಿಗರು ಬಾಲಕನಲ್ಲಿ ಏಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಹುಟ್ಟುಹಾಕಿರುವ ಪಾಲಕರನ್ನು ಹೊಗಳಿದರು. ಕೆಲವರು ಅಜ್ನವ್ ತನ್ನ ಪ್ರಬುದ್ಧ ದೃಷ್ಟಿಕೋನದಿಂದ ಭವಿಷ್ಯದ ಭರವಸೆಯನ್ನು ಪ್ರತಿನಿಧಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು ಅವನನ್ನು "ಸಣ್ಣ ದೇಹದಲ್ಲಿ ದೊಡ್ಡ ಚಿಂತಕ" ಎಂದು ಕರೆದಿದ್ದು, ಧಾರ್ಮಿಕ ವಿಭಜನೆಗಳನ್ನು ಮೀರಿದ ಅವರ ಪ್ರವೃತ್ತಿಯನ್ನು ಶ್ಲಾಘಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net