ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ವಿದ್ಯಾರ್ಥಿ ನೇಣಿಗೆ ಶರಣು

Student 1
Published on

ಮೈಸೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗಿರಿದರ್ಶಿನಿ ಬಡಾವಣೆಯಲ್ಲಿ ನಡೆದಿದೆ.

ಸುಚಿತ್ ಓಬಲೇಶ್ ರೈ (19) ಮೃತ ದುರ್ದೈವಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಇ ವಿದ್ಯಾರ್ಥಿಯಾಗಿದ್ದ. ಕರೊನಾ ರಜೆ ವೇಳೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಕ್ಸಾಂಗೆ ಸಿದ್ದತೆ ಮಾಡಿಕೊಂಡಿದ್ದ. ಇದಕ್ಕಾಗಿ ಕೊಡಗಿನ ಶಾಲೆಯಲ್ಲಿ ಟ್ರೈನಿಂಗ್​ ಸಹ ಪಡೆದಿದ್ದ.

ಆದರೆ, ಇದೀಗ ಯಾರು ಇಲ್ಲದ ವೇಳೆ ಸುಜಿತ್​ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net